ಬೀದರ್: ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ (Accident) ಪರಿಣಾಮ ಮೂವರು ಮಂದಿ ಸಾವಿಗೀಡಾದ ಘಟನೆ ಚಟ್ನಳ್ಳಿ ಬಳಿ ನಡೆದಿದೆ.
ಮೃತರನ್ನು ಪ್ರದೀಪ್ ಶಂಕರ್ ಕೋಲಿ (25), ವೀನೋದ್ ಕುಮಾರ್ ಪ್ರಭು (25) ಹಾಗೂ ವರ್ದಿಶ್ ಶರಣಪ್ಪ ಬೇಡರ್ (26) ಎಂದು ಗುರುತಿಸಲಾಗಿದೆ. ಮೃತರು ಬೀದರ್ (Bidar) ತಾಲೂಕಿನ ಯದಲಾಪೂರ್ ಗ್ರಾಮದವರು ಎಂದು ತಿಳಿದು ಬಂದಿದೆ. ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ರಭಸಕ್ಕೆ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಬ್ರೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
- Advertisement
ಮನ್ನಳ್ಳಿ ಪೊಲೀಸ್ (Mannalli Police) ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
- Advertisement