CrimeLatestMain PostNational

ಅಡುಗೆ ಮಾಡೋ ವಿಚಾರಕ್ಕೆ ಜಗಳ- CRPF ಎಸ್‍ಐಗೆ ಗುಂಡಿಕ್ಕಿದ ಪೇದೆ

ಹೈದರಾಬಾದ್: ಅಡುಗೆ ಮಾಡುವ ವಿಚಾರಕ್ಕೆ ಜಗಳವಾಗಿದ್ದು, ಕಾನ್ಸ್‌ಟೇಬಲ್ ಒಬ್ಬರು ಸಿಆರ್‌ಪಿಎಫ್‌ ಅಧಿಕಾರಿಯನ್ನ ಗುಂಡಿಕ್ಕಿ ಕೊಂದಿದ್ದಾರೆ. ಈ ಘಟನೆ ತೆಲಂಗಾಣದ ಮುಳುಗು ಜಿಲ್ಲೆಯ ವೆಂಕಟಾಪುರಂ ವಲಯದಲ್ಲಿ ನಡೆದಿದೆ.

ಉಮೇಶ್ ಮೃತನಾಗಿದ್ದಾನೆ. ಎಸ್‍ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಮೇಲೆ ಕಾನ್ಸ್‌ಟೇಬಲ್ ಸ್ಟೀಫನ್ ಹಲ್ಲೆ ಮಾಡಿದ್ದಾನೆ. ಕೇವಲ ಅಡುಗೆ ಮಾಡೋ ವಿಚಾರಕ್ಕೆ ಜಗಳವಾಗಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಸಬ್ ಇನ್ಸ್​​ಪೆಕ್ಟರ್‌ನನ್ನು ಸಿಆರ್‌ಪಿಎಫ್‌ ಕಾನ್ಸ್‌ಟೇಬಲ್ ಗುಂಡಿಕ್ಕಿ ಕೊಂದಿದ್ದಾನೆ.

ಸಿಆರ್‌ಪಿಎಫ್‌ನ 39ನೇ ಬೆಟಾಲಿಯನ್‍ನ ಎಸ್‍ಐ ಉಮೇಶ್ ಚಂದ್ರ ಹಾಗೂ ಕಾನ್ಸ್‌ಟೇಬಲ್ ಸ್ಟೀಫನ್ ನಡುವೆ ಇಂದು ಬೆಳಗ್ಗೆ ಆಹಾರ ತಯಾರಿಸುವ ವಿಚಾರದಲ್ಲಿ ವಾಗ್ವಾದ ನಡೆದಿದೆ. ಜಗಳ ತಾರಕಕ್ಕೇರಿದ್ದು, ಸ್ಟೀಫನ್ ತನ್ನ ಗನ್‍ನಿಂದ ಉಮೇಶ್ ಮೇಲೆ ಗುಂಡು ಹಾರಿಸಿದ್ದಾರೆ. ಎಸ್‍ಐ ಉಮೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಸ್ಟೀಫನ್ ಕೂಡ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡಿದ್ದಾನೆ. ಇದನ್ನೂ ಓದಿ: 7ರ ಬಾಲಕಿ ಮೇಲೆ ಅತ್ಯಾಚಾರ- ಹತ್ಯೆಗೈದವರಿಗಾಗಿ ಶೋಧ ಕಾರ್ಯ

ಗಂಭೀರವಾಗಿ ಗಾಯಗೊಂಡಿರುವ ಕಾನ್ಸ್‌ಟೇಬಲ್ ಸ್ಟೀಫನ್‍ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಮೇಶ್ ಬಿಹಾರ ನಿವಾಸಿಯಾಗಿದ್ದು, ಸ್ಟೀಫನ್ ತಮಿಳುನಾಡು ಮೂಲದವರಾಗಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿರುವುದಾಗಿ ಮುಳುಗು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿಯ ಅನೈತಿಕ ಸಂಬಂಧ – ಮನನೊಂದು ರೈಲ್ವೆ ಹಳಿಗೆ ತಲೆಕೊಟ್ಟು ಪತಿ ಆತ್ಮಹತ್ಯೆ! 

 

Leave a Reply

Your email address will not be published.

Back to top button