ಶ್ರೀನಗರ್: ನದಿಗೆ ಹಾರಿ ಸಿಆರ್‌ಪಿಎಫ್ ಯೋಧರು ಬಾಲಕಿಯನ್ನು ರಕ್ಷಿಸಿದ ಘಟನೆ ಇಂದು ಜಮ್ಮು- ಕಾಶ್ಮೀರದ ಟ್ಯಾಂಗ್‍ಮಾರ್ಗ್ ಪಟ್ಟಣದ ಬಾರಾಮುಲ್ಲಾದಲ್ಲಿ ನಡೆದಿದೆ.
ಯೋಧರು ಬಾಲಕಿಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಾಲಕಿ ಕಿರುಚುತ್ತಿದ್ದ ಶಬ್ಧ ಕೇಳಿ ಐವರು ಯೋಧರು ಕಲ್ಲಿನ ಮೇಲೆ ಓಡಿ ಹೋಗುತ್ತಾ ನದಿಯತ್ತ ತೆರಳಿದ್ದಾರೆ. ಈ ವೇಳೆ ಯೋಧರು ಬಾಲಕಿ ನದಿಯಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ್ದಾರೆ.
Advertisement
Nageena, a 14-year-old girl (pic 1) was saved from drowning in Baramulla, Jammu & Kashmir by CRPF Constables MG Naidu, and Nalla Upendra, earlier today. pic.twitter.com/lqBV20GBIU
— ANI (@ANI) July 15, 2019
Advertisement
ಬಾಲಕಿ ನದಿಯಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ನೋಡಿದ ಸಿಆರ್‌ಪಿಎಫ್ ಯೋಧರಲ್ಲಿ ಇಬ್ಬರು ನದಿಗೆ ಹಾರಿ ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಬಳಿಕ ಉಳಿದ ಯೋಧರು ಕೂಡ ನದಿಗೆ ಹಾರಿ ಮಾನವ ಸರಪಳಿಯನ್ನು ನಿರ್ಮಿಸಿದರು.
Advertisement
ಯೋಧರು ಸಿಆರ್‌ಪಿಎಫ್ ನ 176ನೇ ಬೆಟಾಲಿಯನ್‍ಗೆ ಸೇರಿದ್ದು, ಕೊನೆಗೆ ಬಾಲಕಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಯೋಧರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
Advertisement
#WATCH CRPF personnel saved a girl from drowning in Baramulla, Jammu and Kashmir, earlier today. pic.twitter.com/bORwRla6vV
— ANI (@ANI) July 15, 2019