ಬಳ್ಳಾರಿ: ನದಿಯಲ್ಲಿ ಮೊಸಳೆ ಕಚ್ಚಿದ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ನಡೆದಿದೆ.
ನಿಟ್ಟೂರು ಗ್ರಾಮದ ರೈತ ವೀರೇಶ್ (38) ಮೃತ ದುರ್ದೈವಿಯಾಗಿದ್ದು, ನದಿಯಲ್ಲಿ ಈಜಿಕೊಂಡು ಕೃಷಿ ಚಟುವಟಿಕೆಗೆ ತೆರಳುತ್ತಿದ್ದ ವೇಳೆ ಏಕಾಏಕಿ ಬಂದ ಮೊಸಳೆ ದಾಳಿ ನಡೆಸಿದ ಪರಿಣಾಮ ವೀರೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಹತ್ತಾರು ಎಕರೆ, ಮಾವಿನ ತೋಪು, ನಿರ್ಜನ ಪ್ರದೇಶ – ನೂರಾರು ಜನ… ಕೋಟಿ ಕೋಟಿ ವ್ಯವಹಾರ!
ತೊಡೆ ಭಾಗದಲ್ಲಿ ಕಚ್ಚಿದ ಪರಿಣಾಮ ರೈತ ವೀರೇಶ್ ಸಾವನ್ನಪ್ಪಿದ್ದು, ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಒಂದು ವಾರದಲ್ಲಿ ಇದು ಎರಡನೇ ಮೊಸಳೆ ದಾಳಿ ಪ್ರಕರಣ ಆಗಿದ್ದು, ನದಿ ಪಾತ್ರದಲ್ಲಿ ಕನಿಷ್ಠ ಪಕ್ಷ ಎಚ್ಚರಿಕೆಯ ನಾಮಪಲಕ ಹಾಕಿಲ್ಲ ಎಂದು ಅರಣ್ಯ ಇಲಾಖೆಯ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.