ಬೆಂಗಳೂರು/ಮಂಡ್ಯ: ಕಾಂಗ್ರೆಸ್ ಹಿರಿಯ ಮುಖಂಡ ಜಿ ಮಾದೇಗೌಡರು ಸಿ ಎಸ್ ಪುಟ್ಟರಾಜು ಅವರಿಗೆ ಕರೆ ಮಾಡಿ ಹಣ ಕೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿರುವ ಕುರಿತಂತೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮಾತನಾಡಿರುವುದು ಸತ್ಯ. ಚುನಾವಣಾ ಪ್ರಚಾರಕ್ಕೆ ಆಯೋಗನೇ ಅಭ್ಯರ್ಥಿಗಳಿಗೆ 70 ಲಕ್ಷ ಖರ್ಚು ಮಾಡಲು ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಮೈತ್ರಿ ಅಭ್ಯರ್ಥಿಗಳಾಗಿರುವುದರಿಂದ ಲೋಕಲ್ ಅವರು ನಮಗೆ ಸಪರೇಟ್ ಆಗಿ ಚುನಾವಣಾ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಹೇಳಿರುವಂತದ್ದು ನಿಜ. ಹಾಗೆಯೇ ನಾನು ಕೂಡ ಅರೆಂಜ್ ಮಾಡಿಕೊಡುತ್ತೇನೆ ಎಂದು ಹೇಳಿದ್ದು ಕೂಡ ಅಷ್ಟೇ ಸತ್ಯ.
Advertisement
ಚುನಾವಣಾ ಪ್ರಚಾರ ಮಾಡಲು ವ್ಯವಸ್ಥೆಗಳನ್ನು ಮಾಡಲು ತಮ್ಮಣ್ಣನ ಬಳಿ ನಮ್ಮ ಹುಡುಗರು ಹೋಗೋದಿಲ್ಲ. ಹೀಗಾಗಿ ಜಿಲ್ಲಾ ಮಂತ್ರಿ, ಮೈತ್ರಿ ಧರ್ಮ ಪಾಲನೆ ಮಾಡಿ ಚುನಾವಣೆ ಚೆನ್ನಾಗಿ ನಡೆಸಬೇಕು. ಅದಕ್ಕೆ ಅರೆಂಜ್‍ಮೆಂಟ್ ಮಾಡಿಕೊಡಿ ಎಂದು ಮಾದೇಗೌಡರು ಕೇಳಿದ್ದಾರೆ ಅದರಲ್ಲಿ ತಪ್ಪೇನಿದೆ ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.
Advertisement
Advertisement
ಶುಕ್ರವಾರ ರಾತ್ರಿ ಫೋನ್ ಸಂಭಾಷಣೆ ಆಗಿದ್ದು, ನಿನ್ನೆ ಬ್ಯಾಂಕ್ ರಜೆ ಇತ್ತು. ಹೀಗಾಗಿ ಹಣ ಹೊಂದಿಸುತ್ತಿದ್ದೇವೆ. ಇದು ಬಿಟ್ಟು ಎಲೆಕ್ಷನ್ ದಿಕ್ಕು ತಪ್ಪಿಸುವಂತದ್ದು ಏನೂ ಇಲ್ಲ. ಇದರಿಂದ ಫೋನ್ ಟ್ರ್ಯಾಪ್ ಮಾಡುತ್ತಾರೆ ಎಂದು ಗೊತ್ತಾಗುತ್ತೆ ಅಲ್ವ ಎಂದರು.
Advertisement
ಆದಾಯ ತೆರಿಗೆ ಇಲಾಖೆಯ ಮುಖಾಂತರ ಫೋನ್ ಕದ್ದಾಲಿಕೆ ಮಾಡುತ್ತಾರೆ ಎಂಬ ಮಾಹಿತಿ ನಮಗೆ ಲಭಿಸಿದೆ. ಹೀಗಾಗಿ ಐಟಿ ಇಲಾಖೆಯೇ ಅವರ ಪರ ಕೆಲಸ ಮಾಡುತ್ತದೆ ಎಂದು ಇದರಿಂದ ಸಾಬೀತಾಗುತ್ತದೆ ಎಂದು ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ. ನಾವು ಹೋಟೆಲಿನಲ್ಲಿ ಉಳಿದುಕೊಂಡರೂ ಬಂದು ರೇಡ್ ಮಾಡುತ್ತಾರೆ. ಇಷ್ಟೆಲ್ಲ ಹಿಂದೆ ಬಿದ್ದು ನನ್ನ ಕುಟುಂಬದ ಫೋನ್ ಗಳನ್ನು ಟ್ರ್ಯಾಪ್ ಮಾಡುತ್ತಿದ್ದಾರೆ ಅನ್ನೋ ಮಾಹಿತಿಯೂ ನನಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದರಿಂದ ಚುನಾವಣೆ ಗೆಲ್ಲೋದಕ್ಕೆ ಸಾಧ್ಯವಿಲ್ಲ. ಜಿಲ್ಲೆಯ ಜನ ಬಹಳ ಪ್ರಜ್ಞಾವಂತರಿದ್ದಾರೆ. ಸುಮಲತಾ ಮೇಡಂ ಹೇಳುತ್ತಿದ್ದರು ಜನ ಮುಟ್ಟಾಳರಲ್ಲ ಎಂದು ಹಾಗೆಯೇ ಇದರಿಂದ ಬಿಜೆಪಿಯವರಿಗೆ ನಮ್ಮನ್ನು ಮುಟ್ಟಾಳರನ್ನಾಗಿ ಮಾಡಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ನಮ್ಮನ್ನು ಬಗ್ಗಿಸಲು ಸಾಧ್ಯವಿಲ್ಲ ಏ.18ರಂದು ಜಿಲ್ಲೆಯ ಜನ ಉತ್ತರ ಹೇಳುತ್ತಾರೆ ಬಿಜೆಪಿಗೆ ಟಾಂಗ್ ಕೊಟ್ಟರು.
ಆಡಿಯೋದಲ್ಲೇನಿದೆ?
ಮಾದೇಗೌಡರು ಸಚಿವರಿಗೆ ಕರೆ ಮಾಡುತ್ತಾರೆ. ಮಾದೇಗೌಡರ ಪರವಾಗಿ ಬೇರೊಬ್ಬ ವ್ಯಕ್ತಿ ಪುಟ್ಟರಾಜುಗೆ ಫೋನ್ ಮಾಡಿ ನಿಮ್ಮ ಜೊತೆ ಮಾದೇಗೌಡರು ಮಾತನಾಡಬೇಕಂತೆ ಎಂದು ಹೇಳುತ್ತಾರೆ. ಹೀಗಾಗಿ ಪುಟ್ಟರಾಜು ಅವರು ಆಯ್ತು, ಅವರಿಗೆ ಫೋನ್ ಕೊಡಿ ಅಂತಾರೆ. ಆಗ ಮಾದೇಗೌಡರು, ನನ್ನ ಮೊಬೈಲ್ ನಿಂದ ಹಲವು ಬಾರಿ ನಿಮಗೆ ಫೋನ್ ಮಾಡಿದೆ. ಆದ್ರೆ ನೀವು ಕರೆ ಸ್ವೀಕರಿಸಿಲ್ಲ ಎಂದಿದ್ದಾರೆ. ಆಗ ಸಚಿವರು, ಹೌದು ಮತ್ತೆ ವಾಪಸ್ ನಿಮಗೆ ಫೋನ್ ಮಾಡಿದೆ ಆಗ ನೀವು ಸಿಗಲಿಲ್ಲ ಎಂದು ಹೇಳುತ್ತಾರೆ. ನಂತರ ಹಣದ ವಿಚಾರ ಬರುತ್ತದೆ. ಮಾದೇ ಗೌಡರು ನೇರವಾಗಿ ಸಚಿವರ ಬಳಿ ಹಣ ಕೇಳುತ್ತಾರೆ.
ಎಲೆಕ್ಷನ್ ಖರ್ಚಿಗೆ ಹಣ ಬೇಕು. ನನ್ನ ಮಗ ಓಡಾಡುತ್ತಿದ್ದಾನೆ. ಹೀಗಾಗಿ ಆದಷ್ಟು ಬೇಗ ಹಣ ಕಳುಹಿಸಿ ಕೊಡಿ ಎಂದು ಕೇಳುತ್ತಾರೆ. ಇದಕ್ಕೆ ಪುಟ್ಟರಾಜು ಅವರು ಓಕೆ ಎಂದು ಹೇಳಿದ್ದಾರೆ. ಈ ಆಡಿಯೋ ಇದೀಗ ವೈರಲ್ ಆಗಿದೆ. ಆದರೆ ಈ ಆಡಿಯೋ ಎಷ್ಟರಮಟ್ಟಿಗೆ ಸತ್ಯ ಅನ್ನೋದು ತಿಳಿದುಬರಬೇಕಿದೆ. ಯಾಕಂದ್ರೆ ಒಬ್ಬರು ಹಿರಿಯ ರಾಜಕರಾಣಿಯಾಗಿದ್ದವರು ಬೇರೊಬ್ಬರ ಮೊಬೈಲ್ ನಿಂದ ಹಣದ ವಿಷಯ ಮಾತಾಡುತ್ತಾರಾ ಅಥವಾ ಇದೊಂದು ಕ್ರಿಯೇಟ್ ಮಾಡಿರುವ ಆಡಿಯೋನಾ ಎಂಬ ಪ್ರಶ್ನೆ ಎದ್ದಿದೆ.