ಚಾಮರಾಜನಗರ/ಕೊಪ್ಪಳ: ಹೊಗೆನಕಲ್ ಜಲಪಾತ ವೀಕ್ಷಣೆಗೆ ನದಿ ಮಧ್ಯ ಭಾಗಕ್ಕೆ ಹೋಗಲು ನಿರ್ಮಿಸಲಾಗಿರುವ ಸೇತುವೆ ಮುಳುಗಡೆಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ಹೊಗೆನಕಲ್ ಜಲಪಾತಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.
ಕೆಆರ್ ಎಸ್ ಹಾಗು ಕಬಿನಿ ಜಲಾಶಯಗಳಿಂದ ಒಂದು ಲಕ್ಷ ಕ್ಯೂಸೆಕ್ ಗೂ ಹೆಚ್ಚು ನೀರು ಬಿಡುಗಡೆ ಮಾಡಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಕಾವೇರಿ ನದಿ ಕರ್ನಾಟಕ ಗಡಿಯಿಂದ ತಮಿಳುನಾಡು ಗಡಿ ಪ್ರವೇಶಿಸುವ ಜಿಲ್ಲೆಯ ಹೊಗೆನಕಲ್ ನಲ್ಲಿ ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹೀಗಾಗಿ ಸೇತುವೆ ಮುಳುಗಡೆಯಾಗಿದೆ.
Advertisement
Advertisement
ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ ಮಾಡಿದ ಬೆನ್ನಲ್ಲೇ ಕೊಪ್ಪಳದ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ಆನೆಗೊಂದಿ- ಕಡೆಬಾಗಿಲು ಸೇತುವೆ ಸಮೀಪದಲ್ಲೇ ಮೊಸಳೆ ಕಾಣಿಸಿಕೊಂಡಿದೆ. ಸಾರ್ವಜನಿಕರು ಇದರ ವಿಡಿಯೋ ಮಾಡಿದ್ದಾರೆ. ಜನ ಸಾಮಾನ್ಯರು ಓಡಾಡುವ ಸ್ಥಳದಲ್ಲೇ ಮೊಸಳೆ ಕಾಣಿಸಿಕೊಂಡಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.
Advertisement