ರಾಯಚೂರು: ಎತ್ತುಗಳಿಗೆ ಸ್ನಾನ ಮಾಡಿಸಲು ಕೆರೆಗೆ ಹೋಗಿದ್ದ ರೈತನ ಮೇಲೆ ಮೊಸಳೆ ದಾಳಿ ನಡೆಸಿರುವ ಘಟನೆ ರಾಯಚೂರಿನ (Raichuru) ಸರ್ಜಾಪುರದಲ್ಲಿ (Sarjapura) ನಡೆದಿದೆ.
ಗಾಯಗೊಂಡ ರೈತನನ್ನು ಸರ್ಜಾಪುರ ಗ್ರಾಮದ ಮಹಾನಂದ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: Kolar | ಮೊಬೈಲ್‌ನಲ್ಲಿ ರೀಲ್ಸ್ ನೋಡ್ತಾ ಬಸ್ ಚಾಲನೆ – ಚಾಲಕ ಅಮಾನತು
- Advertisement
ಕೆರೆಯಲ್ಲಿ ಎತ್ತುಗಳಿಗೆ ಸ್ನಾನ ಮಾಡಿಸುವಾಗ ಮೊಸಳೆ ದಾಳಿ ಮಾಡಿದೆ. ಇದರಿಂದ ರೈತನಿಗೆ ಬಲಗಾಲಿಗೆ ಗಂಭೀರ ಗಾಯವಾಗಿದ್ದು, ರೈತನನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆ ಹಿಡಿಯಲು ಕಾರ್ಯಾಚರಣೆ ನಡೆಸಿ, ಗ್ರಾಮಸ್ಥರ ಸಹಾಯದೊಂದಿಗೆ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ.
- Advertisement
ಇನ್ನೂ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆಯನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ. ಮೊಸಳೆ ಸೆರೆ ಸಿಕ್ಕ ಹಿನ್ನೆಲೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಕೆರೆಯಲ್ಲಿ ಇನ್ನೂ ಎರಡು ಮೊಸಳೆಗಳು ಇರುವ ಬಗ್ಗೆ ಶಂಕೆಯಿದ್ದು, ಆ ಎರಡು ಮೊಸಳೆಗಳನ್ನು ಹಿಡಿಯುವಂತೆ ಒತ್ತಾಯಿಸಿದ್ದಾರೆ.ಇದನ್ನೂ ಓದಿ: Union Budget 2025: 77 ನಿಮಿಷಗಳ ಕಾಲ 8ನೇ ಬಜೆಟ್ ಮಂಡಿಸಿದ ಸೀತಾರಾಮನ್