– ಕೊನೆಗೂ ಸೋಮಶೇಖರ್ ಅರೆಸ್ಟ್
ತುಮಕೂರು: ಎಸಿಬಿ ದಾಳಿಯಿಂದ ತಪ್ಪಿಸಿಕೊಂಡು ಓಡಿ ಹೋದ ಪಿಎಸ್‍ಐಯನ್ನು ಹಿಡಿಯಲು ಸಾರ್ವಜನಿಕರು ಬೆನ್ನತ್ತಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಗುಬ್ಬಿ ತಾಲೂಕು ಸಿ.ಎಸ್.ಪುರ ಠಾಣೆಯ ಸೋಮಶೇಖರ್.ಎಸ್ ಪರಾರಿಯಾದ ಪಿಎಸ್‍ಐ. ಸದ್ಯ ಓಡಿ ಹೋಗಿದ್ದ ಸೋಮಶೇಖರ್ ಅರೆಸ್ಟ್ ಆಗಿದ್ದಾರೆ.
Advertisement
ಇಂದು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಪೊಲೀಸ್ ಠಾಣೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಎಸಿಬಿ ಬಲೆಗೆ ಪಿಎಸ್‍ಐ ಸೋಮಶೇಖರ್ ಮುಖ್ಯ ಪೇದೆ ನಯಾಜ್ ಅಹಮ್ಮದ್ ಬಿದ್ದಿದ್ದರು. ಆದರೆ ಪಿಎಸ್‍ಐ ಪೊಲೀಸ್ ಠಾಣೆಯಿಂದ ಬೈಕಿನಲ್ಲಿ ಪರಾರಿಯಾಗಿದ್ದರು. ಎಸಿಬಿ ಅಧಿಕಾರಿಗಳು ಊಟ ಮಾಡುತ್ತಿದ್ದ ಸಮಯ ಉಪಯೋಗಿಸಿಕೊಂಡು ಮೊಬೈಲ್ ಫೋನ್ ನೊಂದಿಗೆ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
Advertisement
Advertisement
ದಾಳಿ ಮಾಡಿದ್ದು ಯಾಕೆ..?
ಕೌಟುಂಬಿಕ ಕಲಹದ ವಿಚಾರವಾಗಿ ಕಳೆದ ತಿಂಗಳು 22ರಂದು ಸಿ.ಎಸ್ ಪುರ ಠಾಣೆಯಲ್ಲಿ ಚಂದ್ರಣ್ಣ ಎಂಬವರ ವಿರುದ್ಧ ದೂರು ದಾಖಲಾಗಿತ್ತು. ಪೊಲೀಸರು ಚಂದ್ರಣ್ಣನ ಕಾರು ವಶಪಡಿಸಿಕೊಂಡಿದ್ದರು. ಹೀಗಾಗಿ ಚಂದ್ರಣ್ಣ ಅವರು ಕೋರ್ಟಿನಲ್ಲಿ ಜಾಮೀನು ಪಡೆದು ಕಾರು ಬಿಡಿಸಿಕೊಳ್ಳಲು ಬಂದಿದ್ದರು. ಆದರೆ ಪಿಎಸ್‍ಐ, ಕಾರು ಬಿಡಲು 28 ಸಾವಿರ ಹಣಕ್ಕೆ ಬೇಡಿಕೆ ಇಟ್ಡಿದ್ದು, ಮುಖ್ಯ ಪೇದೆ ನಯಾಜ್ ಅಹಮದ್ ಮೂಲಕ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಇದನ್ನೂ ಓದಿ: ಪೊಲೀಸ್‍ಗೆ ಕಪಾಳಮೋಕ್ಷ ಮಾಡಿದ ಮಾಜಿ ಶಾಸಕ ಎ.ಪಾಪಾರೆಡ್ಡಿ
Advertisement
ಅಲ್ಲದೆ 12 ಸಾವಿರ ಲಂಚವನ್ನು ಕೂಡ ಪಡೆದಿದ್ದರು. ಉಳಿದ 16 ಸಾವಿರ ಹಣ ಇಂದು ಪಡೆಯುವ ವೇಳೆ ಪಿಎಸ್‍ಐ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪಿಎಸ್‍ಐ ಲಂಚ ಬೇಡಿಕೆ ಬಗ್ಗೆ ಚಂದ್ರಣ್ಣ ಎಸಿಬಿಗೆ ದೂರು ನೀಡಿದ್ದರು. ಮಾಹಿತಿ ಆಧರಿಸಿದ ಎಸಿಬಿ ಅಧಿಕಾರಿಗಳು ಪಿಎಸ್‍ಐ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಅಧಿಕಾರಿಗಳನ್ನು ತಪ್ಪಿಸಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: ಎತ್ತುಗಳ ಜೊತೆಗೆ ಬಂದ ಅಭಿಮಾನಿಗಳನ್ನು ಭೇಟಿ ಮಾಡಿದ ಶಿವಣ್ಣ, ರಾಘಣ್ಣ
ನಡು ದಾರಿಯಲ್ಲಿ ಯೂನಿಫಾರ್ಮ್ ಬಿಚ್ಚಿ ಪಿಎಸ್ ಐ ಗದ್ದೆಗೆ ಎಸೆದಿದ್ದರು. ಅರೆ ಬೆತ್ತಲಾಗಿ ಓಡುತ್ತಿದ್ದ ಪಿಎಸ್‍ಐಯನ್ನು ಸಿಎಸ್ ಪುರ ಸಮೀಪದ ಜನ್ನೇನಹಳ್ಳಿ ಬಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಂತರ ಹೊಸ ಬಟ್ಟೆ ಕೊಡಿಸಿ ಎಸಿಬಿ ಅಧಿಕಾರಿಗಳು ಠಾಣೆಗೆ ಕರೆದುತಂದಿದ್ದಾರೆ.