ಚೆನ್ನೈ: ಐಪಿಎಲ್‍ನಲ್ಲಿ ಯಶಸ್ವಿ ತಂಡವಾಗಿ 4 ಬಾರಿ ಪ್ರಶಸ್ತಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ತಲಾ ಮಹೇಂದ್ರ ಸಿಂಗ್ ಧೋನಿಯನ್ನು ರೀಟೈನ್ ಮಾಡಿಕೊಳ್ಳಲು ಚೆನ್ನೈ ಫ್ರಾಂಚೈಸಿ ಮುಂದಾಗಿದೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ.
Advertisement
ಚೆನ್ನೈ ತಂಡದೊಂದಿಗೆ ಉತ್ತಮವಾದ ಬಾಂಧವ್ಯ ಹೊಂದಿರುವ ಧೋನಿ ಸಾಕಷ್ಟು ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ. ಚೆನ್ನೈ ತಂಡದ ಪರ ಧೋನಿ ಆಡುತ್ತಿರುವುದರಿಂದಾಗಿ ಧೋನಿ ಬಗ್ಗೆ ಅಲ್ಲಿನ ಕ್ರಿಕೆಟ್ ಪ್ರೇಮಿಗಳಿಗೆ ಸಾಕಷ್ಟು ಗೌರವವಿದೆ. ಧೋನಿ ಕೂಡ ತಮ್ಮ ಫ್ರಾಂಚೈಸಿ ಬಗ್ಗೆ ತುಂಬಾ ಅಭಿಮಾನ ಹೊಂದಿದ್ದಾರೆ. ಇದೀಗ 15ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ನಡೆಯಲಿದ್ದು ಈ ಹರಾಜಿನಲ್ಲಿ ಧೋನಿಯನ್ನು ಮತ್ತೆ ತಂಡದಲ್ಲಿ ಉಳಿಸಿಕೊಳ್ಳಲು ಚೆನ್ನೈ ತಂಡ ನಿರ್ಧರಿಸಿರುವ ಬಗ್ಗೆ ವರದಿಯಾಗಿದೆ. ಆದರೆ ಧೋನಿ ಜೊತೆ ಚೆನ್ನೈ ತಂಡದ ಪರ ಆಡುತ್ತಿರುವ ಆತ್ಮೀಯ ಸ್ನೇಹಿತ ಸುರೇಶ್ ರೈನಾರನ್ನು ಕೈ ಬಿಡಲು ಫ್ರಾಂಚೈಸಿ ನಿರ್ಧರಿಸಿದೆ. ಇದನ್ನೂ ಓದಿ: ಗೆಳತಿ ನಿಖಿತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡಿಗ ಶ್ರೇಯಸ್ ಗೋಪಾಲ್
Advertisement
Advertisement
ಧೋನಿ ಈ ಹಿಂದೆ ಮೆಗಾ ಹರಾಜಿನಲ್ಲಿ ನನ್ನ ಪರ ಹಣ ಹಾಕಬೇಡಿ ಎಂದು ಚೆನ್ನೈ ಫ್ರಾಂಚೈಸಿಯೊಂದಿಗೆ ಕೇಳಿಕೊಂಡಿದ್ದರು. ಆದರೆ ಫ್ರಾಂಚೈಸಿ ಮಾತ್ರ ಧೋನಿಯನ್ನು ಬಿಟ್ಟುಕೊಡಲು ಒಪ್ಪುತ್ತಿಲ್ಲ. ಮುಂದಿನ ಐಪಿಎಲ್‍ನ ನಿಯಮದ ಪ್ರಕಾರ ಈಗಿರುವ ತಂಡಗಳಲ್ಲಿ 4 ಜನ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದೆ. ಚೆನ್ನೈ ತಂಡ ಧೋನಿ, ರವೀಂದ್ರ ಜಡೇಜಾ, ಋತುರಾಜ್ ಗಾಯಗ್ವಾಡ್, ಮೊಯಿನ್ ಅಲಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಪ್ಲಾನ್ ಮಾಡಿದೆ.
Advertisement
ಈ ನಡುವೆ ಧೋನಿ ಚಿಪಾಕ್‍ನಲ್ಲಿ ಚೆನ್ನೈ ತಂಡದ ಪರ ಕೊನೆಯ ಪಂದ್ಯವನ್ನಾಡಿ ಐಪಿಎಲ್‍ಗೆ ನಿವೃತ್ತಿ ಘೋಷಿಸಬೇಕೆಂಬ ಮನದಾಸೆಯಲ್ಲಿದ್ದಾರೆ. ಈ ಮನದಾಸೆಯ ಪೂರೈಕೆ ವೇಳೆ ಆತ್ಮೀಯ ಸ್ನೇಹಿತ ರೈನಾ ಕೂಡ ಜೊತೆಗಿದ್ದರೆ ಅದು ಇನ್ನಷ್ಟು ಸಂತೋಷವಾಗಿರುತ್ತದೆ ಹಾಗಾಗಿ ರೈನಾ ಕೂಡ ತಂಡದಲ್ಲಿರಲಿ ಎಂಬುದು ಅಭಿಮಾನಿಗಳ ಮನದಾಸೆಯಾಗಿದೆ. ಇದನ್ನೂ ಓದಿ: ಗಿಲ್, ಅಯ್ಯರ್, ಜಡೇಜಾ ಅರ್ಧಶತಕ – ಮೊದಲ ದಿನದ ಗೌರವ ಪಡೆದ ಟೀಂ ಇಂಡಿಯಾ