ಬೆಂಗಳೂರು: ಸಸ್ಯಕಾಶಿ ಲಾಲ್ ಬಾಗ್ (Lalbagh) ನಲ್ಲಿ ಶುಕ್ರವಾರದಿಂದ ಫ್ಲವರ್ ಶೋ ಆರಂಭವಾಗಿದ್ದು, ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು. ಇಂದಿನಿಂದ ಸಾರ್ಜಜನಿಕರಿಗೆ ಫಲಪುಷ್ಟ ಪರ್ದಶನದ ವೀಕ್ಷಣೆಗೆ ಅವಕಾಶ ಕಲ್ಪಸಲಾಗಿದ್ದು, ವೀಕ್ ಎಂಡ್ ಆಗಿರೋದ್ರಿಂದ ಜನಸಾಗರವೇ ಇಂದು ಫ್ಲವರ್ ಶೋಗೆ (Flower Show) ಬಂದಿತ್ತು.
ಹೂಗಳಿಂದ ನಿರ್ಮಾಣವಾಗಿರುವ ವಿಧಾನಸೌಧ (Vidhanasoudha), ಕೆಂಗಲ್ ಹನುಮಂತಯ್ಯನವರ ಪ್ರತಿಮೆ, ಸತ್ಯಾಗ್ರಹ ಮಂಟಪ ಇದೆಲ್ಲವೂ ಕಂಡು ಬಂದಿದ್ದು, ಲಾಲ್‍ಬಾಗ್‍ನಾ ಫ್ಲವರ್ ಶೋನಲ್ಲಿ. ಹೌದು, ಸಸ್ಯಕಾಶಿ ಇಂದಿನಿಂದ 214ನೇ ಫ್ಲವರ್ ಶೋ ಆರಂಭವಾಗಿದ್ದು, ಈ ಹೂವಿನ ಲೋಕಕ್ಕೆ ಜನಸಾಗರವೇ ಹರಿದು ಬಂದಿತ್ತು. ಸೆಲ್ಫಿ ತೆಗೆದುಕೊಂಡು ಖುಷಿ ಪಟ್ರು.
ಹೂವಿನ ಕಲೆಯ ಕಲಾವಿದರಿಗಾಗಿಯೇ ಇಲ್ಲಿ ಇಕೆಬಾನೆ ಮತ್ತು ಕಲೆಗಳ ಸರ್ಧೆಯನ್ನ ಆಯೋಜನೆ ಮಾಡಲಾಗಿತ್ತು. ನಟಿ, ಕಾಂಗ್ರೆಸ್ ನಾಯಕಿ ಉಮಶ್ರೀ ಮತ್ತು ಹೈಕೋರ್ಟ್ ನ್ಯಾಯಮೂರ್ತಿ ಸಂದೀಪ್, ಕೆಂಗಲ್ ಹನುಮಂತಯ್ಯ ಅವ್ರ ಪುತ್ರಿ ಭೇಟಿ ನೀಡಿ ಸಂಭ್ರಮಿಸಿದ್ರು. ಇದನ್ನೂ ಓದಿ: ಮನೆ ಮುಂದೆ ಹೆಚ್ಚಿದ ಕಾರ್ ಪಾರ್ಕಿಂಗ್ – ಸಿಎಂ ನಿವಾಸದ ಎದುರು ಮನೆ ವ್ಯಕ್ತಿ ರಂಪಾಟ
ಇಂದು ಸರಿಸುಮಾರು 60 ಸಾವಿರಕ್ಕು ಅಧಿಕ ಜನರು ಪ್ಲವರ್ ಶೋ ವೀಕ್ಷಣೆ ಮಾಡಿದ್ದಾರೆ. ಇನ್ನೂ ಆಗಸ್ಟ್ 15 ರವರೆಗೆ ನಡೆಯಲಿರೋ ಈ ಶೋಗೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಬರುವ ನಿರೀಕ್ಷೆಯಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]