ಎಲ್ಲಾ ರೈತರಿಗೂ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ಕೊಡಲು ಸಾಧ್ಯವಿಲ್ಲ: ಕೆ.ಎನ್.ರಾಜಣ್ಣ

Public TV
2 Min Read
KN Rajanna Legislative Council

ಬೆಂಗಳೂರು: ಎಲ್ಲಾ ರೈತರಿಗೆ ಬೆಳೆ ಸಾಲ (Crop Loan) ಕೊಡಲು ಸಾಧ್ಯವಿಲ್ಲ. ಲಭ್ಯತೆಗೆ ಅನುಗುಣವಾಗಿ ಸಾಲ ಕೊಡುವ ಕೆಲಸ ಮಾಡುತ್ತೇವೆ ಎಂದು ಸಹಕಾರಿ ಸಚಿವ ಕೆಎನ್ ರಾಜಣ್ಣ (KN Rajanna) ತಿಳಿಸಿದ್ದಾರೆ.

ವಿಧಾನ ಪರಿಷತ್ (Legislative Council) ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ನಾಯಕ್ ಪ್ರಶ್ನೆ ಕೇಳಿದರು. ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಬೆಳೆ ಸಾಲ ಮಿತಿಯನ್ನು 3 ಲಕ್ಷದಿಂದ 10 ಲಕ್ಷಕ್ಕೆ ಏರಿಸುವ ಭರವಸೆ ನೀಡಲಾಗಿತ್ತು. ಆದರೆ 5 ಲಕ್ಷ ಮಾತ್ರ ಹೆಚ್ಚಳ ಮಾಡಲಾಗಿದೆ. ಶೂನ್ಯ ಬಡ್ಡಿಯಲ್ಲಿ 10 ಲಕ್ಷ ಮತ್ತು 15 ಲಕ್ಷ ಸಾಲ ಕೊಡೋದಾಗಿ ಹೇಳಿದ್ದರು. ಅದರೆ ಸರ್ಕಾರ ಬಂದರು ಶೂನ್ಯ ಬಡ್ಡಿ ಸಾಲ ಜಾಸ್ತಿ ಮಾಡಿಲ್ಲ. ಬಿಜೆಪಿ ಅವಧಿಯ ಎಲ್ಲಾ ರೈತ ಪರ ಯೋಜನೆ ಸ್ಥಗಿತ ಮಾಡಲಾಗಿದೆ ಎಂದು ಪ್ರತಾಪ್ ಸಿಂಹ ನಾಯಕ್ ಆರೋಪ ಮಾಡಿದರು. ಇದನ್ನೂ ಓದಿ: ಕೊಂಕಣ ರೈಲ್ವೆ ವಿಲೀನ, ಮಂಗಳೂರು ರೈಲು ವ್ಯಾಪ್ತಿ ಪುನರ್ ರಚನೆ – ಲೋಕಸಭೆಯಲ್ಲಿ ಧ್ವನಿಯೆತ್ತಿದ ಕ್ಯಾ.ಬ್ರಿಜೇಶ್ ಚೌಟ

ಇದಕ್ಕೆ ಸಚಿವ ರಾಜಣ್ಣ ಉತ್ತರ ನೀಡಿ, 2023-24ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ ವಿತರಿಸುವ ಬೆಳೆ ಸಾಲ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. 2023-24ರಲ್ಲಿ 6,744 ರೈತರಿಗೆ 290.51 ಕೋಟಿ ಸಾಲ ನೀಡಲಾಗಿದೆ. 2024-25ರಲ್ಲಿ 13,689 ರೈತರಿಗೆ 589.12 ಕೋಟಿ ಸಾಲ ವಿತರಿಸಲಾಗಿದೆ. ನಮ್ಮ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದನ್ನು ಜಾರಿ ಮಾಡಿದ್ದೇವೆ. ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದನ್ನು ನಾವು ಈಡೇರಿಸುತ್ತೇವೆ. ಅದರ ಬದ್ಧತೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಹೆಚ್‌ಡಿಕೆ ವಿರುದ್ಧ ಕಾಂಗ್ರೆಸ್ ದ್ವೇಷದ ರಾಜಕಾರಣ : ಅಶ್ವಥ್ ನಾರಾಯಣ್ ಕಿಡಿ

ಕರ್ನಾಟಕಕ್ಕೆ ನಬಾರ್ಡ್ ಅಡಿ ಹಣ ಕಡಿತ ಮಾಡಲಾಗಿದೆ. ಇದರಿಂದ ಸಮಸ್ಯೆ ಆಗಿದೆ. ಅರ್ಹತೆ ಇರುವ ರೈತರಿಗೆ 5 ಲಕ್ಷ ಸಾಲ ಸೌಲಭ್ಯ ಕೊಡಲಾಗುತ್ತಿದೆ. ಸಹಕಾರ ಇಲಾಖೆಯಲ್ಲಿ ಕೊಡುವ ಸಾಲ ಸರ್ಕಾರದ ಹಣವಲ್ಲ. ನಬಾರ್ಡ್ ಹಣ, ಸಹಕಾರ ಬ್ಯಾಂಕ್ ಹಣದಲ್ಲಿ ಕೊಡುತ್ತಿದ್ದೇವೆ. ಸಾಲಕ್ಕಾಗಿ ಮಾತ್ರ ಸಹಕಾರಿ ಬ್ಯಾಂಕ್‌ಗಳಿಗೆ ಬರುತ್ತಾರೆ. ಆದರೆ ಬೇರೆ ವ್ಯವಹಾರ ಮಾಡಲು ಖಾಸಗಿ ಬ್ಯಾಂಕ್‌ಗೆ ಹೋಗುತ್ತಾರೆ. ಹೀಗೆ ಇದ್ದಾಗ ನಮ್ಮ ಬ್ಯಾಂಕ್‌ಗೆ ಹೇಗೆ ಹಣ ಬರುತ್ತದೆ. ಸಂಪೂರ್ಣವಾಗಿ ರೈತರಿಗೆ ಬೇಕಾದ ಸಾಲ ಕೊಡಲು ನಮ್ಮಿಂದ ಸಾಧ್ಯವಿಲ್ಲ. ಲಭ್ಯತೆಗೆ ಅನುಗುಣವಾಗಿ ಸಾಲಗಳನ್ನು ಕೊಡುವ ಕೆಲಸ ಮಾಡುತ್ತೇವೆ. ಹಣದ ಕೊರತೆ ಇದೆ. ಲಭ್ಯತೆಗೆ ಅನುಗುಣವಾಗಿ ಸಾಲವನ್ನ ರೈತರಿಗೆ ಕೊಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಹಾವೇರಿ ಸ್ವಾತಿ ಹತ್ಯೆ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರ – ಹದಗೆಟ್ಟ ಕಾನೂನು ವ್ಯವಸ್ಥೆ, ಗೂಂಡಾ ರಾಜ್ಯ ಎಂದ ಅಶೋಕ್

Share This Article