ನಗ್ಗೆಟ್ಸ್ ಮಕ್ಕಳ ಇತ್ತೀಚಿನ ಫೇವರಿಟ್ ಖಾದ್ಯಗಳಲ್ಲೊಂದು. ಸಾಮಾನ್ಯವಾಗಿ ಆಲೂಗಡ್ಡೆ ಅಥವಾ ಪನೀರ್ ಬಳಸಿ ಸುಲಭವಾಗಿ ಈ ನಗ್ಗೆಟ್ಸ್‌ಗಳನ್ನು ಮಾಡಬಹುದು. ನಾವಿಂದು ಟೋಫು ಬಳಸಿ ಕ್ರಂಚಿ ನಗ್ಗೆಟ್ಸ್ ಮಾಡೋದು ಹೇಗೆಂದು ಹೇಳಿಕೊಡುತ್ತಿದ್ದೇವೆ. ಇಲ್ಲಿ ಟೋಫುಗಳನ್ನು ಆವನ್‌ನಲ್ಲಿ ಬೇಯಿಸಲಾಗಿದ್ದು, ಇದನ್ನು ಗರಿಗರಿಯಾಗಿ ಮಾಡಲು ಆಲೂಗಡ್ಡೆ ಚಿಪ್ಸ್ ಬಳಸಲಾಗಿದೆ. ಇದರ ಬದಲು ಕಾರ್ನ್‌ಫ್ಲೇಕ್ಸ್ ಸಹ ಬಳಸಬಹುದು. ಕ್ರಂಚಿ ಟೋಫು ನಗ್ಗೆಟ್ಸ್ ಮಾಡೋದು ಹೇಗೆಂದು ನೋಡೋಣ.
ಬೇಕಾಗುವ ಪದಾರ್ಥಗಳು:
ಟೋಫು – 300 ಗ್ರಾಂ
ಮೆಯೋನೀಸ್ – ಕಾಲು ಕಪ್
ಬೆಳ್ಳುಳ್ಳಿ ಪುಡಿ – ಕಾಲು ಟೀಸ್ಪೂನ್
ಈರುಳ್ಳಿ ಪುಡಿ – ಕಾಲು ಟೀಸ್ಪೂನ್
ಕರಿಮೆಣಸಿನ ಪುಡಿ – ಕಾಲು ಟೀಸ್ಪೂನ್
ಉಪ್ಪು – ಕಾಲು ಟೀಸ್ಪೂನ್
ಆಲೂಗಡ್ಡೆ ಚಿಪ್ಸ್ – 1 ಕಪ್ ಇದನ್ನೂ ಓದಿ: ಮೂರೇ ಪದಾರ್ಥ ಬಳಸಿ ಮಾಡಿ ಹೆಲ್ತಿ ಓಟ್ಸ್ ಬಾರ್
ಮಾಡುವ ವಿಧಾನ:
* ಮೊದಲಿಗೆ ಓವನ್ ಅನ್ನು 375 ಡಿಗ್ರಿ ಪ್ಯಾರಾಹೀಟ್‌ಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.
* ಟೋಫುವಿನಿಂದ ಹೆಚ್ಚುವರಿ ನೀರಿನಂಶ ತೆಗೆಯಿರಿ. ಇದಕ್ಕಾಗಿ ಒಂದು ಸ್ವಚ್ಛ ಬಟ್ಟೆ ತೆಗೆದುಕೊಂಡು ಅದರಲ್ಲಿ ಟೋಫುವನ್ನು ಸುತ್ತಿ, ಅದರ ಮೇಲೆ ಭಾರವಾದ ವಸ್ತುವನ್ನು ಇಟ್ಟು, ಸುಮಾರು ಅರ್ಧ ಗಂಟೆ ಹಾಗೆಯೇ ಬಿಡಿ.
* ಬಳಿಕ ಟೋಫುವನ್ನು ಸಣ್ಣ ಸಣ್ಣ ಘನಾಕಾರವಾಗಿ ಕತ್ತರಿಸಿಕೊಳ್ಳಿ.
* ಈಗ ಒಂದು ಮಿಕ್ಸಿಂಗ್ ಬೌಲ್‌ನಲ್ಲಿ ಮೆಯೋನೀಸ್, ಬೆಳ್ಳುಳ್ಳಿ ಪುಡಿ, ಈರುಳ್ಳಿ ಪುಡಿ, ಉಪ್ಪು ಹಾಗೂ ಕರಿಮೆಣಸಿನಪುಡಿ ಹಾಕಿ ಮಿಶ್ರಣ ಮಾಡಿ ಪಕ್ಕಕ್ಕಿಡಿ
* ಈಗ ಆಲೂಗಡ್ಡೆ ಚಿಪ್ಸ್ ಅನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ, ಲಟ್ಟಣಿಗೆಯಿಂದ ಅರನ್ನು ರೋಲ್ ಮಾಡಿ ಒರಟಾಗಿ ಪುಡಿ ಮಾಡಿಕೊಳ್ಳಿ. ಬಳಿಕ ಅದನ್ನು ಒಂದು ತಟ್ಟೆಗೆ ವರ್ಗಾಯಿಸಿ.
* ಈಗ ಟೋಫುಗಳನ್ನು ಮೆಯೋನೀಸ್ ಮಿಶ್ರಣದಲ್ಲಿ ಅದ್ದಿ, ಚೆನ್ನಾಗಿ ಲೇಪನವಾಗುವಂತೆ ಮಿಶ್ರಣ ಮಾಡಿ.
* ಈಗ ಒಂದೊಂದೇ ಟೋಫುವನ್ನು ಆಲೂಗಡ್ಡೆ ಚಿಪ್ಸ್ ಪುಡಿಯಲ್ಲಿ ಹಾಕಿ ಸುತ್ತಲೂ ಕೋಟ್ ಆಗುವಂತೆ ಒತ್ತಿಕೊಳ್ಳಿ. ನಂತರ ಅದನ್ನು ಬೇಕಿಂಗ್ ಟ್ರೇಯಲ್ಲಿ ಜೋಡಿಸಿ. ಉಳಿದ ಟೋಫುಗಳನ್ನೂ ಹೀಗೇ ಮಾಡುವುದನ್ನು ಮುಂದುವರಿಸಿ.
* ಈಗ ಓವನ್‌ನಲ್ಲಿ ಅದನ್ನಿಟ್ಟು ಸುಮಾರು 20-25 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಡುವೆ ಒಂದು ಬಾರಿ ಅದನ್ನು ಹೊರ ತೆಗೆದು ಮಗುಚಿ ಹಾಕಿ ಬೇಯಿಸಿಕೊಳ್ಳಿ.
* ಇದೀಗ ಕ್ರಂಚಿ ಟೋಫು ನಗ್ಗೆಟ್ಸ್ ತಯಾರಾಗಿದ್ದು, ಸವಿಯುದಕ್ಕೂ ಮುನ್ನ 10 ನಿಮಿಷ ಆರಲು ಬಿಡಿ. ಹಾಗೂ ನಿಮ್ಮಿಷ್ಟದ ಸಾಸ್‌ನೊಂದಿಗೆ ಆನಂದಿಸಿ. ಇದನ್ನೂ ಓದಿ: ಮೊಟ್ಟೆ ಬಳಸದೇ ಟೇಸ್ಟಿ ಡೋನಟ್ ಹೀಗೆ ಮಾಡಿ
Web Stories