ವಾಷಿಂಗ್ಟನ್: ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬೆಂಗಳೂರು ಮಹಿಳೆಯನ್ನು ಯುಎಸ್‌ನ ಫೋರ್ಟ್‌ಲ್ಯಾಂಡ್‌ನಿಂದ 26 ಗಂಟೆ ಅವಧಿಯಲ್ಲಿ ಭಾರತದ ಚೆನ್ನೈಗೆ ಏರ್‌ಲಿಫ್ಟ್ ಮಾಡಲಾಯಿತು.
ಬೆಂಗಳೂರು ಮೂಲದವರಾದ 67 ವಯಸ್ಸಿನ ಮಹಿಳೆಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಭಾರತದ ಚೆನ್ನೈಗೆ ಅಮೆರಿಕದಿಂದ ಏರ್‌ಲಿಫ್ಟ್ ಮಾಡಲಾಯಿತು. ಯುನೈಟೆಡ್ ಸ್ಟೇಟ್ಸ್‌ನ ಪೋರ್ಟ್‌ಲ್ಯಾಂಡ್‌ನಿಂದ 26 ಗಂಟೆಗಳ ಏರ್ ಆಂಬುಲೆನ್ಸ್ ವಿಮಾನದಲ್ಲಿ ಐಸ್‌ಲ್ಯಾಂಡ್ ಮತ್ತು ಟರ್ಕಿ ಮೂಲಕ ಚೆನ್ನೈಗೆ ತಲುಪಿಸಲಾಯಿತು. ಇದನ್ನೂ ಓದಿ: ಕೊಲೊಂಬೊದಲ್ಲಿ ನಡೆದ ದಾಳಿಯಲ್ಲಿ ಭಾರತೀಯ ಅಧಿಕಾರಿಗೆ ಗಂಭೀರ ಗಾಯ
Advertisement
Advertisement
ಏರ್‌ಲಿಫ್ಟ್‌ಗೆ ಸುಮಾರು 1 ಕೋಟಿ ರೂ.ಗಿಂತಲೂ (133,000 ಡಾಲರ್) ವೆಚ್ಚವಾಗಿದೆ. ರೋಗಿಯು ಇಂದಿರಾನಗರದ ನಿವಾಸಿ ಎಂದು ಗುರುತಿಸಲಾಗಿದೆ. ಕೆಲವು ವರ್ಷಗಳ ಕಾಲ ತನ್ನ ಮಕ್ಕಳೊಂದಿಗೆ ಒರೆಗಾನ್‌ನಲ್ಲಿ ವಾಸವಾಗಿದ್ದರು. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ಅಮೆರಿಕದಿಂದ ಏರ್‌ಲಿಫ್ಟ್ ಮಾಡಲಾಗಿದೆ.
Advertisement
ಏರ್ ಆಂಬ್ಯುಲೆನ್ಸ್ ಮಂಗಳವಾರ ನಸುಕಿನ ಜಾವ 2:10 ಕ್ಕೆ ಚೆನ್ನೈಗೆ ಬಂದಿಳಿಯಿತು. ನಂತರ ಮಹಿಳೆಯನ್ನು ಆಂಬುಲೆನ್ಸ್‌ನಲ್ಲಿ ಅಪೋಲೋ ಆಸ್ಪತ್ರೆಗೆ ಸಾಗಿಸಿ ದಾಖಲಿಸಲಾಗಿದೆ. ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ರಕ್ಷಣೆ – ಮಸೂದೆ ಅಂಗೀಕರಿಸಿದ ಯುಎಸ್ ಹೌಸ್
Advertisement
ಅಮೆರಿಕದಲ್ಲಿ ಚಿಕಿತ್ಸಾ ವೆಚ್ಚ ತುಂಬಾ ದುಬಾರಿ. ಅಲ್ಲಿ ಚಿಕಿತ್ಸೆಗೆ ವ್ಯಯಿಸಬಹುದಾದ ಹಣದಲ್ಲಿ ಭಾರತಕ್ಕೆ ಏರ್‌ಲಿಫ್ಟ್ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬಹುದು ಎಂದು ಮಹಿಳೆಯನ್ನು ಭಾರತಕ್ಕೆ ಕರೆತರಲಾಗಿದೆ.