ಲಂಡನ್/ ನವದೆಹಲಿ: ಕಚ್ಚಾ ತೈಲದ (Crude Oil) ಉತ್ಪಾದನೆ ಹಾಗೂ ರಫ್ತು ಕಡಿತವನ್ನು ಈ ವರ್ಷದ ಅಂತ್ಯದವರೆಗೆ ಮುಂದುವರಿಸಲು ರಷ್ಯಾ (Russia) ಮತ್ತು ಸೌದಿ ಅರೇಬಿಯಾ (Saudi Arabia) ತೀರ್ಮಾನಿಸಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭಾರೀ ಏರಿಕೆಯಾಗಿದೆ.
ಭಾರತಕ್ಕೆ (India) ಪೂರೈಕೆ ಆಗುತ್ತಿರುವ ಬ್ರೆಂಟ್ ಕಚ್ಚಾ ತೈಲದ ಬೆಲೆ 1.05% ಏರಿಕೆಯಾಗಿದ್ದು ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ ಈಗ 97.56 ಡಾಲರ್ (ಅಂದಾಜು 8,110 ರೂ.) ತಲುಪಿದೆ.
Advertisement
ಒಂದು ಬ್ಯಾರೆಲ್ ಅಮೆರಿಕದ ವೆಸ್ಟ್ ಟೆಕ್ಸಸ್ ಇಂಟರ್‌ಮಿಡಿಯೇಟ್ ತೈಲದ ಬೆಲೆ 95.03 ಡಾಲರ್‌ಗೆ (ಅಂದಾಜು 7,900 ರೂ.) ಏರಿಕೆಯಾಗಿದೆ. ಈ ಹಿಂದೆ ಆಗಸ್ಟ್ 2022ರಲ್ಲಿ 94.61 ಡಾಲರ್‌ಗೆ ತಲುಪಿತ್ತು. ಇದನ್ನೂ ಓದಿ: Karnataka Bandh:ಶಾಲಾ, ಕಾಲೇಜುಗಳಿಗೆ ರಜೆ ನೀಡೋ ಅಧಿಕಾರ ಡಿಸಿಗಳಿಗೆ ಬಿಟ್ಟ ಶಿಕ್ಷಣ ಇಲಾಖೆ
Advertisement
Advertisement
ಎಷ್ಟು ಕಡಿತ?
ಒಪೆಕ್+ ಒಕ್ಕೂಟದಲ್ಲಿ ಅತಿ ಹೆಚ್ಚು ತೈಲ ಉತ್ಪಾದನೆ ಮಾಡುವ ಸೌದಿ ಅರೇಬಿಯಾ ಈ ವರ್ಷದ ಅಂತ್ಯದ ವರೆಗೆ 1 ದಶಲಕ್ಷ ಬಿಪಿಡಿ (ಬ್ಯಾರೆಲ್ ಪರ್ ಡೇ) ತೈಲವನ್ನು ಕಡಿತ ಮಾಡುವುದಾಗಿ ಹೇಳಿದೆ. ಈ ನಿರ್ಧಾರದಿಂದ ಸೌದಿ ಈಗ ಪ್ರತಿ ದಿನ 9 ದಶಲಕ್ಷ ಬಿಪಿಡಿ ತೈಲವನ್ನು ಉತ್ಪಾದನೆ ಮಾಡುತ್ತಿದೆ. ರಷ್ಯಾವೂ ಈ ವರ್ಷದ ಅಂತ್ಯದವರೆಗೆ 3 ಲಕ್ಷ ಬಿಪಿಡಿ ತೈಲವನ್ನು ಕಡಿತ ಮಾಡುವುದಾಗಿ ಘೋಷಿಸಿದೆ.
Advertisement
ಭಾರತಕ್ಕೆ ಪೂರೈಕೆಯಾಗುವ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಆಗಸ್ಟ್‌ನಲ್ಲಿ ಸರಾಸರಿ 86.43 ಡಾಲರ್ ಇದ್ದರೆ ಈಗ ಇದು 97 ಡಾಲರ್ ಗಡಿಯನ್ನು ದಾಟಿದೆ. ಮೇ ಮತ್ತು ಜೂನ್‌ನಲ್ಲಿ ಸರಾಸರಿ ಬೆಲೆಯು 73ರಿಂದ 75 ಡಾಲರ್ ನಡುವೆ ಇತ್ತು.
Web Stories