ರಾಯ್ಪುರ: ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರೊಬ್ಬರು ಹುತಾತ್ಮರಾಗಿರುವ ಘಟನೆ ಛತ್ತೀಸ್‍ಗಢದ ದಂತೇವಾಡದ ಬೊಡ್ಲಿ ಬಳಿ ನಡೆದಿದೆ.
ಹುತಾತ್ಮರಾದ ಯೋಧ ಬಿಹಾರದ ನವಾಡಾ ಮೂಲದ ರೋಶನ್ ಕುಮಾರ್ ಎಂದು ಗುರುತಿಸಲಾಗಿದೆ. ಅವರು ಸಿಆರ್‌ಪಿಎಫ್ ನ 195 ಬೆಟಾಲಿಯನ್‍ನ ಭಾಗವಾಗಿದ್ದರು. ಮಂಗಳವಾರ ಬೆಳಿಗ್ಗೆ 6:15 ರ ಸುಮಾರಿಗೆ ದಂತೇವಾಡ-ಜಗದಾಲ್‍ಪುರ ಗಡಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಗಡಿಯಲ್ಲಿದ್ದ ಮಾಲೆವಾಹಿ ಸಿಆರ್‌ಪಿಎಫ್ ಶಿಬಿರದಿಂದ ಸುಮಾರು 700 ಮೀಟರ್ ದೂರದಲ್ಲಿ ಈ ಸ್ಫೋಟ ಸಂಭವಿಸಿದೆ.
Advertisement
Advertisement
ಸ್ಫೋಟಗೊಂಡ ಐಇಡಿ ಬಾಂಬ್‍ನಲ್ಲಿ ಒತ್ತಡದ ಕಾರ್ಯವಿಧಾನವನ್ನು ಬಳಸಲಾಗಿದೆ ಎಂದು ವರದಿಯಾಗಿದ್ದು, ಸ್ಫೋಟಗೊಂಡ ಪ್ರದೇಶದಲ್ಲಿ ಯೋಧ ಕಾರ್ಯನಿರ್ವಹಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
Advertisement
ಸದ್ಯ ಮೃತ ಜವಾನ್ ರೋಶನ್ ಕುಮಾರ್ ಅವರ ಮೃತದೇಹವನ್ನು ಛತ್ತೀಸ್‍ಗಢದ ಬರ್ಸೂರ್ ಗೆ ತಂದು ಬಳಿಕ ಸ್ವಗ್ರಾಮಕ್ಕೆ ಮೃತದೇಹವನ್ನು ರವಾನಿಸಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.