‘ಸಲಾರ್’ ಟ್ರೈಲರ್ ಗೆ ಸಖತ್ ವಿಮರ್ಶೆ: ಸಿನಿಮಾ ನೋಡೋಣ ಎಂದ ಫ್ಯಾನ್ಸ್

Public TV
1 Min Read
Salaar 1

ಹೊಂಬಾಳೆ ಫಿಲಂಸ್ ನಿರ್ಮಾಣದ ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ (Salaar) ಚಿತ್ರದ ಟೀಸರ್ ಯಾವಾಗ ಬಿಡುಗಡೆಯಾಯಿತೋ, ಆಗಿನಿಂದಲೇ ಚಿತ್ರದ ಬಗ್ಗೆ, ಟ್ರೇಲರ್ (Trailer) ಬಗ್ಗೆ ಕುತೂಹಲ ಮತ್ತು ನಿರೀಕ್ಷೆ ಎಲ್ಲರಲ್ಲೂ ಇತ್ತು. ಶುಕ್ರವಾರ ರಾತ್ರಿ 07:19ಕ್ಕೆ ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಟ್ರೈಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ಮಿಶ್ರ ಪ್ರತಿಕ್ರಿಯೆ ಕೂಡ ಕೇಳಿ ಬಂದಿದೆ. ನೀಲ್ (Prashant Neel) ಅವರ ಹಿಂದಿನ ಸಿನಿಮಾಗಳಿಗೂ ಹೋಲಿಕೆ ಮಾಡಲಾಗುತ್ತಿದೆ.

salaar

‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರದ ಟೀಸರ್ ನೋಡಿ ಪ್ರೇಕ್ಷಕರು ಏನು ಊಹಿಸಿದ್ದರೋ, ಅದಕ್ಕಿಂತ ದುಪ್ಪಟ್ಟಾದ ಆ್ಯಕ್ಷನ್‍, ಥ್ರಿಲ್‍ ಮತ್ತು ಕ್ರೋಧ ಈ ಟ್ರೇಲರ್ ನಲ್ಲಿದ್ದು, ‘ಸಲಾರ್’ ಜಗತ್ತನ್ನು ಮತ್ತು ಅಲ್ಲಿನ ಪಾತ್ರಧಾರಿಗಳನ್ನು ಪರಿಚಯಿಸುವುದರ ಜೊತೆಗೆ ಚಿತ್ರದ ಮೇಲೆ ನಿರೀಕ್ಷೆಗಳನ್ನು ಹೆಚ್ಚುವಂತೆ ಮಾಡಿದೆ. ಆ್ಯಕ್ಷನ್‍ ಮತ್ತು ಮಾಸ್ ಹೀರೋ ಆಗಿ ಜನಪ್ರಿಯರಾಗಿರುವ ಪ್ರಭಾಸ್‍, ಈ ಚಿತ್ರದಲ್ಲಿ ಇನ್ನಷ್ಟು ಮಾಸ್‍ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಒಟ್ಟಾರೆ ಇಡೀ ಚಿತ್ರವೂ ಸಖತ್‍ ಮಾಸ್‍ ಚಿತ್ರವಾಗಿ ಹೊರಹೊಮ್ಮಿದೆ.

salaar 3

ಭಾರತೀಯ ಚಿತ್ರರಂಗದ ಮೂರು ಜನಪ್ರಿಯ ಹೆಸರುಗಳಾದ ಹೊಂಬಾಳೆ ಫಿಲಂಸ್‍, ಪ್ರಶಾಂತ್‍ ನೀಲ್‍ ಮತ್ತು ಪ್ರಭಾಸ್‍ ಒಟ್ಟಾಗಿ ಕೈಜೋಡಿಸಿದರೆ ಏನಾಗಬಹುದೋ ಅದೇ ‘ಸಲಾರ್’ ಚಿತ್ರದಲ್ಲೂ ಆಗಿದೆ. ಇದೊಂದು ಅದ್ಭುತ ದೃಶ್ಯವೈಭವವಾಗಿದ್ದು, ಅತೀ ದೊಡ್ಡ ಆ್ಯಕ್ಷನ್‍ ಚಿತ್ರವಾಗಿ ಹೊರಹೊಮ್ಮಿದೆ.

 

‘ಸಲಾರ್’ ಚಿತ್ರದಲ್ಲಿ ಪ್ರಭಾಸ್‍ (Prabhas), ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಮುಂತಾದವರು ನಟಿಸಿದ್ದು, ಹೊಂಬಾಳೆ ಫಿಲಂಸ್‍ನಡಿ ಈ ಚಿತ್ರವನ್ನು ವಿಜಯ್‍ ಕಿರಗಂದೂರು ನಿರ್ಮಿಸಿದ್ದಾರೆ. ಡಿ.22ರಂದು ಸಿನಿಮಾ ಜಗತ್ತಿನಾದ್ಯಂತ ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ.

Share This Article