ಮಂಡ್ಯ: ಜಿಲ್ಲೆಯ ಗುಡಿಗೆರೆಯ ಯೋಧ ಗುರು ಅವರ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ವೀರಮರಣ ಅಪ್ಪಿದ್ದಾರೆ. ಗುರು ಅವರು ಯೋಧರಾದ್ರೂ ಊರಿಗೆ ಬಂದಾಗ ಮೂಲ ಕಸುಬುನ್ನು ಮಾಡುತ್ತಿದ್ದರು. ಗುರು ತಂದೆ-ತಾಯಿ ಗುಡಿಗೆರೆಯಲ್ಲಿ ಇಸ್ತ್ರಿ ಅಂಗಡಿ ಇಟ್ಟುಕೊಂಡು ಮಕ್ಕಳನ್ನು ಸಾಕಿದ್ದರು.
ರಜೆಯ ಮೇಲೆ ಊರಿಗೆ ಆಗಮಿಸಿದ್ದಾಗಲೂ ಗುರು ತಂದೆ-ತಾಯಿ ಜೊತೆ ಅಂಗಡಿಯಲ್ಲಿ ಇಸ್ತ್ರಿ ಮಾಡುತ್ತಿದ್ದರು. ಈ ಮೂಲಕ ದೇಶ ಸೇವೆಯ ಜೊತೆಗೆ ತಂದೆ-ತಾಯಿ ತಮ್ಮನ್ನು ಬೆಳೆಸಲು ಮಾಡಿದ ವೃತ್ತಿಯ ಬಗ್ಗೆಯೂ ಅಪಾರ ಗೌರವವನ್ನು ಇಟ್ಟುಕೊಂಡಿದ್ದರು.
ವೀರ ಪುತ್ರ ಗುರು ಪಾರ್ಥಿವ ಶರೀರ ಗ್ರಾಮಕ್ಕೆ ತಡವಾಗಿ ಆಗಮಿಸುವ ಹಿನ್ನೆಲೆಯಲ್ಲಿ ಕೆ.ಎಂ.ದೊಡ್ಡಿಯಲ್ಲಿ ಸಾರ್ವಜನಿಕರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಸ್ಥಳಕ್ಕಾಗಮಿಸಿದ ಜಿಲ್ಲಾಡಳಿತ ಅಧಿಕಾರಿಗಳು ನೀಡಿದ ಭರವಸೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಪ್ರತಿಭಟನೆ ಕೈ ಬಿಡಲಾಯ್ತು. ಹೆದ್ದಾರಿ ತಡೆದಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ಥವಾಗಿತ್ತು. ಇಂದು ಬೆಳಗ್ಗೆ 11.45ಕ್ಕೆ ಗುರು ಪಾರ್ಥಿವ ಶರೀರ ಬೆಂಗಳೂರಿಗೆ ಆಗಮಿಸುವ ಸಾಧ್ಯತೆಗಳಿವೆ.
ಸಂಕ್ರಾಂತಿ ಹಬ್ಬಕ್ಕೆ ಒಂದು ತಿಂಗಳ ಕಾಲ ಊರಿನಲ್ಲೇ ಇದ್ದ ಗುರು ಎಲ್ಲರ ಪ್ರೀತಿಯ ಸ್ನೇಹಿತ, ಊರ ಮಗನಂತಿದ್ದರು. ಊರಿನಲ್ಲಿ ಪ್ರತಿಯೊಬ್ಬರಿಗೂ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದರು. ಅಪ್ಪನ ಬಟ್ಟೆ ಇಸ್ತ್ರಿ ಅಂಗಡಿಯಲ್ಲಿಯೂ ಕೆಲಸ ಮಾಡುತ್ತಿದ್ರು. ಎಲ್ಲರೊಡನೆ ಒಂದಾಗಿ ತಿಂಗಳು ಕಾಲ ಕಳೆದ ಪ್ರೀತಿಯ ಮನೆಮಗ ಇದೇ ಫೆಬ್ರವರಿ 10ರಂದು ಕರ್ತವ್ಯಕ್ಕೆ ಮರಳಿದ್ದರು.
ಮಗ ಮತ್ತೆ ಸೇನೆಗೆ ಹೊರಟಾಗ ತಾಯಿ ಮನಸ್ಸಿಗೆ ಅದೇಕೋ ಸಮಾಧಾನವೇ ಇರಲಿಲ್ಲ. ಮಗನೇ ನೀನು ಕೆಲಸ ಬಿಟ್ಟು ಬಿಡು.. ನಮ್ಮ ಜೊತೆಯೇ ಇದ್ದು ಬಿಡು ಎಂದಿದ್ದರು. ಆದ್ರೆ ಅಮ್ಮಾ. ನಾನು ಮಾಡುತ್ತಿರುವುದು ದೇಶಸೇವೆ, ನೀನು ಹೆದರಬೇಡ. ನನಗೆ ಏನೂ ಆಗುವುದಿಲ್ಲ. ನಾನು ಹೋಗಿ ಬರುತ್ತೇನಮ್ಮಾ ಎಂದು ಭಾರತಮಾತೆಯ ಸೇವೆಗೆ ಹೊರಟಿದ್ದರು ಗುರು. ಭಾರದ ಮನಸ್ಸಿನಿಂದ ಮಗನನ್ನು ಸೇನೆಗೆ ಕಳಿಸಿದ್ದ ಅಮ್ಮನಿಗೆ ಈಗ ಆಕಾಶವೇ ಕಳಚಿ ಬಿದ್ದಂತಿದೆ.
https://www.youtube.com/watch?v=d9UfSkypOR0
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv