ನವದೆಹಲಿ: ಸಿಆರ್‌ಪಿಎಫ್ ಯೋಧರೊಬ್ಬರು (CRPF Jawan) ಪಾಕಿಸ್ತಾನದ (Pakistan) ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಕೆಲಸ ಕಳೆದುಕೊಂಡಿದ್ದಾರೆ.
41ನೇ ಬೆಟಾಲಿಯನ್‍ನಲ್ಲಿ ಸಿಆರ್‍ಪಿಎಫ್ ಯೋಧರಾಗಿದ್ದ ಮುನೀರ್ ಅಹಮದ್ ಪಾಕಿಸ್ತಾನದ ಯುವತಿ ಮೆನಾಲ್ ಖಾನ್ ಅವರನ್ನ ಪ್ರೀತಿಸುತ್ತಿದ್ದರು. ಆಕೆಯ ಜೊತೆ ವಿವಾಹಕ್ಕೆ ಸಿಆರ್‍ಪಿಎಫ್ ಬಳಿ ಅನುಮತಿಯನ್ನು ಕೋರಿದ್ದರು. ಅವರಿಗೆ ಅನುಮತಿ ನೀಡುವ ಮುನ್ನವೇ ಮುನೀರ್ ಅವರು ವಿವಾಹವಾಗಿದ್ದರು. ಈಗ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಇದನ್ನೂ ಓದಿ: ಪಾಕ್‌ನಿಂದ ಆಮದಾಗುವ ಎಲ್ಲಾ ವಸ್ತುಗಳಿಗೆ ನಿರ್ಬಂಧ ವಿಧಿಸಿದ ಭಾರತ
ಸಿಆರ್‌ಪಿಎಫ್ ಯೋಧನಿಗೆ ಪಾಕ್ ಯುವತಿಯನ್ನು ವಿವಾಹವಾಗಲು ಎನ್‍ಓಸಿ ನೀಡಿರಲಿಲ್ಲ. ಅಲ್ಲದೇ ತನ್ನ ಪತ್ನಿ ಮೆನಾಲ್ ಖಾನ್ ಅನಧಿಕೃತವಾಗಿ ಭಾರತದಲ್ಲಿ ವಾಸಿಸುತ್ತಿರುವ ಬಗ್ಗೆ ಮುನೀರ್ ಅಹಮದ್ ಅವರು ಸಿಆರ್‍ಪಿಎಫ್‍ಗೂ ಮಾಹಿತಿ ನೀಡಿರಲಿಲ್ಲ. ಈಗ ಸಿಆರ್‍ಪಿಎಫ್ ಯೋಧ ಮುನೀರ್ ಅಹಮದ್ ವಿರುದ್ಧ ರಾಷ್ಟ್ರದ ಭದ್ರತೆಗೆ ಆತಂಕ ಮತ್ತು ಕಾನೂನು ಪ್ರಕ್ರಿಯೆಗಳ ಉಲ್ಲಂಘನೆ ಆರೋಪ ಕೇಳಿ ಬಂದಿದೆ.
ಪಹಲ್ಗಾಮ್‍ನಲ್ಲಿ ಉಗ್ರರ ದಾಳಿ ಬಳಿಕ ಪಾಕ್ ಪ್ರಜೆಗಳು ದೇಶ ತೊರೆಯುವಂತೆ ಕೇಂದ್ರ ಆದೇಶಿಸಿತ್ತು. ಇದರಿಂದ ಪತ್ನಿಯನ್ನು ಪಾಕಿಸ್ತಾನಕ್ಕೆ ಕಳುಹಿಸುವಾಗ ಮುನೀರ್ ಅಹಮದ್ ಭಾವುಕರಾಗಿದ್ದರು. ಇದನ್ನೂ ಓದಿ: ಜಲ ಮಾರ್ಗ ಬಂದ್ – ಪಾಕ್‌ಗೆ ಹೋಗುವ, ಬರುವ ಹಡಗುಗಳ ಸಂಚಾರಕ್ಕೆ ಬ್ರೇಕ್ ಹಾಕಿದ ಭಾರತ