ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸೋತ ಬಿಜೆಪಿ ನಾಯಕರು ಲೋಕಸಭೆ ಚುನಾವಣೆಗೆ (Lok Sabha Election) ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರ (Devegowda) ಮೂಲಕ ಹೈಕಮಾಂಡ್ (BJP High Command) ಬಳಿ ಟಿಕೆಟ್ ಲಾಬಿ ಮಾಡಲು ಪ್ಲ್ಯಾನ್ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಮಾಜಿ ಸಚಿವ ಸೋಮಣ್ಣ (V Somanna) ಸಿಟಿ ರವಿ (CT Ravi), ದೇವೇಗೌಡರು ಹಾಗೂ ಕುಮಾರಸ್ವಾಮಿಯನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸೋಲಿನ ಹತಾಶೆಯಿಂದ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕುತ್ತಲೇ ಬಂದಿರುವ ಸೋಮಣ್ಣ ದೇವೇಗೌಡರ ಮೂಲಕ ಬಿಜೆಪಿ ಹೈಕಮಾಂಡ್ ಬಳಿ ಟಿಕೆಟ್ ಗಿಟ್ಟಿಸಿಕೊಳ್ಳುವ ಕಸರತ್ತು ನಡೆಸುತ್ತಿದ್ದಾರೆ.
ಭೇಟಿಯ ರಹಸ್ಯ ಏನು?
ತುಮಕೂರು, ಬೆಂಗಳೂರು ಉತ್ತರದ ಮೇಲೆ ಸೋಮಣ್ಣ, ಸಿ.ಟಿ ರವಿ ಕಣ್ಣು ಇಟ್ಟಿದ್ದು ಈ ಎರಡು ಕ್ಷೇತ್ರಗಳು ಒಕ್ಕಲಿಗ ಪ್ರಾಬಲ್ಯ ಇರುವ ಕ್ಷೇತ್ರಗಳಾಗಿವೆ. ಇದನ್ನೂ ಓದಿ: ಇನ್ಮುಂದೆ ಮದುವೆ, ಪ್ರವಾಸಕ್ಕೆ ಸಿಗಲಿದೆ ಬಿಎಂಟಿಸಿ ಬಸ್ – ಯಾವ್ಯಾವ ಬಸ್‍ಗೆ ಎಷ್ಟು ರೇಟ್?
ತುಮಕೂರು, ಬೆಂಗಳೂರು ಉತ್ತರದಲ್ಲಿ ಗೆಲುವು ಸಾಧಿಸಬೇಕಾದರೆ ಜೆಡಿಎಸ್ ಬೆಂಬಲ ಬೇಕೇ ಬೇಕು. ಬಿಜೆಪಿ ಹೈಕಮಾಂಡ್ ಜೊತೆ ದೇವೇಗೌಡರು, ಹೆಚ್‌ಡಿಕೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ದೇವೇಗೌಡರ ಮಾತನ್ನು ಮೋದಿ, ಅಮಿತ್ ಶಾ ತಳ್ಳಿ ಹಾಕುವುದಿಲ್ಲ. ಈ ಕಾರಣಕ್ಕೆ ಇಬ್ಬರು ನಾಯಕರು ಜೆಡಿಎಸ್ ನಾಯಕರನ್ನು ಭೇಟಿ ಮಾಡಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.