ರಾಯಚೂರು: ಜಿಲ್ಲೆಯ ದೇವದುರ್ಗ (Devadurga) ತಾಲೂಕಿನಲ್ಲಿ 2020-21 ರಿಂದ 2022-23ರವರೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಮಹಾ ಲೂಟಿ ನಡೆದಿರುವುದು ವಿಶೇಷ ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ವರದಿಯಲ್ಲಿ ಬಯಲಾದ ಬೆನ್ನಲ್ಲೇ ದೇವದುರ್ಗ ತಾಲೂಕು ಪಂಚಾಯ್ತಿಯ (Taluk Panchayat) ಹಿಂದಿನ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.
ಹಿಂದಿನ ಇಓ ಪಂಪಾಪತಿ ಹಿರೇಮಠ ಹಾಗೂ ಸಹಾಯಕ ನಿರ್ದೇಶಕ ಬಸಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ. ನರೇಗಾ ಕಾಮಗಾರಿಗಳ ಒಟ್ಟು 49.29 ಕೋಟಿ ರೂ. ಸರ್ಕಾರದ ಹಣ ನಷ್ಟ ಮಾಡಿದ ಆರೋಪ ಹಿನ್ನೆಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವದುರ್ಗ ತಾಲೂಕಿನ 33 ಗ್ರಾ.ಪಂ ನರೇಗಾ (NREGA) ಕಾಮಗಾರಿಯಲ್ಲಿ ಲೂಟಿಯಾಗಿರುವುದು ಬಯಲಾಗಿದ್ದು, ದೇವದುರ್ಗ ತಾ.ಪಂ ಸಹಾಯಕ ನಿರ್ದೇಶಕ ಅಣ್ಣಾರಾವ್ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಇಂದು ಬೆಂಗಳೂರಲ್ಲಿ 2ನೇ ದಿನದ ಕಂಬಳ – ಏನೇನಿದೆ ಕಾರ್ಯಕ್ರಮ?
Advertisement
Advertisement
115 ಕಾಮಗಾರಿಗಳು ಅನುಷ್ಠಾನಗೊಳ್ಳದೇ ಇದ್ದರೂ 66.86 ಕೋಟಿ ರೂ. ಪಾವತಿ ಮಾಡಲಾಗಿದೆ. ಅಸ್ತಿತ್ವದಲ್ಲೇ ಇರದ ಮಾರುತೇಶ್ವರ ಎಂಟರ್ಪ್ರೈಸ್ ಸಾಮಗ್ರಿ ಖರೀದಿ ಅಂತ 102 ಕೋಟಿ ರೂ. ಪಾವತಿ ಮಾಡಿದ್ದು, 19.26 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಕಡತಗಳೇ ಇಲ್ಲಾ. ಈ ಎಲ್ಲಾ ಗೋಲ್‌ಮಾಲ್‌ಗಳ ಹಿನ್ನೆಲೆ ಜಿಲ್ಲಾ ಪಂಚಾಯ್ತಿ ಸಿಇಓ ನಿರ್ದೇಶನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಹಣ ಲಪಟಾಯಿಸಿದ್ರೂ ಬಿಡದಿ ಇನ್ಸ್‌ಪೆಕ್ಟರ್ ಸಸ್ಪೆಂಡ್ ಯಾಕಿಲ್ಲ?- ಭ್ರಷ್ಟನಿಗೆ ರಾಜಕೀಯ ರಕ್ಷಣೆ ಎಂದ ಮಾಜಿ ಶಾಸಕ
Advertisement