ಲಂಡನ್/ಕಿವ್: ರಷ್ಯಾ-ಉಕ್ರೇನ್ ಬಿಕ್ಕಟ್ಟು (Russia Ukraine Crisis) ತೀವ್ರಗೊಂಡಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರೀ ಏರಿಕೆ ಕಂಡಿದೆ.
ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 94.84( 7,165ರೂ.) ಡಾಲರ್‌ಗೆ ಏರಿಕೆಯಾಗಿದ್ದು, ಶೀಘ್ರವೇ 100 ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆಯಿದೆ. ಸದ್ಯ ಭಾರತದಲ್ಲಿ ಲೀಟರ್‌ಗೆ 100 ರೂ. ಅಸುಪಾಸಿನಲ್ಲಿರುವ ಪೆಟ್ರೋಲ್ ದರ ತೈಲ ಬೆಲೆ 100 ಡಾಲರ್‌ಗೆ ಏರಿಕೆಯಾದರೆ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ.
Advertisement
ತಿಂಗಳ ಅಂತ್ಯದ ವೇಳೆ 8 ವರ್ಷದ ಗರಿಷ್ಠವಾದ 100 ಡಾಲರ್ ತಲುಪುವ ಸಾಧ್ಯತೆ ಇದೆ. ಕೊರೊನಾ ಹೊಡೆತದಿಂದ ನಲುಗಿದ್ದ ದೇಶಗಳು ಈಗಷ್ಟೇ ಆರ್ಥಿಕತೆ ಚೇತರಿಕೆ ಕಾಣುತ್ತಿವೆ. ದರ ಏರಿಕೆಯಾದಲ್ಲಿ ಹಲವು ರಾಷ್ಟ್ರಗಳ ಆರ್ಥಿಕತೆಯ ಮೇಲೆ ಭಾರೀ ಪೆಟ್ಟು ಬೀಳುವ ಸಾಧ್ಯತೆಯಿದೆ. ಇದನ್ನೂ ಓದಿ: ನಾನು ಮತ್ತೆ ಶಾಸಕನಾದ್ರೆ ಮುಸ್ಲಿಮರು ಟೋಪಿ ತೆಗೆದು ತಿಲಕ ಇಡುವಂತೆ ಮಾಡ್ತೀನಿ: ಬಿಜೆಪಿ ಶಾಸಕ
Advertisement
Advertisement
2021ರ ನವೆಂಬರ್ ಬಳಿಕ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪಂಚ ರಾಜ್ಯ ಚುನಾವಣೆ ನಡೆಯುತ್ತಿರುವುದರಿಂದ ಸದ್ಯಕ್ಕೆ ಬೆಲೆ ಏರಿಕೆಯಾಗುವುದು ಅನುಮಾನ. ಚುನಾವಣೆ ಬಳಿಕವೂ ತೈಲ ದರ ಏರಿಕೆಯಾದರೆ ಭಾರತದಲ್ಲೂ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಲಿದೆ. ಇದನ್ನೂ ಓದಿ: ಮಲಗಿದ್ದಲ್ಲಿಯೇ ಸಾವನ್ನಪ್ಪಿದ ಅರೆ ವೈದ್ಯಕೀಯ ವಿದ್ಯಾರ್ಥಿ
Advertisement
ಸೇನಾ ಜಮಾವಣೆ: ಯುದ್ಧದ ಉತ್ಸಾಹದಲ್ಲಿರುವ ರಷ್ಯಾ ಗಡಿಯಲ್ಲಿ ತನ್ನ ಸೇನಾ ಜಮಾವಣೆಯನ್ನು 1.30 ಲಕ್ಷಕ್ಕೆ ಏರಿಸಿದೆ. ಉಕ್ರೆನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಜೊತೆ 1 ಗಂಟೆ ಪ್ರಸ್ತತ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಚರ್ಚೆ ನಡೆಸಿದ್ದಾರೆ.
ತನ್ನ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ಸೇನೆಯನ್ನು ನಿಯೋಜಿಸಿದನ್ನು ಉಕ್ರೇನ್ ಪ್ರಶ್ನಿಸಿದೆ. ಮುಂದಿನ 48 ಗಂಟೆಯ ಒಳಗಡೆ ರಷ್ಯಾಈ ಬಗ್ಗೆ ಕಾರಣ ನೀಡಬೇಕು ಎಂದು ಹೇಳಿದೆ.