ಲಂಡನ್: ಖ್ಯಾತ ಫುಟ್‍ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಸ್ವಲ್ಪ ಸಮಯದವರೆಗೆ ಫಾರ್ಮ್‍ನಿಂದ ಹೊರಗುಳಿದಿರಬಹುದು. ಆದರೆ ಮ್ಯಾಂಚೆಸ್ಟರ್ ಯುನೈಟೆಡ್ ಸ್ಟ್ರೈಕರ್ ರೊನಾಲ್ಡೊ ಇನ್‍ಸ್ಟಾಗ್ರಾಮ್‍ನಲ್ಲಿ 400 ಮಿಲಿಯನ್ (40 ಕೋಟಿ) ಫಾಲೋವರ್ಸ್‍ಗಳ ಸಂಖ್ಯೆಯನ್ನು ದಾಟಿದ ವಿಶ್ವದ ಏಕೈಕ ವ್ಯಕ್ತಿಯಾಗಿದ್ದಾರೆ.
ಇನ್‍ಸ್ಟಾಗ್ರಾಮ್‍ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸೆಲೆಬ್ರೆಟಿಗಳ ಪಟ್ಟಿಯಲ್ಲಿ, ಪೋರ್ಚುಗಲ್ ನಾಯಕ ಕೈಲಿ ಜೆನ್ನರ್ ಅವರು 309 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ರೊನಾಲ್ಡೊ ಅವರ ಅತಿದೊಡ್ಡ ಫುಟ್‍ಬಾಲ್ ಪ್ರತಿಸ್ಪರ್ಧಿ ಮೆಸ್ಸಿ ಪ್ರಸ್ತುತ 306 ಮಿಲಿಯನ್ ಫಾಲೋವರ್ಸ್ ಪಡೆದು ನಂತರದ ಸ್ಥಾನದಲ್ಲಿದ್ದಾರೆ. ಪಾಪ್ ಗಾಯಕಿ ಸೆಲೆನಾ ಗೊಮೆಜ್ ಮತ್ತು ನಟ ಡ್ವೇನ್ ಜಾನ್ಸನ್ ತಲಾ 295 ಮಿಲಿಯನ್ ಫಾಲೋವರ್ಸ್‍ಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಜಯ – ಸರಣಿ ಕೈವಶಪಡಿಸಿಕೊಂಡ ಟೀಂ ಇಂಡಿಯಾ
Cristiano Ronaldo is the first person ever to reach 400 million Instagram followers.
This is more followers than the population of every country in the world except India and China.
He is gargantuan… ???? pic.twitter.com/1g4QOS35xX
— SPORTbible (@sportbible) February 8, 2022
ವರದಿಯ ಪ್ರಕಾರ ರೊನಾಲ್ಡೊ ಇನ್‍ಸ್ಟಾಗ್ರಾಮ್‍ನ ಎಲ್ಲಾ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಹೆಚ್ಚು ಶುಲ್ಕವನ್ನು ವಿಧಿಸುತ್ತಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಪ್ರತಿ ಪೋಸ್ಟ್‌ಗೆ (ಯುಎಸ್‍ಡಿ) 1.6 ಮಿಲಿಯನ್ (ಐಎನ್‍ಆರ್ 11.9 ಕೋಟಿ) ಚಾರ್ಜ್ ಮಾಡುತ್ತಾರೆ.
ಇದರ ಮಧ್ಯೆ ಒಂದೆರಡು ದಿನಗಳ ಹಿಂದೆ ರೊನಾಲ್ಡೊ ತನ್ನ 37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಹುಟ್ಟುಹಬ್ಬದ ಪ್ರಯುಕ್ತ ತಮಗೆ ಶುಭಾಶಯಗಳನ್ನು ಕಳುಹಿಸಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು.
ಜೀವನವು ರೋಲರ್ ಕೋಸ್ಟರ್ ಆಗಿದೆ. ಕಠಿಣ ಪರಿಶ್ರಮ, ಹೆಚ್ಚಿನ ವೇಗ, ಗುರಿಗಳು, ಬೇಡಿಕೆಯ ನಿರೀಕ್ಷೆಗಳು. ಆದರೆ ಕೊನೆಯಲ್ಲಿ ಇದು ಕುಟುಂಬ, ಪ್ರೀತಿ, ಪ್ರಾಮಾಣಿಕತೆ, ಸ್ನೇಹ ಎಲ್ಲವನ್ನೂ ಮೌಲ್ಯಯುತವಾಗಿಸುತ್ತದೆ ಎಂದು ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: 7.47 ಕೋಟಿ ರೂ.ಗೆ ವಿಮೆ ಮಾಡಿಸಿದ್ದ ಪೇಂಟಿಂಗ್ ನಾಶ ಮಾಡಿದ ಸೆಕ್ಯೂರಿಟಿ!
ತಮ್ಮ ಭವಿಷ್ಯದ ಮುಂದಿನ ಯೋಜನೆಗಳ ಬಗ್ಗೆ ಮಾತನಾಡುತ್ತಾ ರೊನಾಲ್ಡೊ, ನಾನು ಫುಟ್‍ಬಾಲ್ ಕ್ಷೇತ್ರದಲ್ಲಿ ಇನ್ನೂ 40ರ ವಯಸ್ಸಿನವರೆಗೂ ಆಡಲು ನಿರ್ಧರಿಸಿದ್ದೇನೆ. ಇದೀಗ ನಾನು ಅಲ್ಪಾವಧಿಯ ಗುರಿಗಳತ್ತ ಗಮನ ಹರಿಸಿದ್ದೇನೆ ಎಂದು ತಿಳಿಸಿದ್ದಾರೆ.
View this post on Instagram
ನನಗೆ ಈಗ 30 ವರ್ಷ ವಯಸ್ಸಾಗಿದೆ. ನಾನು ನನ್ನ ದೇಹ ಮತ್ತು ಮನಸ್ಸಿನ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇನೆ. 33ರ ವಯಸ್ಸಿನ ನಂತರ ದೇಹವು ಕುಗ್ಗಲಾರಂಭಿಸುತ್ತದೆ. ಆದರೆ ನಾನು ಮಾನಸಿಕವಾಗಿ ಸಧೃಢನಾಗಿದ್ದೇನೆ. ಹಾಗೆ ನೋಡಿದರೆ ನಿಜವಾದ ಜೀವನದ ಯುದ್ಧವು 40ರ ನಂತರ ಪ್ರಾರಂಭವಾಗುತ್ತದೆ. ವಯಸ್ಸು ಕೇವಲ ಎಣಿಕೆಗಾಗಿ. ನಾವು ನಮ್ಮ ದೇಹವನ್ನು ಎಷ್ಟು ಚಟುವಟಿಕೆಯಿಂದ ಇಡುತ್ತೇವೋ ಅಷ್ಟು ಸಧೃಡರಾಗಿರಬಹುದು ಎಂದು ಇತ್ತೀಚಿನ ಸಂದರ್ಶನ ಒಂದರಲ್ಲಿ ಹೇಳಿದ್ದರು.