ಶ್ರೀನಗರ: ಪಾರ್ಶ್ವವಾಯು ಪೀಡಿತ ಮಗುವಿಗೆ ಸಿಆರ್‍ಪಿಎಫ್ ಯೋಧರೊಬ್ಬರು ಕೈತುತ್ತು ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಶಂಸೆಗೆ ಪಾತ್ರವಾಗಿದೆ.
ಸಿಆರ್‌ಪಿಎಫ್ ಯೋಧ ಇಕ್ಬಾಲ್ ಸಿಂಗ್ ಅವರು ಶ್ರೀನಗರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಈ ವೇಳೆ ತಮ್ಮ ಬುತ್ತಿಯನ್ನು ತೆಗೆದುಕೊಂಡು, ಪಾರ್ಶ್ವವಾಯು ಪೀಡಿತ ಬಾಲಕನಿಗೆ ಉಣಿಸಿದ್ದಾರೆ.
Advertisement
ಬಾಲಕನಿಗೆ ಕೈತುತ್ತು ನೀಡಿ, ನೀರು ಕುಡಿಸಿ ಬಾಯಿಯನ್ನು ಸ್ವಚ್ಛ ಮಾಡಿದ್ದಾರೆ. ಸ್ವಂತ ಮಗನ ಪ್ರೀತಿಯನ್ನು ಇಕ್ಬಾಲ್ ಸಿಂಗ್ ಅವರು ಬಾಲಕನಿಗೆ ನೀಡಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
Advertisement
#WATCH CRPF Havaldar Iqbal Singh deployed in Srinagar feeds his lunch to a paralytic child. He has been awarded with DG's Disc & Commendation Certificate for his act; He was driving a vehicle in the CRPF convoy on Feb 14 at the time of Pulwama terrorist attack. (13th May) pic.twitter.com/WH0sPlB9Vr
— ANI (@ANI) May 14, 2019
Advertisement
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇಕ್ಬಾಲ್ ಸಿಂಗ್ ಅವರ ಕಾಳಜಿ, ಪ್ರೀತಿ, ಮಾನವೀಯತೆ ಅನೇಕರ ಪ್ರಶಂಸೆಗೆ ಪಾತ್ರವಾಗಿದೆ. ಇಕ್ಬಾಲ್ ಸಿಂಗ್ ಅವರ ಮಾನವೀಯ ಕಾರ್ಯಕ್ಕೆ ಪೊಲೀಸ್ ಮಹಾ ನಿರ್ದೇಶಕರು ಮೆಚ್ಚುಗೆ ಪ್ರಮಾಣ ಪತ್ರವನ್ನು ನೀಡಿದ್ದಾರೆ.
Advertisement
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ 14 ರಂದು ಉಗ್ರರು ನಡೆಸಿದ ದಾಳಿಯ ವೇಳೆ ಇಕ್ಬಾಲ್ ಸಿಂಗ್ ಅವರು ಕೂಡ ವಾಹನವೊಂದನ್ನು ಚಲಾಯಿಸುತ್ತಿದ್ದರು.
अब तो मज़हब कोई ऐसा भी चलाया जाए
जिसमें इंसान को इंसान बनाया जाए
-श्री गोपालदास ‘नीरज’ https://t.co/MTn1hhIYTD
— ????????CRPF???????? (@crpfindia) May 14, 2019