ಮನೆಯಲ್ಲೇ ಇರುವಾಗ ಸಂಜೆ ಟೀ ಜೊತೆಗೆ ಏನಾದರು ತಿನ್ನಬೇಕು ಎಂದೆನಿಸುವುದು ಸಹಜ. ಅದಕ್ಕಾಗಿಯೇ ಇವತ್ತು ಒಂದು ಸುಲಭವಾದ ಸ್ನಾಕ್ಸ್ ರೆಸಿಪಿಯನ್ನು ನಿಮಗೆ ಹೇಳಿಕೊಡುತ್ತಿದ್ದೇವೆ. ಇದರ ಹೆಸರು ಈರುಳ್ಳಿ ಕಟ್ಲೆಟ್ (Onion Cutlet). ಹಾಗಿದ್ರೆ ಬನ್ನಿ 5 ನಿಮಿಷದಲ್ಲಿ ಗರಿಗರಿಯಾದ ಈರುಳ್ಳಿ ಕಟ್ಲೆಟ್ ಮಾಡುವುದು ಹೇಗೆಂದು ನೋಡೋಣ.
Advertisement
ಬೇಕಾಗುವ ಸಾಮಗ್ರಿಗಳು:
ಹೆಚ್ಚಿದ(ಉದ್ದ) ಈರುಳ್ಳಿ – 4
ಸಣ್ಣದಾಗಿ ಹೆಚ್ಚಿದ ಶುಂಠಿ – 1 ಇಂಚು
ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
ಮೆಣಸಿನ ಪುಡಿ – ಅರ್ಧ ಚಮಚ
ಜೀರಿಗೆ – ಅರ್ಧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಒಂದು ಚಮಚ ಮಿಶ್ರಣಕ್ಕೆ ಹಾಗೂ ಕಾಯಿಸಲು ಬೇಕಾದಷ್ಟು
ಅಕ್ಕಿ ಹಿಟ್ಟು – ಮುಕ್ಕಾಲು ಕಪ್ ಇದನ್ನೂ ಓದಿ: ಹೀಗೆ ಮಾಡಿ ಸಿಂಪಲ್ ರೆಸಿಪಿ ಎಗ್ ಪಾಸ್ತಾ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಹೆಚ್ಚಿದ ಈರುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು, ಮೆಣಸಿನ ಪುಡಿ, ಜೀರಿಗೆಯನ್ನು ಒಂದು ಬೌಲ್ನಲ್ಲಿ ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಿ. ಇದಕ್ಕೆ ಒಂದು ಚಮಚ ಆಗುವಷ್ಟು ಎಣ್ಣೆಯನ್ನು ಹಾಕಿಕೊಳ್ಳಿ.
* ಮುಕ್ಕಾಲು ಕಪ್ ಅಕ್ಕಿ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಇದಕ್ಕೆ ಒಂದರಿಂದ ಎರಡು ಚಮಚ ಆಗುವಷ್ಟು ನೀರನ್ನು ಹಾಕಿಕೊಂಡು ಮತ್ತೊಮ್ಮೆ ಕಲಸಿ. ಹಿಟ್ಟಿನ ಜೊತೆಗೆ ಈರುಳ್ಳಿ ಚೆನ್ನಾಗಿ ಅಂಟಿಕೊಳ್ಳಬೇಕು. ಇಲ್ಲದಿದ್ದರೆ ಎಣ್ಣೆಯಲ್ಲಿ ಬಿಡುವಾಗ ಹಿಟ್ಟಿನಿಂದ ಬೇರೆಯಾಗುತ್ತದೆ.
* ನಂತರ ಕಲಸಿದ ಹಿಟ್ಟನ್ನು ಸ್ವಲ್ಪ ಸ್ಪಲ್ಪವಾಗಿ ತೆಗೆದುಕೊಂಡು ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. ಬಳಿಕ ಅದನ್ನು ಅಂಗೈಯಲ್ಲಿಟ್ಟು ದಪ್ಪವಾಗಿ ತಟ್ಟಿಕೊಳ್ಳಿ.
* ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿಯಾಗಲು ಇಡಿ. ಎಣ್ಣೆ ಚೆನ್ನಾಗಿ ಕಾದ ಮೇಲೆ ತಟ್ಟಿದ ಮಿಶ್ರಣವನ್ನು ಒಂದೊಂದಾಗಿ ಎಣ್ಣೆಯಲ್ಲಿ ಬಿಡಿ.
* ಗ್ಯಾಸ್ ಅನ್ನು ಮೀಡಿಯಮ್ ಫ್ಲೇಮನಲ್ಲೇ ಇಟ್ಟುಕೊಂಡು ಇದನ್ನು ಕಾಯಿಸಿಕೊಳ್ಳಬೇಕು. ಹಾಕಿದ ತಕ್ಷಣ ಇದನ್ನು ಮಗುಚದೆ ಒಂದು ನಿಮಿಷದವರೆಗೆ ಹಾಗೆಯೇ ಬಿಡಿ. ಒಂದು ನಿಮಿಷ ಆದಮೇಲೆ ಇದನ್ನು ಮಗುಚಿ ಹಾಕಿಕೊಳ್ಳಿ.
* ಎರಡೂ ಕಡೆ ಚೆನ್ನಾಗಿ ಬೇಯುವತನಕ ಮಗುಚಿ ಹಾಕುತ್ತಿರಿ. ಕಂದು ಬಣ್ಣ ಬರುವವರೆಗೆ ಇದನ್ನು ಫ್ರೈ ಮಾಡಿಕೊಂಡರೆ ಸಾಕು.
* ನಂತರ ಇದನ್ನು ಎಣ್ಣೆಯಿಂದ ತೆಗೆದು ಒಂದು ಪ್ಲೇಟ್ನಲ್ಲಿ ಹಾಕಿಕೊಳ್ಳಿ.
* ಬಿಸಿಬಿಸಿ ಹಾಗೂ ಗರಿಗರಿಯಾದ ಈರುಳ್ಳಿ ಪಕೋಡ ತಿನ್ನಲು ರೆಡಿ. ಇದನ್ನು ಟೊಮೆಟೊ ಸಾಸ್ ಅಥವ ಚಟ್ನಿಯೊಂದಿಗೆ ತಿನ್ನಬಹುದು. ಇದನ್ನೂ ಓದಿ: ವಾವ್, ಸಖತ್ ಟೇಸ್ಟಿ – ಬೇಬಿ ಕಾರ್ನ್ ರೋಸ್ಟ್
Advertisement
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k