– ಕೊಹ್ಲಿ 700 ರನ್; ಡುಪ್ಲೆಸಿ ಅರ್ಧಶತಕ – ಸಿಎಸ್‌ಕೆಗೆ 219 ರನ್ ಗುರಿ
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟರ್‌ಗಳು ಅಬ್ಬರಿಸಿದರು. ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಬೆಂಗಳೂರು ತಂಡ ಚೆನ್ನೈಗೆ 219 ರನ್‌ಗಳ ಗುರಿ ನೀಡಿದೆ. ಚೆನ್ನೈ ಪ್ಲೇ-ಆಫ್ ಪ್ರವೇಶಿಸಲು 201 ರನ್ ಅಷ್ಟೇ ಬೇಕಿದೆ.
Advertisement
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗೆ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಉತ್ತಮ ಶುಭಾರಂಭ ನೀಡಿದ ಆರ್‌ಸಿಬಿ ಬ್ಯಾಟರ್‌ಗಳು ಚೆನ್ನೈ ಬೌಲರ್‌ಗಳನ್ನು ದಂಡಿಸಿದರು.
Advertisement
Advertisement
3 ಓವರ್‌ಗೆ 31 ರನ್ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಕೆಲಹೊತ್ತಿನಲ್ಲಿ ಮತ್ತೆ ಪಂದ್ಯ ಪುನಾರಂಭವಾಯಿತು. 6.4 ಓವರ್‌ನಲ್ಲಿ ಕೊಹ್ಲಿ ಮತ್ತು ಡು ಪ್ಲೆಸಿಸ್ 50 ರನ್‌ಗಳ ಜೊತೆಯಾಟವಾಡಿದರು. ಹೊಡಿಬಡಿ ಆಟವಾಡುತ್ತಿದ್ದ ಕೊಹ್ಲಿ ಅರ್ಧಶತಕ ವಂಚಿತರಾಗಿ (47 ರನ್, 29 ಬಾಲ್, 3 ಫೋರ್, 4 ಸಿಕ್ಸರ್) ಔಟಾದರು.
Advertisement
ಇತ್ತ ಜವಾಬ್ದಾರಿಯುತ ಆಟವಾಡಿದ ಡು ಪ್ಲೆಸಿಸ್ ಅರ್ಧಶತಕ (54 ರನ್, 39 ಬಾಲ್, 3 ಫೋರ್, 3 ಸಿಕ್ಸರ್) ಬಾರಿಸಿದರು. ಆದರೆ ವಿವಾದಾತ್ಮಕ ರನೌಟ್ ತೀರ್ಪಿಗೆ ಔಟ್ ಆಗಿ ಪೆವಿಲಿಯನ್ ಸೇರಿದರು.
ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ರಜತ್ ಪಾಟೀದಾರ್ 41 ರನ್ ಸಿಡಿಸಿ (23 ಬಾಲ್, 2 ಫೋರ್, 4 ಸಿಕ್ಸರ್) ಸವಾಲಿನ ಮೊತ್ತ ಪೇರಿಸಲು ತಂಡಕ್ಕೆ ನೆರವಾದರು. ಕ್ರೀಸ್‌ಗೆ ಬಂದ ಯಾವೊಬ್ಬ ಬ್ಯಾಟರ್ ಕೂಡ ನಿರಾಸೆ ಮೂಡಿಸಲಿಲ್ಲ. ಕ್ಯಾಮರೂನ್ ಗ್ರೀನ್ (38), ದಿನೇಶ್ ಕಾರ್ತಿಕ್ (14) ರನ್ ಗಳಿಸಿದರು.
ಫಾರ್ಮ್ ಕಳೆದುಕೊಂಡು ನಿರಾಸೆ ಮೂಡಿಸಿದ್ದ ಮ್ಯಾಕ್ಸ್‌ವೆಲ್ ಇಂದಿನ ಪಂದ್ಯದಲ್ಲಿ ಸ್ವಲ್ಪ ಹೊತ್ತು ಆಡಿದರೂ ಗಮನ ಸೆಳೆದರು. ಕೇವಲ 5 ಬಾಲ್‌ಗಳಿಗೆ 2 ಫೋರ್ ಮತ್ತು 1 ಸಿಕ್ಸ್‌ನೊಂದಿಗೆ 16 ರನ್ ಸಿಡಿಸಿದರು. ದೊಡ್ಡ ಹೊಡೆತಕ್ಕೆ ಮುಂದಾಗಿ ಧೋನಿಗೆ ಕ್ಯಾಚ್ ನೀಡಿದರು. ನೋಬಾಲ್ ಮತ್ತು ವೈಡ್ ಸೇರಿ ಆರ್‌ಸಿಬಿಗೆ 8 ರನ್ ಹೆಚ್ಚುವರಿಯಾಗಿ ಬಂತು.
ಚೆನ್ನೈ ಪರ ಶಾರ್ದೂಲ್ ಠಾಕೂರ್ 2 ಹಾಗೂ ತುಷಾರ್ ದೇಶಪಾಂಡೆ, ಮಿಚೆಲ್ ಸ್ಯಾಂಟ್ನರ್ ತಲಾ 1 ವಿಕೆಟ್ ಕಿತ್ತರು.