ಧಾರವಾಡ: ಈ ಬಾರಿ ಅತಿಯಾದ ಮಳೆಯಿಂದ ರಾಜ್ಯದಾದ್ಯಂತ ಸಾಕಷ್ಟು ಬೆಳೆ ನಾಶವಾಗಿದ್ದು, ಈಗಾಗಲೇ ಜಂಟಿ ಸಮೀಕ್ಷೆ ಮಾಡಲು ಹೇಳಿದ್ದೇವೆ. ರೈತರಿಗೆ ಆದಷ್ಟು ಬೇಗ ಪರಿಹಾರ (Crop Relief) ಕೊಡುತ್ತೇವೆ. ದುಡ್ಡಿಗೆ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.
ಧಾರವಾಡದ (Dharwad) ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಕೃಷಿ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಧಾರವಾಡದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮುತುವರ್ಜಿಯಿಂದ ಶೀಘ್ರ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ್ದಾರೆ ಎಂದು ಡಿಸಿ ಹಾಗೂ ಸಚಿವರಿಗೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ದಸರಾ ಉದ್ಘಾಟಕಿ ಬಾನು ಮುಷ್ತಾಕ್‌ಗೆ ಹೈಕೋರ್ಟ್ ಸಿಗ್ನಲ್ – ವಾದ, ಪ್ರತಿವಾದ ಹೇಗಿತ್ತು?
ನಮ್ಮ ದೇಶ ಕೃಷಿ ಪ್ರಧಾನ ರಾಷ್ಟ್ರ. ನಾಗರಿಕತೆ ಆರಂಭ ಆದ ಮೇಲೆ ಕೃಷಿಯನ್ನೇ ಮಾಡುತ್ತ ಬರಲಾಗಿದೆ. ಭಾರತದಲ್ಲಿ ಜನಸಂಖ್ಯೆ ಏರುತ್ತಿದೆ. ಇಡೀ ಜಗತ್ತಲ್ಲೇ ಹೆಚ್ಚು ಜನಸಂಖ್ಯೆ ಇರುವ ದೇಶ ಭಾರತ. ಚೀನಾ ಜನಸಂಖ್ಯೆಯಲ್ಲಿ ಮುಂದೆ ಇತ್ತು. ಈಗ ನಾವು ಅವರನ್ನು ಹಿಂದೆ ಹಾಕಿ ಮುಂದೆ ಬಂದಿದ್ದೇವೆ. ಇಷ್ಟೂ ಜನರಿಗೆ ಆಹಾರ ಹಾಕಬೇಕು. ದೇಶದಲ್ಲಿ ಹಸಿರು ಕ್ರಾಂತಿ ಆದ ಮೇಲೆ ಆಹಾರ ಭದ್ರತೆ ಬಂದಿದೆ. ಆಹಾರ ಉತ್ಪಾದನೆ ಈಗ ಆಗುತ್ತಿಲ್ಲ, ಅದು ಸ್ಥಗಿತ ಆಗಿದೆ. ಇದಕ್ಕೆ ಕಾರಣ ಮಣ್ಣಿನ ಫಲವತ್ತತೆ. ಇದನ್ನು ಕೃಷಿ ವಿವಿಯವರು ಗಮನಕ್ಕೆ ತೆಗೆದುಕೊಳ್ಳಬೇಕು ಎಂದರು. ಇದನ್ನೂ ಓದಿ: Hassan Tragedy – ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳಿದ ನಿಶ್ಚಲಾನಂದನಾಥ ಶ್ರೀ
ಜನಸAಖ್ಯೆ ಬೆಳೆದಂತೆ ಹೆಚ್ಚು ಆಹಾರ ಉತ್ಪಾದನೆ ಮಾಡಬೇಕು. ಸ್ವತಂತ್ರ ಬಂದಾಗ ಆಹಾರ ಉತ್ಪಾದನೆ ಇರಲಿಲ್ಲ, ಸ್ವಾವಲಂಬನೆ ಇತ್ತು. ಬೇರೆ ದೇಶದಿಂದ ಆಗ ಆಹಾರ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ರಪ್ತು ಮಾಡುತ್ತಿದ್ದೇವೆ. ಜನಸಂಖ್ಯೆಗೆ ತಕ್ಕ ಆಹಾರ ಇರಬೇಕು. ಕೃಷಿ ವಿವಿ ಇದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸರ್ಕಾರ ಕೃಷಿಗೆ ಆದ್ಯತೆ ಕೊಟ್ಟಿದೆ. ಮುಂದೆಯೂ ಕೊಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಧಾರವಾಡ-ಬೆಳಗಾವಿ ನೇರ ರೈಲು ಯೋಜನೆ ವಿಳಂಬಕ್ಕೆ ರಾಜ್ಯ ಸರ್ಕಾರ, ಸಂತೋಷ್ ಲಾಡ್ ಕಾರಣ: ಸೋಮಣ್ಣ
ನಮ್ಮ ರಾಜ್ಯ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಗುಜರಾತ್ ಒಂದನೇ ಸ್ಥಾನದಲ್ಲಿದೆ. ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ನಮ್ಮ ರಾಜ್ಯದಲ್ಲಾಗುತ್ತಿದೆ. ಮುಂದೆ ನಂಬರ್ ಒನ್ ಸ್ಥಾನಕ್ಕೆ ನಾವು ಹೋಗಬೇಕು. ಒಂದೇ ಬೆಳೆ ಬೇಳೆಯುವಂತೆ ಆಗಬಾರದು. ತೋಟಗಾರಿಕೆ, ತರಕಾರಿ, ಭತ್ತ, ರಾಗಿ ಬೆಳೆಯಬೇಕು. ಬಹಳ ಜನರಿಗೆ ಈಗ ಮಧುಮೇಹ ಇದೆ. ಹೀಗಾಗಿ ಸಿರಿಧಾನ್ಯ ಬೆಳೆಯಲು ನಾವು ಸಬ್ಸಿಡಿ ಕೊಡುತ್ತಿದ್ದೇವೆ. ಹೆಚ್ಚು ಸಿರಿ ಧಾನ್ಯ ಬೆಳೆಯಬೇಕು. ಮನುಷ್ಯನಿಗೆ ಆಹಾರ ಪದ್ಧತಿಯಿಂದ ದೈಹಿಕ ಕಾಯಿಲೆ ಬರುತ್ತಿವೆ. ಕೃಷಿ ವಿಜ್ಞಾನಿಗಳು ಇದನ್ನ ಗಮನಕ್ಕೆ ತೆಗೆದುಕೊಳ್ಳಬೇಕು. ಅಕ್ಕಿ, ಗೋಧಿಯಲ್ಲಿ ಸಕ್ಕರೆ ಇದೆ. ಸಿರಿಧಾನ್ಯದಲ್ಲಿ ಸಕ್ಕರೆ ಕಡಿಮೆ ಇದೆ. ಹೀಗಾಗಿ ಅವುಗಳನ್ನು ಬೆಳೆಯಬೇಕು. ಸಂಶೋಧನೆಗೆ ಹೆಚ್ಚು ಒತ್ತು ಕೊಡಬೇಕು. ಹೊಸ ತಳಿ ಬಂದ ಮೇಲೆ ಅವು ರೈತರಿಗೆ ತಲುಪಬೇಕು. ಲ್ಯಾಬ್ ಟು ಲ್ಯಾಂಡ್ ಆಗಬೇಕು ಮತ್ತು ಲ್ಯಾಂಡ್ ಟು ಲ್ಯಾಬ್ ಆಗಬೇಕು. ಇವತ್ತು ಮತ್ತು ನಿನ್ನೆ ಕೃಷಿ ಮೇಳಕ್ಕೆ 6 ಲಕ್ಷ ರೈತರು ಬಂದಿದ್ದಾರೆ. ನಾವು ಭಾಗವಹಿಸಿ ಹೇಳೋದು ಒಂದು ಭಾಗ. ಆದರೆ, ರೈತರು ಭಾಗವಹಿಸುವುದು ಮುಖ್ಯ. ಹೊಸ ತಳಿ, ಹೊಸ ಬೀಜ, ಹೊಸತು ಏನೆಲ್ಲಾ ಇದೆ ಎಂದು ತಿಳಿಯಬೇಕು. ಇದರಿಂದ ಸಮೃದ್ಧಿ ಆಗಲಿದೆ ಎಂದು ನುಡಿದರು. ಇದನ್ನೂ ಓದಿ: ಹಾಸನ ದುರಂತ – ಕಂಬನಿ ಮಿಡಿದ ಟ್ರಕ್ ಚಾಲಕನ ಗ್ರಾಮಸ್ಥರು
ಹಿಂದೆ ಗ್ರಾಮಸೇವಕರು ಇದ್ದರು. ಈಗ ಅವರು ಕಡಿಮೆಯಾಗಿದ್ದಾರೆ. ಅವರು ರೋಗಕ್ಕೆ ಔಷಧಿ ಕೊಡುತ್ತಿದ್ದರು, ಈಗ ಅದು ಕಡಿಮೆಯಾಗಿದೆ. ಕೃಷಿ ಇಲಾಖೆ ಮತ್ತು ಕೃಷಿ ವಿವಿ, ರೈತರ ನಡುವೆ ಸೇತುವೆ ನಿರ್ಮಾಣ ಮಾಡಬೇಕು. ನವಲಗುಂದದಲ್ಲಿ ಬೆಣ್ಣೆ ಹಳ್ಳ ಇದೆ. ಅದಕ್ಕೆ ಪ್ರವಾಹ ಬಂದಾಗ ರೈತರಿಗೆ ತೊಂದರೆ ಆಗುತ್ತಿದೆ. ಅದಕ್ಕಾಗಿ ನಮ್ಮ ಸರ್ಕಾರ 200 ಕೋಟಿ ಕೊಟ್ಟಿದೆ. ಟೆಂಡರ್ ಕೂಡ ಆಗಲಿದೆ ಎಂದರು. ಇದನ್ನೂ ಓದಿ: 14 ಸೈಟ್ ನುಂಗಿದ ನೀವು ನನಗೆ ಹೇಳಲು ಬರೋದು ಬೇಡ: ಸಿಎಂಗೆ ಪ್ರತಾಪ್ ತಿರುಗೇಟು