ವಿಶ್ವದ ಶ್ರೇಷ್ಠ ಫುಟ್‌ಬಾಲ್ ಆಟಗಾರ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ಅವರು ಸಂದರ್ಶನವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ, ಮ್ಯಾಂಚೆಸ್ಟರ್ ಯುನೈಟೆಡ್ (Manchester United) ಅನ್ನು ತೊರೆದರು. ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಮ್ಯಾನೇಜರ್ ಎರಿಕ್ ಟೆನ್ ಹ್ಯಾಗ್ ಅವರನ್ನು ಗೌರವಿಸುವುದಿಲ್ಲ ಎಂದು ಹೇಳಿ ತಮ್ಮ ತಂಡದೊಂದಿಗಿನ ಸಂಬಂಧವನ್ನು ಕಡಿತಗೊಳಿಸಿದರು.
ಇದರ ಬೆನ್ನಲ್ಲೇ ರೊನಾಲ್ಡೊ ಸೌದಿ ಅರೇಬಿಯಾದ ತಂಡಕ್ಕೆ ಸೇರುವ ಬೃಹತ್ ಪ್ರಸ್ತಾಪವನ್ನೇ ತಿರಸ್ಕರಿಸಿದ್ದಾರೆ ಎಂಬ ವರದಿಯನ್ನು ದೃಢಪಡಿಸಿದ್ದಾರೆ. 37 ವಯಸ್ಸಿನ ರೊನಾಲ್ಡೊ ಈಗಲೇ ನಿವೃತ್ತರಾಗುವ ಸಾಧ್ಯತೆಯಿಲ್ಲ. ಕತಾರ್ ಅವರ ಕೊನೆಯ ವಿಶ್ವಕಪ್ ಪಂದ್ಯ ಆಗಿರಬಹುದು. ಆದರೂ ಅವರು ತಮ್ಮ 40ನೇ ವಯಸ್ಸಿನಲ್ಲಿ ಕ್ರೀಡೆಗೆ ವಿದಾಯ ಹೇಳಲು ಯೋಜಿಸಿರುವುದಾಗಿ ತಿಳಿಸಿದ್ದಾರೆ.
Advertisement
Advertisement
ಇದೀಗ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮುಂದೆ ಯಾವ ತಂಡಗಳಲ್ಲಿ ಆಡಬಹುದು ಎಂಬುದು ಕುತೂಹಲಕಾರಿಯಾಗಿದೆ. ಅವರ ಮುಂದಿರುವ ಕೆಲವು ಪ್ರಮುಖ ತಂಡಗಳ ಹೆಸರು ಇಂತಿವೆ.
Advertisement
ಚೆಲ್ಸಿಯಾ:
ಕಳೆದ ಕೆಲ ದಿನಗಳ ಹಿಂದೆ ರೊನಾಲ್ಡೊ ಚೆಲ್ಸಿಯಾ ತಂಡದೊಂದಿಗೆ ಸಂಪರ್ಕ ಹೊಂದಿದ್ದರು. ಲಂಡನ್ ಕ್ಲಬ್‌ಗೆ ಅತ್ಯುತ್ತಮ ಆಟಗಾರನ ಅವಶ್ಯಕತೆಯಿದ್ದಾಗ ಅವರು ಚೆಲ್ಸಿಯಾ ತಂಡದೊಂದಿಗೆ ಕೈ ಜೋಡಿಸಿದ್ದರು. ಇದೀಗ ರೊನಾಲ್ಡೊ ತಮ್ಮ ಆಸಕ್ತಿಯನ್ನು ಚೆಲ್ಸಿಯಾ ಕಡೆಗೆ ತೋರಿಸುವ ಸಾಧ್ಯತೆಯಿದೆ ಎಂದು ಇಂಗ್ಲೆಂಡ್‌ನಲ್ಲಿನ ವರದಿಗಳು ತಿಳಿಸಿವೆ.
Advertisement
ಸ್ಪೋರ್ಟಿಂಗ್ ಲಿಸ್ಬನ್:
ರೊನಾಲ್ಡೊ 2003 ರಲ್ಲಿ ಪೋರ್ಚುಗೀಸ್ ತಂಡದ ಸ್ಪೋರ್ಟಿಂಗ್ ಲಿಸ್ಬನ್‌ನಿಂದ 14.41 ಮಿಲಿಯನ್ ಡಾಲರ್‌ಗೆ (ಸುಮಾರು 100 ಕೋಟಿ ರೂ.) ಯುನೈಟೆಡ್‌ಗೆ ಸೇರಿದರು. ಈ ಮೂಲಕ ಫರ್ಗುಸನ್ ಮತ್ತು ಕ್ಲಬ್‌ನ ಆಟಗಾರರ ಸ್ನೇಹ ಸಂಬಂಧ ಗಮನ ಸೆಳೆಯಿತು. ಇದನ್ನೂ ಓದಿ: ಭಾರತೀಯ ಆಟಗಾರರನ್ನು ಖರೀದಿಸುವಷ್ಟ ಹಣ ನಮ್ಮಲ್ಲಿಲ್ಲ: ಮ್ಯಾಕ್ಸ್‌ವೆಲ್
ಎನಿ ಎಂಎಲ್‌ಎಸ್ ಕ್ಲಬ್:
ಇಂಟರ್ ಮಿಯಾಮಿ ಸಹ ಮಾಲೀಕ ಮಾಜಿ ಯುನೈಟೆಡ್ ಆಟಗಾರ ಡೇವಿಡ್ ಬೆಕ್‌ಹ್ಯಾಮ್ 2020 ರಲ್ಲಿ ಸಂದರ್ಶನವೊಂದರಲ್ಲಿ ಮೆಸ್ಸಿ ಮತ್ತು ರೊನಾಲ್ಡೊ ಇಬ್ಬರನ್ನು ಕೂಡಾ ತಮ್ಮ ಕ್ಲಬ್‌ಗೆ ಸೇರ್ಪಡೆಗೊಳಿಸಲು ಇರುವ ತಮ್ಮ ಮಹತ್ವಾಕಾಂಕ್ಷೆಯನ್ನು ತಿಳಿಸಿದ್ದರು.
ಪ್ಯಾರಿಸ್ ಸೇಂಟ್ ಜರ್ಮೈನ್:
ರೊನಾಲ್ಡೊ ಅವರು ಪಿಎಸ್‌ಜಿ ಯೊಂದಿಗೆ ಫ್ರಾನ್ಸ್‌ಗೆ ಹೋಗಲು ನಿರ್ಧರಿಸಿದರೆ ಇತರ ಕ್ಲಬ್‌ಗಳು ಅಸೂಯೆ ಪಡುವ ಸಾಧ್ಯತೆಯಿದೆ. ಆದರೆ ಅವರು ತಮ್ಮ ಶ್ರೇಣಿಯಲ್ಲಿ ಬರುವ ಲಿಯೋನೆಲ್ ಮೆಸ್ಸಿ, ನೇಮರ್ ಹಾಗೂ ಕೈಲಿಯನ್ ಎಂಬಪ್ಪೆ ಹೆಮ್ಮೆಪಡುತ್ತಾರೆ. ಇದನ್ನೂ ಓದಿ: ICC ಮಾಸ್ಟರ್ ಪ್ಲ್ಯಾನ್ – ಹೊಸ ಮಾದರಿಯಲ್ಲಿ 2024ರ T20 ವಿಶ್ವಕಪ್