ರಾಯಚೂರು: ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಪಲ್ಟಿ ಹೊಡೆದು ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿರುವ ಘಟನೆ ರಾಯಚೂರು (Raichuru) ತಾಲೂಕಿನ ಕೆರೆಬೂದೂರು ಗ್ರಾಮದ ಬಳಿ ನಡೆದಿದೆ.
ಇಬ್ಬರು ಮಕ್ಕಳು ಸೇರಿ 13 ಜನ ಪ್ರಯಾಣಿಸುತ್ತಿದ್ದ ಕ್ರೂಸರ್ ಪಲ್ಟಿ ಹೊಡೆದಿದೆ. ಚಾಲಕನ ಕೈಮುರಿದಿದ್ದು, ಹಲವರು ಗಾಯಗೊಂಡಿದ್ದಾರೆ.ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಾಡೂಟ – ಬಿರಿಯಾನಿ ಸೀಜ್ ಮಾಡಿದ ಚುನಾವಣಾಧಿಕಾರಿಗಳು
ಯಾದಗಿರಿ (Yadagiri) ಜಿಲ್ಲೆಯ ಸೈದಾಪುರದಿಂದ ಮಂತ್ರಾಲಯಕ್ಕೆ (Mantralaya) ಹೊರಟಿದ್ದ ಕ್ರೂಸರ್ ವಾಹನದಲ್ಲಿ ಇಬ್ಬರು ಮಕ್ಕಳು ಸೇರಿ 13 ಜನ ಪ್ರಯಾಣಿಸುತ್ತಿದ್ದರು. ರಾಯಚೂರು ತಾಲೂಕಿನ ಕೆರೆಬೂದೂರು ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ವಾಹನ ಪಲ್ಟಿ ಹೊಡೆದು ರಸ್ತೆ ಪಕ್ಕಕ್ಕೆ ಉರುಳಿದೆ.
ಮಂತ್ರಾಲಯಕ್ಕೆ ತೆರಳುವಾಗ ಮಾರ್ಗಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದ್ದು, ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದ್ದು ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿಯಾಗಿಲ್ಲ.
ಚಾಲಕನಿಗೆ ಬಲವಾದ ಏಟುಬಿದ್ದಿದ್ದು, ಕೈ ಮುರಿದಿದೆ. ಗಾಯಾಳುಗಳನ್ನ ಯರಗೇರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇಡಪನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಚಿಕ್ಕಬಳ್ಳಾಪುರ ಕ್ಷೇತ್ರದ ವಿದ್ಯಾರ್ಥಿಗಳಿಗೆ ವೈಯುಕ್ತಿಕ ಸ್ಕಾಲರ್ಶಿಪ್ ಸ್ಕೀಂ ಘೋಷಿಸಿದ ಶಾಸಕ ಪ್ರದೀಪ್ ಈಶ್ವರ್