ಚೆನ್ನೈ: ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‍ಪಿಎಲ್) ಆರನೇ ಆವೃತ್ತಿ ಆರಂಭಗೊಂಡಿದ್ದು, ಚೆಪಾಕ್ ಸೂಪರ್ ಗಿಲ್ಲೀಸ್ ಮತ್ತು ನೆಲ್ಲೈ ರಾಯಲ್ ಕಿಂಗ್ಸ್ ತಂಡಗಳ ನಡುವೆ ಟೂರ್ನಿಯ ಮೊದಲ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಗಿಲ್ಲೀಸ್ ತಂಡದ ಆಟಗಾರ ಎನ್.ಜಗದೀಶನ್ ನೆಲ್ಲೈ ರಾಯಲ್ ಕಿಂಗ್ಸ್ ಬೌಲರ್ ಬಾಬಾ ಅಪರಾಜಿತ್ ಮಂಕಡ್ ಮೂಲಕ ಔಟ್ ಮಾಡಿದ್ದಕ್ಕೆ ಮಧ್ಯದ ಬೆರಳು ತೋರಿಸಿ ಅನುಚಿತ ವರ್ತನೆ ತೋರಿದ್ದಾರೆ.
Advertisement
ಎನ್. ಜಗದೀಶನ್ ಚೆನ್ನೈ ಸೂಪರ್ ಗಿಲ್ಲೀಸ್ ಪರ ಆರಂಭಿಕನಾಗಿ ಕಣಕ್ಕಿಳಿದು 25 ರನ್ (15 ಎಸೆತ, 4 ಬೌಂಡರಿ) ಸಿಡಿಸಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ದಾಳಿಗಿಳಿದ ಬಾಬಾ ಅಪರಾಜಿತ್ ಮಂಕಡ್ ರನ್ ಔಟ್ ಮೂಲಕ ಜಗದೀಶನ್‍ರನ್ನು ಔಟ್ ಮಾಡಿದರು. ಇದರಿಂದ ತೀವ್ರ ಬೇಸರಕ್ಕೊಳಗಾದ ಜಗದೀಶನ್ ಡಗೌಟ್‍ಗೆ ತೆರಳುವ ಮುನ್ನ ಬೌಲರ್‌ಗೆ ಮಧ್ಯದ ಬೆರಳನ್ನು ತೋರಿಸಿ ಹತಾಶೆಯಿಂದ ಹೊರ ನಡೆದರು. ಇದನ್ನೂ ಓದಿ: ಮಂಕಡ್‌ಗೆ ಸಮ್ಮತಿ – ಬಾಲ್ ಎಸೆಯುವ ಮುನ್ನ ನಾನ್‍ಸ್ಟ್ರೈಕ್ ಬಿಟ್ಟರೆ ಉಳಿಗಾಲವಿಲ್ಲ
Advertisement
Advertisement
ಕ್ರಿಕೆಟ್ ನಿಯಮದ ಪ್ರಕಾರ ಇದೀಗ ಮಂಕಡ್ ರನ್ ಔಟ್ ಅಧಿಕೃತವೆಂದು ಘೋಷಿಸಲಾಗಿದೆ. ಆದರೂ ಮಂಕಡ್ ರನ್ ಔಟ್‍ನಿಂದಾಗಿ ಹತಾಶರಾದ ಜಗದೀಶನ್ ಮೈದಾನದಲ್ಲೇ ದುರ್ವತನೆ ತೋರಿದ್ದಾರೆ. ಈ ವರ್ತನೆಗೆ ಕಂಡ ಕ್ರಿಕೆಟ್ ಪ್ರೇಮಿಗಳು ಕಿಡಿಕಾರುತ್ತಿದ್ದು, ಸಮಾಜಿಕ ಜಾಲತಾಣದಲ್ಲಿ ಜಗದೀಶನ್ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಶಮಿ ಮಿಂಚಿನ ಬೌಲಿಂಗ್‌ಗೆ ಪೂಜಾರ ಡಕ್‌ಔಟ್ – ತಬ್ಬಿ ಸಂಭ್ರಮಿಸಿದ ಟೀಂ ಇಂಡಿಯಾ ವೇಗಿ
Advertisement
Got it ???? pic.twitter.com/80f90xltm6
— Prudvk kumar (@Im_PrudvK) June 23, 2022
ಈ ಪ್ರಸಂಗದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಜಗದೀಶನ್, ನಿನ್ನೆಯ ಪಂದ್ಯದಲ್ಲಿ ನನ್ನ ವರ್ತನೆಯಿಂದ ನಿಮಗೆಲ್ಲರಿಗೂ ಬೇಸರವಾಗಿರಬಹುದು. ಈ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ. ನಾನು ಯಾವಾಗಲೂ ಕ್ರಿಕೆಟ್‍ಗಾಗಿ ಬದುಕುತ್ತೇನೆ. ನನಗೆ ಕ್ರಿಕೆಟ್ ಮತ್ತು ಆಟಗಾರರ ಮೇಲೆ ಗೌರವವಿದೆ. ಆದರೆ ನಿನ್ನಯ ಪಂದ್ಯದಲ್ಲಿ ನಡೆದ ಆ ಘಟನೆಯಿಂದ ಕೋಪಗೊಂಡು ಈ ರೀತಿ ವರ್ತಿಸಿದ್ದೇನೆ ಕ್ಷಮಿಸಿ ಎಂದು ಕ್ಷಮಾಪಣೆ ಕೇಳಿದ್ದಾರೆ. ಇದನ್ನೂ ಓದಿ: ಐಪಿಎಲ್‍ನಿಂದ ಔಟ್ ಆಗಿದ್ದ ಅಂಪೈರ್ ಅಸಾದ್ ರೌಫ್ ಇದೀಗ ಪಾಕ್‍ನಲ್ಲಿ ಚಪ್ಪಲಿ ವ್ಯಾಪಾರಿ
— Jagadeesan (@Jagadeesan_200) June 24, 2022
ಎನ್. ಜಗದೀಶನ್ ಐಪಿಎಲ್‍ನಲ್ಲಿ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದು, 15ನೇ ಆವೃತ್ತಿ ಐಪಿಎಲ್‍ನಲ್ಲಿ ಕೆಲ ಪಂದ್ಯಗಳಲ್ಲಿ ಜಗದೀಶನ್ ಆರಂಭಿಕರಾಗಿ ಕಣಕ್ಕಿಳಿದ್ದಿದ್ದರು.
ಚೆಪಾಕ್ ಸೂಪರ್ ಗಿಲ್ಲೀಸ್ ಮತ್ತು ನೆಲ್ಲೈ ರಾಯಲ್ ಕಿಂಗ್ಸ್ ತಂಡಗಳ ನಡುವಿನ ಟೂರ್ನಿಯ ಮೊದಲ ಪಂದ್ಯವೇ ಸೂಪರ್ ಓವರ್ ರೋಚಕತೆಗೆ ಸಾಕ್ಷಿಯಾಯಿತು. ಮೊದಲು ಬ್ಯಾಟಿಂಗ್ ಮಾಡಿದ ನೆಲ್ಲೈ ರಾಯಲ್ ಕಿಂಗ್ಸ್ 20 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 184 ರನ್ ಕಲೆಹಾಕಿತು. ಬಳಿಕ 185 ರನ್‍ಗಳ ಗುರಿಯನ್ನು ಬೆನ್ನತ್ತಿದ ಚೆಪಾಕ್ ಸೂಪರ್ ಗಿಲ್ಲಿಸ್ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಕಲೆಹಾಕಿ ಮ್ಯಾಚ್ ಟೈ ಮಾಡಿಕೊಂಡಿತು. ನಂತರ ನಡೆದ ಸೂಪರ್ ಓವರ್‌ನಲ್ಲಿ ಚೆನ್ನೈ ಸೂಪರ್ ಗಿಲ್ಲೀಸ್ ವಿರುದ್ಧ ನೆಲ್ಲೈ ರಾಯಲ್ ಕಿಂಗ್ಸ್ ಜಯ ಸಾಧಿಸಿತು.
Live Tv