ಮಕ್ಕಳಿಗೆ ಚಿಪ್ಸ್ ರೀತಿಯ ಕುರುಕುಲು ತಿಂಡಿ ಎಂದರೆ ಬೇಗ ಇಷ್ಟವಾಗುತ್ತದೆ. ಆದರೆ ಅದನ್ನು ಮನೆಯಲ್ಲಿಯೇ ಮಾಡುವುದರಿಂದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಹಣವನ್ನೂ ಉಳಿಸಬಹುದು. ಹೊರಗಡೆ ಅಂಗಡಿಗಳಲ್ಲಿ ಅಥವಾ ಮಾಲ್‌ಗಳಲ್ಲಿ ನಾಚೋಸ್ ತುಂಬಾ ದುಬಾರಿ. ಆದ್ದರಿಂದ ಇದನ್ನು ಮನೆಯಲ್ಲಿಯೇ ತಯಾರಿಸುವ ಸುಲಭ ವಿಧಾನವನ್ನು ಇವತ್ತಿನ ನಮ್ಮ ರೆಸಿಪಿಯಲ್ಲಿ ತಿಳಿಸಿಕೊಡುತ್ತೇವೆ. ಹಾಗಿದ್ರೆ ಮನೆಯಲ್ಲಿಯೇ ನಾಚೋಸ್ ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಮೃದುವಾದ ಸಿಹಿ ಕುಂಬಳಕಾಯಿ, ಓಟ್ಸ್ ಕುಕೀಸ್
Advertisement
ಬೇಕಾಗುವ ಸಾಮಗ್ರಿಗಳು:
ನೀರು-ಕಾಲು ಕಪ್
ಉಪ್ಪು- ಕಾಲು ಚಮಚ
ಅಕ್ಕಿ ಹಿಟ್ಟು – 1ಕಪ್
ಅಚ್ಚಖಾರದ ಪುಡಿ – 1ಚಮಚ
ಜೋಳದ ಹಿಟ್ಟು – ಅರ್ಧ ಕಪ್
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
Advertisement
Advertisement
ಮಾಡುವ ವಿಧಾನ:
*ಮೊದಲಿಗೆ ಒಂದು ಪ್ಯಾನ್ ಬಿಸಿಗಿಟ್ಟು ಕಾಲು ಕಪ್ ನೀರನ್ನು ಹಾಕಿಕೊಂಡು ಅದಕ್ಕೆ ಕಾಲು ಚಮಚ ಉಪ್ಪನ್ನು ಸೇರಿಸಿಕೊಳ್ಳಿ.
* ನೀರು ಬಿಸಿಯಾದ ಬಳಿಕ ಅದಕ್ಕೆ 1 ಕಪ್ ಅಕ್ಕಿ ಹಿಟ್ಟನ್ನು ಸೇರಿಸಿಕೊಂಡು ಗಂಟಾಗದಂತೆ ಚನ್ನಾಗಿ ತಿರುವಿಕೊಂಡು 2 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
*ಈಗ ಈ ಮಿಶ್ರಣವನ್ನು ಒಂದು ಬೌಲ್‌ಗೆ ಹಾಕಿಕೊಂಡು ಅದಕ್ಕೆ 1 ಚಮಚ ಖಾರದ ಪುಡಿಯನ್ನು ಹಾಕಿಕೊಳ್ಳಿ. ಬಳಿಕ ಇದಕ್ಕೆ ಅರ್ಧ ಕಪ್ ಜೋಳದ ಹಿಟ್ಟನ್ನು ಹಾಕಿಕೊಂಡು ಚಪಾತಿ ಹಿಟ್ಟಿನ ರೀತಿಯಲ್ಲಿ ಕಲಸಿಕೊಳ್ಳಿ.
*ಬಳಿಕ ಈ ಮಿಶ್ರಣದ ಮೇಲೆ 1 ಚಮಚ ಎಣ್ಣೆ ಹಾಕಿಕೊಂಡು ಚನ್ನಾಗಿ ನಾದಿಕೊಳ್ಳಿ. ಬಳಿಕ ಹಿಟ್ಟನ್ನು ಚೆಂಡಿನ ಗಾತ್ರದಲ್ಲಿ ಉಂಡೆ ಮಾಡಿಕೊಂಡು ತೆಳ್ಳಗೆ ಲಟ್ಟಿಸಿಕೊಳ್ಳಿ.
* ಬಳಿಕ ಇದರ ಮೇಲೆ ಫೋರ್ಕ್ ಚಮಚದ ಸಹಾಯದಿಂದ ಅಲ್ಲಲ್ಲಿ ಚುಚ್ಚಿಕೊಳ್ಳಿ. ಬಳಿಕ ಇದನ್ನು ತ್ರಿಕೋನ ಆಕಾರದಲ್ಲಿ ಕತ್ತರಿಸಿಕೊಂಡು ಎಣ್ಣೆಯಲ್ಲಿ 3 ನಿಮಿಷಗಳವರೆಗೆ ಕರಿಯಿರಿ.
* ನಾಚೋಸ್ ಗೋಲ್ಡನ್ ಬಣ್ಣ ಬಂದ ಬಳಿಕ ಅದನ್ನು ಎಣ್ಣೆಯಿಂದ ತೆಗೆದು ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿ ಸಾಲ್ಸಾ ಅಥವಾ ಮಯೋನೀಸ್ ಜೊತೆ ಸವಿಯಲು ಕೊಡಿ. ಇದನ್ನೂ ಓದಿ: ಬೇಕರಿ ಸ್ಟೈಲ್ ಎಗ್‍ಲೆಸ್ ಹನಿ ಕೇಕ್ ಮನೆಯಲ್ಲೇ ಮಾಡಿ
Advertisement
Web Stories