ಬೆಂಗಳೂರು: ನಾದಬ್ರಹ್ಮ ಹಂಸಲೇಖ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಬಸವನಗುಡಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದು ಪಡಿಸುವಂತೆ ಕೋರಿ ಹಂಸಲೇಖ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ ಕೋರ್ಟ್ ತನಿಖೆಗೆ ತಡೆಯಾಜ್ಞೆ ನೀಡಿದೆ. ಇದನ್ನೂ ಓದಿ: ಡಿಕೆಶಿ ಭಂಡಾಸುರ, ಸಿದ್ದರಾಮಯ್ಯ ಮಂಡಾಸುರ: ಶ್ರೀರಾಮುಲು ವ್ಯಂಗ್ಯ
Advertisement
ಹಂಸಲೇಖ ಪರವಾಗಿ ವಕೀಲ ಕಾಶೀನಾಥ್, ಸಿಎಸ್ ದ್ವಾರಕಾನಾಥ್ ವಾದಿಸಿದ್ದರು.
Advertisement
Advertisement
ಪೇಜಾವರ ಶ್ರೀಗಳ ವಿರುದ್ಧ ಟೀಕೆ ಮಾಡಿದ್ದಾರೆ ಎಂದು ಹಂಸಲೇಖ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಅವರು ಬಸವನಗುಡಿ ಠಾಣೆಗೆ ಹಾಜರಾಗಿ ಕ್ಷಮೆಯಾಚಿಸಿದ್ದರು.
Advertisement
ವಿಚಾರಣೆಯ ಸಂದರ್ಭದಲ್ಲಿ 30ಕ್ಕೂ ಹೆಚ್ಚು ಪ್ರಶ್ನೆಗಳನ್ನು ಪೊಲೀಸರು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಹಂಸಲೇಖ, ನನ್ನ ಮಾತುಗಳು ಇಷ್ಟೊಂದು ಸ್ವರೂಪ ಪಡೆದುಕೊಳ್ಳುತ್ತೆ ಅಂತಾ ಗೊತ್ತಿರಲಿಲ್ಲ. ಯಾಕೆ ಹಾಗೆ ಹೇಳಿದ್ದೇನೋ ಗೊತ್ತೇ ಆಗ್ಲಿಲ್ಲ. ಯಾವ ಉದ್ದೇಶವು ನನ್ನಲ್ಲಿ ಇರಲಿಲ್ಲ. ಮಾತನಾಡುವ ಬರದಲ್ಲಿ ಹಾಗೆ ಹೇಳಿದ್ದೇನೆ. ನನ್ನ ಹೆಂಡತಿಯೇ ಬೇಸರ ವ್ಯಕ್ತಿ ಪಡಿಸಿದ್ದಾರೆ. ನನ್ನ ಹೇಳಿಕೆಯಿಂದ ತಪ್ಪಾಗಿದೆ. ಯಾವುದೇ ಧರ್ಮ, ಸಮಾಜ ಜಾತಿಯನ್ನ ನಿಂದಿಸೋ ಉದ್ದೇಶ ನನ್ನದಲ್ಲ. ಈ ಘಟನೆಯಿಂದ ತನಗೆ ತುಂಬಾ ನೋವಾಗಿದೆ ಅಂತ ತನಿಖಾ ಅಧಿಕಾರಿ ಮುಂದೆ ಗದ್ಗದಿತರಾಗಿದ್ದರು.