ಬೆಳಗಾವಿ: ಕೃಷ್ಣಾ ನದಿಯ ಪ್ರವಾಹಕ್ಕೆ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾದ ಪರಿಣಾಮ ಆಹಾರ ಅರಸುತ್ತಾ ಜನವಸತಿ ಪ್ರದೇಶದತ್ತ ಮೊಸಳೆ ಬಂದಿದ್ದು, ಗ್ರಾಮಸ್ಥರು ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ನಡೆದಿದೆ.
ಸತ್ತಿ ಗ್ರಾಮದ ನಂದೇಶ್ವರ ರಸ್ತೆಗೆ ಹೊಂದಿಕೊಂಡಿರುವ ಅತ್ತಾರ ಜನವಸತಿ ಕಡೆ ಮೊಸಳೆ ಬಂದಿದೆ. ತೋಟದಲ್ಲಿ ಕೆಲಸ ಮಾಡುತ್ತಿರುವವರಿಗೆ ವಿಚಿತ್ರ ಶಬ್ದ ಕೇಳಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಶಬ್ದ ಕೇಳಿ ಬಂದ ಸ್ಥಳಕ್ಕೆ ಸ್ಥಳೀಯರು ದೌಡಾಯಿಸಿದಾಗ ಮೊಸಳೆ ಇರುವುದು ಅವರ ಗಮನಕ್ಕೆ ಬಂದಿದೆ. ಬಳಿಕ ಜನವಸತಿ ಪ್ರದೇಶದ ಜನ ಮೊಸಳೆಯನ್ನು ಹಿಂಬಾಲಿಸಿ ಹಗ್ಗದಿಂದ ಕಟ್ಟಿ ಹಾಕಿದ್ದಾರೆ.
Advertisement
Advertisement
ಕೃಷ್ಣಾ ನದಿಯ ಪ್ರವಾಹದಿಂದ ಜನರು ಈಗಾಗಲೇ ಕಂಗಾಲಾಗಿದ್ದಾರೆ. ಹೀಗಿರುವಾಗ ಈಗ ಜನರಿಗೆ ಹಾವು, ಕ್ರಿಮಿಕೀಟಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಈ ಮೊಸಳೆಗಳಂತ ದೊಡ್ಡ ಪ್ರಾಣಿಗಳಿಗೆ ನದಿ ದಂಡೆಯ ಜನರು ಭಯಭೀತರಾಗಿದ್ದಾರೆ.
Advertisement
ಈ ಬಗ್ಗೆ ಅಥಣಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೊಸಳೆಯನ್ನು ತಮ್ಮ ವಶಕ್ಕೆ ಪಡೆದು ಬೇರೆಡೆಗೆ ಸಾಗಿಸಿದ್ದಾರೆ.