ಕಲಬುರಗಿ: 15 ವರ್ಷದಲ್ಲಿ ಒಮ್ಮೆಯೂ ತವರು ಮನೆಗೆ ಕಳುಹಿಸದೆ ಗೃಹಿಣಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಲ್ಲದೇ ಆಕೆಗೆ ವಿಷ (Poison) ಕುಡಿಸಿ ಕೊಂದಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯಲ್ಲಿ ನಡೆದಿದೆ.
ಕಲಬುರಗಿ ತಾಲೂಕಿನ ಬಬಲಾದ್ (Babalad) ಗ್ರಾಮದಲ್ಲಿ ಘಟನೆ ನಡೆದಿದ್ದು, ಲಾಲ್‌ಬಿ (35) ಮೃತಪಟ್ಟ ಮಹಿಳೆ. ಲಾಲ್‌ಬಿಯನ್ನು ಬಬಲಾದ್ ಗ್ರಾಮದ ಖಾಸೀಂ ಸಾಬ್ ಜೊತೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯಾದಾಗಿನಿಂದ ಲಾಲ್‌ಬಿಗೆ ಗಂಡನ ಮನೆಯವರು ನಿರಂತರ ಕಿರುಕುಳ ನೀಡುತ್ತಿದ್ದರು. ಮಾತ್ರವಲ್ಲದೇ ಕಳೆದ 15 ವರ್ಷಗಳಲ್ಲಿ ಒಮ್ಮೆಯೂ ತವರು ಮನೆಗೆ ಕಳುಹಿಸದೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಲಾಲ್‌ಬಿ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಕಂಟೈನರ್‌ಗೆ ಡಿಕ್ಕಿ ಹೊಡೆದ ಟಿಟಿ – 12 ಮಂದಿ ಸಾವು, 23 ಮಂದಿಗೆ ಗಾಯ
ಕಳೆದ ರಾತ್ರಿ ಲಾಲ್‌ಬಿಗೆ ಮನೆಯಲ್ಲಿ ಹಲ್ಲೆ ಮಾಡಿ ಜಮೀನಿಗೆ ಕಳುಹಿಸಿದ್ದರು. ಈ ವೇಳೆ ಖಾಸೀಂ ಸಾಬ್ ಜಮೀನಿನಲ್ಲಿ ಲಾಲ್‌ಬಿಗೆ ವಿಷ ಕುಡಿಸಿ ಕೊಲೆ ಮಾಡಿದ್ದಾನೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಿರುಕುಳಕ್ಕೆ ಬೇಸತ್ತು ಗುತ್ತಿಗೆದಾರ ಆತ್ಮಹತ್ಯೆ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]