ದುಬೈ: ಪೋರ್ಚುಗಲ್ ಫುಟ್ಬಾಲ್ (Football) ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಸೌದಿ ಅರೇಬಿಯಾದ ಅಲ್-ನಸ್ ಕ್ಲಬ್ (Arabian club Al Nassr) ಪರ ಮುಂದಿನ ಎರಡೂವರೆ ವರ್ಷಗಳ ಅವಧಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆದ್ದರಿಂದ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ (Manchester United) ತಂಡವನ್ನು ತೊರೆದಿದ್ದಾರೆ.
History in the making. This is a signing that will not only inspire our club to achieve even greater success but inspire our league, our nation and future generations, boys and girls to be the best version of themselves. Welcome @Cristiano to your new home @AlNassrFC pic.twitter.com/oan7nu8NWC
— AlNassr FC (@AlNassrFC_EN) December 30, 2022
Advertisement
ಐದು ಬಾರಿ ಬ್ಯಾಲನ್ ಡಿವೋ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದ ರೊನಾಲ್ಡೊ 2022ರ ಫಿಫಾ ವಿಶ್ವಕಪ್‌ನಲ್ಲಿ (FIFA Worldcup) ಸೋತು ಹೊರನಡೆದಿದ್ದರು. ಈದೀಗ 2025ರ ವರೆಗೆ ಕ್ಲಬ್ ಪರ ಆಡಲು ಒಪ್ಪಿಕೊಂಡಿದ್ದಾರೆ ಎಂದು ಸೌದಿ ಕ್ಲಬ್ ಹೇಳಿಕೆ ನೀಡಿದೆ. ಆದ್ರೆ ಹಣಕಾಸು ವ್ಯವಹಾರವನ್ನು ಬಹಿರಂಗಪಡಿಸಿಲ್ಲ. ಆದ್ರೆ ರೊನಾಲ್ಡೊನೊಂದಿಗೆ 200 ಮಿಲಿಯನ್ ಯುರೋಗಿಂತಲೂ ಅಧಿಕ ಮೌಲ್ಯದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ತಂದೆಗೆ ಕೊಟ್ಟ ಮಾತಿನಂತೆ ಕಪ್ ಗೆದ್ದು ತಂದ – ದಂತಕತೆಯಾಗಿ ಮರೆಯಾದ ಡ್ರಿಬ್ಲಿಂಗ್ ಗೋಲ್ ಜಾದೂಗಾರ ಪೀಲೆ
Advertisement
Advertisement
ಬಳಿಕ ಮಾತನಾಡಿದ ರೊನಾಲ್ಡೋ, ಯೂರೋಪಿಯನ್ ಫುಟ್ಬಾಲ್‌ನಲ್ಲಿ ನಾನು ಇರಿಸಿಕೊಂಡಿದ್ದ ಎಲ್ಲ ಗುರಿಗಳನ್ನು ಸಾಧಿಸಿದ್ದೇನೆ. ಇದೀಗ ಏಷ್ಯಾದಲ್ಲಿ ನನ್ನ ಅನುಭವ ಹಂಚಿಕೊಳ್ಳಲು ಇದು ಸಕಾಲ ಎಂದು ಭಾವಿಸುತ್ತೇನೆ. ನನ್ನ ಹೊಸ ತಂಡದ ಸಹ ಆಟಗಾರರ ಜತೆ ಸೇರಿಕೊಳ್ಳುವುದನ್ನು ನಾನು ಎದುರು ನೋಡುತ್ತಿದ್ದೇನೆ. ಕ್ಲಬ್‌ನ ಯಶಸ್ಸಿಗೆ ನೆರವಾಗಲಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾವು ಕೂಗಾಡಿದ್ರೂ ಸಹಾಯಕ್ಕೆ ಯಾರೊಬ್ಬರೂ ಬರಲಿಲ್ಲ- ಪಂತ್ ರಕ್ಷಿಸಿದ ಬಸ್ ಡ್ರೈವರ್ ಬಿಚ್ಚಿಟ್ಟ ಸತ್ಯ
Advertisement
37 ವರ್ಷದ ರೊನಾಲ್ಡೋ ಕಳೆದ ತಿಂಗಳು `ನನಗೆ ಕ್ಲಬ್ ದ್ರೋಹ ಬಗೆದಿದೆ. ಡಚ್ ವ್ಯವಸ್ಥಾಪಕ ಎರಿಕ್ ಟೆನ್ ಹಗ್ ಅವರ ಬಗ್ಗೆ ಗೌರವ ಇಲ್ಲ’ ಎಂದು ಹೇಳಿಕೆ ನೀಡಿ ಓಲ್ಡ್ ಟ್ರಾಫರ್ಡ್‌ನಿಂದ ಬೇರ್ಪಟ್ಟಿದ್ದರು.