ಬೆಂಗಳೂರು: ಪ್ರಜಾತಂತ್ರದ ಮೇಲೆ ನಂಬಿಕೆಯಿಟ್ಟು ನಕ್ಸಲರಿಗೆ ಬೆಂಬಲಕೊಡಲಿಲ್ಲ. ಜನ ಈಗ ರೊಚ್ಚಿಗೆದ್ದು ನಕ್ಸಲರಿಗೆ ಶರಣಾಗಬೇಕಾ ಹೇಳಿ ಎಂದು ಸದನದಲ್ಲಿ ಸರ್ಕಾರವನ್ನು ಶಾಸಕ ಸಿ.ಟಿ.ರವಿ ತರಾಟೆ ತೆಗೆದುಕೊಂಡರು.
ಹಾಸನಕ್ಕೆ ಹೆಚ್ಚಿನ ಅನುದಾನ ಕೊಟ್ಟಿದ್ದಕ್ಕೆ ನಮಗೆ ಬೇಸರವಿಲ್ಲ. ಆದರೆ ನಮ್ಮನ್ನು ಕಡೆಗಣಿಸಿದ್ದೇಕೆ? ಚಿಕ್ಕಮಗಳೂರು ಜಿಲ್ಲೆಯಲ್ಲಿ 5 ನದಿಗಳು ಹುಟ್ಟುತ್ತವೆ. ಆದರೆ ಬೇಸಿಗೆಯಲ್ಲಿ ನಾವು ನೀರಿಲ್ಲದೆ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನ್ಯಾಯವನ್ನು ನೋಡಿಕೊಂಡಿ ಸುಮ್ಮನಿರಲು ಜನ ನಮ್ಮನ್ನು ಕಳುಹಿಸಿಲ್ಲ. ಚಿಕ್ಕಮಗಳೂರು ಜಿಲ್ಲೆಗೆ ಇಎಸ್‍ಐ ಆಸ್ಪತ್ರೆ ಸೌಲಭ್ಯ ನೀಡಬೇಕು ಹಾಗೂ ಕಾಫಿ ಉದ್ಯಮವನ್ನು ಸೆಮಿ ಕೈಗಾರಿಕೆ ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.
Advertisement
ಕೊಟ್ಟವನು ಕೋಡಂಗಿ, ಇಸ್ಕೊಂಡೋನು ಈರಭದ್ರ ಎಂಬ ಸಾಲದ ಗಾದೆ ಮಾತು ಇದೆ. ಈಗ ಸಾಲ ಕಟ್ಟಿರುವ ರೈತರು ಕೋಡಂಗಿ, ಸಾಲ ಕಟ್ಟದವರು ಈರಭದ್ರ ಎಂಬಂತಾಗಿದೆ. ಇದರಿಂದ ಸಾಲ ಪಾವತಿ ಮಾಡಿರುವ ರೈತರಿಗೂ ಹಣ ಪಾವತಿಯಾಗಬೇಕು. ಬಜೆಟ್‍ನಲ್ಲಿ ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದ ಪ್ರಸ್ತಾಪವೇ ಇಲ್ಲ. ಇದು ಸಮದೃಷ್ಟಿಯ ಬಜೆಟ್ ಅಲ್ಲವೇ ಅಲ್ಲ ಎಂದು ಆರೋಪಿಸಿದರು.