ದೇಹವನ್ನು ಆರೋಗ್ಯವಾಗಿಡಲು ಸ್ವಲ್ಪ ಮಟ್ಟಿಗಾದರೂ ಮಂಸಾಹಾರವನ್ನು ಬದಿಗಿಡೋದು ಒಳ್ಳೆಯದು. ಆದರೆ ನಾನ್‌ವೆಜ್ ಬೇಕು ಎನಿಸಿದಾಗ, ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಎಂದಾಗ ಸೇವಿಸಲು ಬೆಸ್ಟ್ ಆಪ್ಶನ್ ಟೋಫು. ನಾವಿದು ಕ್ರಿಸ್ಪಿ ಟೋಫು ಬೈಟ್ಸ್ ಹೇಗೆ ಮಾಡೋದು ಎಂದು ಹೇಳಿಕೊಡುತ್ತಿದ್ದೇವೆ. ಟೀ ಟೈಮ್‌ನಲ್ಲಿ ಅಥವಾ ಫ್ರೀ ಟೈಮ್‌ನಲ್ಲಿ ಸವಿಯಲು ಇದು ಪರ್ಫೆಕ್ಟ್ ಆಗಿರುತ್ತೆ. ರುಚಿಕರವಾದ ಟೋಫು ಬೈಟ್ಸ್ ಸವಿಯುತ್ತ ನೀವು ಆರೋಗ್ಯವನ್ನೂ ಕಾಪಾಡಿಕೊಳ್ಳಿ.
Advertisement
ಬೇಕಾಗುವ ಪದಾರ್ಥಗಳು:
ಟೋಫು – 500 ಗ್ರಾಂ
ತೆಂಗಿನ ಎಣ್ಣೆ – 1 ಟೀಸ್ಪೂನ್
ಸೋಯಾ ಸಾಸ್ – 2 ಟೀಸ್ಪೂನ್
ವಿನೆಗರ್ – 2 ಟೀಸ್ಪೂನ್
ಜೇನುತುಪ್ಪ – 1 ಟೀಸ್ಪೂನ್
ಚಿಲ್ಲಿ ಸಾಸ್ – 1 ಟೀಸ್ಪೂನ್
ಬೆಳ್ಳುಳ್ಳಿ ಪುಡಿ – ಒಂದೂವರೆ ಟೀಸ್ಪೂನ್
ಕಾರ್ನ್ ಫ್ಲೋರ್ – ಕಾಲು ಕಪ್ ಇದನ್ನೂ ಓದಿ: ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಬಿ ಬೈಟ್ಸ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಟೋಫು ಅನ್ನು ಪೇಪರ್ ಟವಲ್‌ನಿಂದ ಒತ್ತಿ ಅದರಲ್ಲಿರುವ ನೀರಿನ ಅಂಶ ಆದಷ್ಟು ತೆಗೆದುಹಾಕಿ. ಸುಮಾರು ಅರ್ಧ ಗಂಟೆ ಹಾಗೇ ಬಿಡಿ.
* ಒಂದು ಬಟ್ಟಲಿನಲ್ಲಿ ತೆಂಗಿನ ಎಣ್ಣೆ, ಸೋಯಾ ಸಾಸ್, ವಿನೆಗರ್, ಜೇನುತುಪ್ಪ, ಚಿಲ್ಲಿ ಸಾಸ್ ಮತ್ತು ಬೆಳ್ಳುಳ್ಳಿ ಪುಡಿಯನ್ನು ಹಾಕಿ ಮಿಶ್ರಣ ಮಾಡಿ.
* ಟೋಫು ಒಣಗಿದ ನಂತರ ಅದನ್ನು ಒಂದೊಂದು ಇಂಚಿನ ತುಂಡುಗಳಾಗಿ ಕತ್ತರಿಸಿ. ಅಥವಾ ತ್ರಿಕೋನಾಕಾರವಾಗಿಯೂ ಕತ್ತರಿಸಬಹುದು.
* ಈಗ ಸಾಸ್ ಮಿಶ್ರಣಕ್ಕೆ ಟೋಫುಗಳನ್ನು ಹಾಕಿ ಮಿಶ್ರಣ ಮಾಡಿ, ಸುಮಾರು 1 ಗಂಟೆ ಮ್ಯಾರಿನೇಟ್ ಆಗಲು ಬಿಡಿ.
* ಓವನ್ ಅನ್ನು 190 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಕಾಯಿಸಿ.
* ಮ್ಯಾರಿನೇಟ್ ಮಾಡಿದ ಟೋಫುವನ್ನು ತೆಗೆದು ಬೇಕಿಂಗ್ ಶೀಟ್‌ನಲ್ಲಿ ಜೋಡಿಸಿ.
* ಟೋಫುಗಳ ಮೇಲೆ ಕಾರ್ನ್ ಫ್ಲೋರ್ ಅನ್ನು ಸಿಂಪಡಿಸಿ. ಟೋಫುಗಳನ್ನು ತಿರುವಿ ಮತ್ತೆ ಸಿಂಪಡಿಸಿ ಸುತ್ತಲೂ ಕೋಟ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
* ಈಗ ಟೋಫು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಸುಮಾರು 20-25 ನಿಮಿಷಗಳ ವರೆಗೆ ಓವನ್‌ನಲ್ಲಿ ಬೇಯಿಸಿಕೊಳ್ಳಿ. ನಡುವೆ ಒಂದು ಬಾರಿ ಟೋಫುಗಳನ್ನು ತಿರುವಿ ಹಾಕಿ ಮತ್ತೆ ಗರಿಗರಿಯಾಗುವವರೆಗೆ ಬೇಯಿಸಿಕೊಳ್ಳಿ.
* ಇದೀಗ ಕ್ರಿಸ್ಪಿ ಟೋಫು ಬೈಟ್ಸ್ ತಯಾರಾಗಿದ್ದು, ಇದನ್ನು ನಿಮ್ಮಿಷ್ಟದ ಸಾಸ್‌ನೊಂದಿಗೆ ಬೆಚ್ಚಗೆ ಸವಿಯಿರಿ. ಉಳಿದ ಟೋಫುಗಳನ್ನು ಬೇಕೆಂದರೆ ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ ಫ್ರಿಜ್‌ನಲ್ಲಿಟ್ಟರೆ 5 ದಿನಗಳ ವರೆಗೆ ಸವಿಯಬಹುದು. ಇದನ್ನೂ ಓದಿ: ಟ್ರೈ ಮಾಡಿ ಕ್ರಿಸ್ಪಿ ಪೋಹಾ ಕಟ್ಲೆಟ್..