ಯಾದಗಿರಿ: ದೇಶದ್ರೋಹಿ ಅಮೂಲ್ಯ ಲಿಯೋನಾ ವಿರುದ್ಧ ಯೋಧರೊಬ್ಬರು ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಸದ್ಯ ನಾಗಲ್ಯಾಂಡ್ ಗಡಿಯಲ್ಲಿ ದೇಶ ಸೇವೆ ಮಾಡುತ್ತಿರುವ, ಸಿಆರ್‌ಪಿಎಫ್ ಯೋಧ ದೇವೆಂದ್ರಪ್ಪ ಅವರು ಅಮೂಲ್ಯ ಲಿಯೋನಾ ವಿರುದ್ಧ ಹೋರಾಟ ಮಾಡುವಂತೆ ದೇಶದ ಜನರಿಗೆ ಕರೆ ಕೊಟ್ಟಿದ್ದಾರೆ. ಮೂಲತಃ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಸಗರ ಗ್ರಾಮದ ಯೋಧ ದೇವೆಂದ್ರಪ್ಪ 8 ವರ್ಷದಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ದೇಶದ್ರೋಹ ಘೋಷಣೆ ಪ್ರಕರಣ- ಪರಪ್ಪನ ಅಗ್ರಹಾರಕ್ಕೆ ಅಮೂಲ್ಯ ಶಿಫ್ಟ್
Advertisement
Advertisement
ತಮ್ಮ ಕಾರ್ಯಸ್ಥಾನದಿಂದ ವಿಡಿಯೋ ಮಾಡಿ ತಮ್ಮ ಆಕ್ರೋಶ ಹಂಚಿಕೊಂಡಿರುವ ದೇವೆಂದ್ರಪ್ಪ, ನಾವು ಗಡಿಯಲ್ಲಿ ನಿಂತು ಭಾರತಾಂಬೆಯ ಸೇವೆ ಮಾಡುತ್ತೇವೆ. ಆದರೆ ದೇಶದ ಒಳಗಡೆ ಅಮೂಲ್ಯನಂತಹ ವಿಕೃತ ಮನಸ್ಸಿನವರು ಇದ್ದಾರೆ. ನಮ್ಮ ದೇಶದಲ್ಲಿ ಬ್ರಿಟಿಷರು 200 ವರ್ಷ ಆಳ್ವಿಕೆ ನಡೆಸಲು ಅಮೂಲ್ಯನಂತ ವಿಕೃತ ಮನಸ್ಸಿನವರು ಕಾರಣ ಎಂದರು. ಇದನ್ನೂ ಓದಿ: ಮಗಳು ಮಾಡಿದ್ದು ತಪ್ಪು, ಅವಳ ಕೈ-ಕಾಲು ಮುರಿಯಲಿ: ಅಮೂಲ್ಯ ತಂದೆ
Advertisement
Advertisement
ಅಲ್ಲದೆ ಮೀರ್ ಜಾಫರ್ ನಂತಹ ಮನಸ್ಥಿತಿವುಳ್ಳ ಅಮೂಲ್ಯ ಅಂತವರು ಸ್ವಪ್ರತಿಷ್ಠೆಗೋಸ್ಕರ ಪಾಕಿಸ್ತಾನದ ಪರ ಘೋಷಣೆ ಕೂಗುತ್ತಾರೆ. ಇಂಥವರನ್ನು ದೇಶದಲ್ಲಿ, ಸಮಾಜದಲ್ಲಿ ಬೆಳೆಯಲು ಬಿಡಬಾರದು. ಎಲ್ಲಿಯವರೆಗೂ ಸಮಾಜ ಬಲಿಷ್ಠವಾಗಿ ಒಗ್ಗಟ್ಟಾಗಿ ಇಂಥವರ ವಿರುದ್ಧ ನಿಲ್ಲುವುದಿಲ್ಲವೋ ಅಲ್ಲಿಯವರೆಗೂ ಇಂಥವರು ಇರುತ್ತಾರೆ. ತಮ್ಮ ಪ್ರಚಾರಕ್ಕಾಗಿ ದೇಶದ ವಿರುದ್ಧ ಇಂತಹ ಹೇಳಿಕೆಯನ್ನು ಕೊಡುತ್ತಿರುತ್ತಾರೆ. ಇಂತವರ ವಿರುದ್ಧ ಜನ ಹೋರಾಟ ನಡೆಸಬೇಕು. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮುಂದೇನು ಮಾತನಾಡುತ್ತಿದ್ದಳು ಎಂದು ಕಾದು ನೋಡಬೇಕಿತ್ತು: ಅಮೂಲ್ಯ ತಾಯಿ
ಸಿಎಎ ಹಾಗೂ ಎನ್‍ಸಿಆರ್ ವಿರೋಧಿಸಿ ಗುರುವಾರ ನಗರದ ಪ್ರೀಡಂ ಪಾರ್ಕಿನಲ್ಲಿ ಆಸಾದುದ್ದೀನ್ ಓವೈಸಿ ಭಾಗವಹಿಸಿದ್ದ ಪ್ರತಿಭಟನಾ ಕಾರ್ಯಕ್ರಮದ ವೇದಿಕೆಯಲ್ಲೇ ಅಮೂಲ್ಯ ಪಾಕಿಸ್ತಾನ ಜಿಂದಾಬಾದ್ ಎಂದು ಜೈಕಾರ ಕೂಗಿದ್ದಳು. ಅಮೂಲ್ಯ ಈ ರೀತಿ ಘೋಷಣೆ ಕೂಗುತ್ತಿದ್ದಂತೆ ಓವೈಸಿ ಆಕೆಯನ್ನು ತಡೆದಿದ್ದರು. ಅಮೂಲ್ಯ ಪಾಕಿಸ್ತಾನಕ್ಕೆ ಜೈಕಾರ ಕೂಗುತ್ತಿದ್ದಂತೆ ಓವೈಸಿ ಗೊಂದಲಗೊಂಡರು. ತಕ್ಷಣ ಸಂಘಟಕರು ಮೈಕ್ ಕಿತ್ತುಕೊಂಡು ಅಮೂಲ್ಯ ಅವರನ್ನು ತಡೆದಿದ್ದಾರೆ.