ಲಂಡನ್: ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದಾಗಿ ಬ್ರೆಂಟ್ ಕಚ್ಚಾ ತೈಲದ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ಸೋಮವಾರ 1 ಬ್ಯಾರಲ್‍ಗೆ 130 ಡಾಲರ್ (10,006 ರೂ.) ಆಗಿದ್ದು, ಇದೇ ಮೊದಲ ಬಾರಿಗೆ ಕಳೆದ 14 ವರ್ಷಗಳಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ.
ಈಗಾಗಲೇ ರಷ್ಯಾ, ಉಕ್ರೇನ್ ಯುದ್ಧ ಜಾಗತೀಕ ಮಟ್ಟದಲ್ಲಿ ಸಾಕಷ್ಟು ಪರಿಣಾಮ ಬೀರುತ್ತಿದೆ. ಜೊತೆಗೆ ವಿಶ್ವ ಮಟ್ಟದಲ್ಲಿ ಕಚ್ಚಾ ತೈಲ ಪೂರೈಕೆ ಮೇಲೆ ಅಗಾಧ ಪರಿಣಾಮ ಬೀರಿದ್ದು, ದರ ಶೇ.7 ರಷ್ಟು ಅಧಿಕ ಏರಿಕೆಯಾಗಿದೆ. ಈ ಏರಿಕೆಯು 2008ರ ಜುಲೈ ನಂತರ ಇದು ಅತ್ಯಧಿಕ ಮಟ್ಟದಲ್ಲಿ ಏರಿಕೆಯಾಗಿದೆ. 2008ರಲ್ಲಿ 143 ಡಾಲರ್(10,991 ರೂ.) ಏರಿಕೆಯಾಗಿತ್ತು.
⚡️The oil price surpassed $130 per barrel amid panic over the war in #Ukraine, beating 2012’s peak of over $128
The only higher oil price was in 2008 – $143. But even that record is not so far.
— NEXTA (@nexta_tv) March 7, 2022
ಈ ಹಿಂದೆ ಬ್ರೆಂಟ್ ಕಚ್ಚಾ ತೈಲದ ಬೆಲೆಯು 2013ರ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಒಂದು ಬ್ಯಾರೆಲ್‍ಗೆ 119 ಡಾಲರ್ (9,144 ರೂ.) ಏರಿಕೆಯಾಗಿತ್ತು. ಇದು ಈವರೆಗೆ ಗರಿಷ್ಠ ಮಟ್ಟದ ಏರಿಕೆಯಾಗಿತ್ತು. ಕಳೆದ ಬುಧವಾರ 1 ಬ್ಯಾರಲ್‍ಗೆ 113 ಡಾಲರ್‌ಗೆ (8,565 ರೂಪಾಯಿ) ಏರಿಕೆಯಾಗಿತ್ತು.
ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಸ್ಥಿರಗೊಳಿಸುವ ಯತ್ನದಲ್ಲಿ ಮಿತ್ರರಾಷ್ಟ್ರಗಳೊಂದಿಗೆ ತನ್ನ ಆಯಾಕಟ್ಟಿನ ಮೀಸಲುಗಳಿಂದ ಅಮೆರಿಕ ಸುಮಾರು 60 ಮಿಲಿಯನ್ ಬ್ಯಾರಲ್ ಬಿಡುಗಡೆ ಮಾಡಿದೆ. ಆದರೂ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಇದನ್ನೂ ಓದಿ: ರಷ್ಯಾ- ಉಕ್ರೇನ್ ಯುದ್ಧ: ಕಚ್ಚಾ ತೈಲ ಬೆಲೆ ಭಾರೀ ಏರಿಕೆ
ತೈಲದ ಜಾಗತಿಕ ಬೆಲೆ ಏರಿಕೆಯು ಭಾರತದ ಮೇಲೆ ಪರಿಣಾಮ ಬೀರಲಿದೆ. ಭಾರತ ತನ್ನ ಅಗತ್ಯಗಳಲ್ಲಿ ಶೇ.85 ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಇದು ಭಾರತದ ಹಣದುಬ್ಬರದ ಒತ್ತಡಕ್ಕೆ ಕಾರಣವಾಗಬಹುದು. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಬಹುದು.
ಕಳೆದ ನವೆಂಬರ್‌ನಲ್ಲಿ ಪೆಟ್ರೋಲ್-ಡೀಸೆಲ್ ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿತ್ತು. ಬಳಿಕ ತೈಲ ದರ ಪರಿಷ್ಕರಣೆಯಾಗಿಲ್ಲ. ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗುತ್ತಿದ್ದರೂ ತೈಲ ಮಾರಾಟ ಕಂಪನಿಗಳು ಪಂಚ ರಾಜ್ಯಗಳ ಚುನಾವಣೆ ಕಾರಣಕ್ಕೆ ದರ ಏರಿಕೆಯನ್ನು ತಡೆ ಹಿಡಿದಿವೆ. ಇದನ್ನೂ ಓದಿ: 100 ಡಾಲರ್ ಗಡಿಯಲ್ಲಿ ಕಚ್ಚಾ ತೈಲ – ಭಾರೀ ಬೆಲೆ ಏರಿಕೆ ಸಾಧ್ಯತೆ