ರಾಯಪುರ: ಚಿಕಿತ್ಸೆಗಾಗಿ ಪರದಾಡುತ್ತಿದ್ದ ಗರ್ಭಿಣಿಯನ್ನು ಸಿಆರ್ ಪಿಎಫ್ ಯೋಧರು ಸುಮಾರು 6 ಕಿ.ಮೀ. ಹೆಗಲ ಮೇಲೆ ಹೊತ್ತು ನಡೆದು, ನಂತರ ವಾಹನದ ಮೂಲಕ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಛತ್ತಿಸ್‍ಗಢದ ಬಿಜಾಪುರದ ಕಾಡಿನ ಪ್ರದೇಶ ಪಡೇಡಾದಲ್ಲಿ ಘಟನೆ ನಡೆದಿದ್ದು, ಕಾಡಿನ ಮಧ್ಯೆ ರಸ್ತೆ ಸಂಪರ್ಕವಿರದ ಗ್ರಾಮದಲ್ಲಿ ಗರ್ಭಿಣಿ ಚಿಕಿತ್ಸೆಗಾಗಿ ಪರದಾಡುತ್ತಿದ್ದಳು. ಇದನ್ನು ಕಂಡ ಸಿಆರ್ ಪಿಎಫ್ ಯೋಧರು ಆಕೆಗೆ ಸಹಾಯ ಮಾಡಿದ್ದು, ತಕ್ಷಣವೇ ಎಚ್ಚೆತ್ತುಕೊಂಡು ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದ್ದಾರೆ.
Advertisement
Chhattisgarh: A team of Central Reserve Police Force (CRPF) carried a pregnant woman on a cot for at least 6 km through the jungles of village Padeda in District Bijapur today morning, to help her reach hospital. pic.twitter.com/tiMaOGI5jh
— ANI (@ANI) January 21, 2020
Advertisement
ಹೊಟ್ಟೆ ನೋವಿನಿಂದಾಗಿ ಮಹಿಳೆ ಹೊರಸಿನ ಮೇಲೆಯೇ ಒದ್ದಾಡುತ್ತಿದ್ದಳು. ಇದನ್ನು ಕಂಡ ಸಿಆರ್ ಪಿಎಫ್ ಯೋಧರು, ಮಹಿಳೆಯನ್ನು ಹೊರಸಿನ ಸಮೇತ ಎತ್ತಿಕೊಂಡು, ರಸ್ತೆವರೆಗೆ ಹೆಗಲ ಮೇಲೆ ಹೊತ್ತೊಯ್ದಿದ್ದಾರೆ. ಮಹಿಳೆಯ ಮನೆಯಿದ್ದ ಕಾಡಿನ ಪ್ರದೇಶ ಪಡೇಡಾದಿಂದ ಸುಮಾರು 6ಕಿ.ಮೀ. ದೂರದಲ್ಲಿ ರಸ್ತೆ ಇದ್ದು, ಅಲ್ಲಿಯವರೆಗೂ ಯೋಧರು ಮಹಿಳೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ.
Advertisement
ರಸ್ತೆವರೆಗೆ ಮಹಿಳೆಯನ್ನು ಹೊತ್ತುಕೊಂಡು ಹೋಗಿ, ನಂತರ ವಾಹನದ ಮೂಲಕ ಮಹಿಳೆಯನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯೋಧರ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.