– ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಮಂಡ್ಯ: ಬಾರೊಂದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ವಿಫಲಯತ್ನ ನಡೆಸಿದ ಘಟನೆ ಮಂಡ್ಯದ ಶಿವಪುರ ಬಳಿ ನಡೆದಿದೆ.
Advertisement
ತಡರಾತ್ರಿ ಬಂದ ಇಬ್ಬರು ದುಷ್ಕರ್ಮಿಗಳು ಮುಚ್ಚಿದ್ದ ನ್ಯೂಗೌಡ ಬಾರ್ ಆಂಡ್ ರೆಸ್ಟೋರೆಂಟ್‍ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಕೂಡಲೇ ಬಾರ್ ಒಳಗೆ ಮಲಗಿದ್ದ ಸಿಬ್ಬಂದಿ ಎಚ್ಚೆತ್ತು ಬೆಂಕಿ ನಂದಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
Advertisement
ಬಾರ್ ಬಳಿ ಬರುವ ಇಬ್ಬರು ದುಷ್ಕರ್ಮಿಗಳ ಒಬ್ಬ ಮುಖಕ್ಕೆ ಹೆಲ್ಮೆಟ್ ಧರಿಸಿದ್ದು, ಮತ್ತೊಬ್ಬ ಪೆಟ್ರೋಲ್ ಹಿಡಿದು ಬಾರ್ ಬಳಿ ಬಂದಿದ್ದಾರೆ. ಬಳಿಕ ಮುಚ್ಚಿದ್ದ ಬಾರ್‌ಗೆ ಹೊರಗಿನಿಂದಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ವೇಳೆ ಬಾರ್ ಒಳಗೆ ನೌಕರರು ಸಹ ಇದ್ದು ಘಟನೆಯಿಂದ ಅತಂಕಗೊಂಡಿದ್ದಾರೆ. ಬಳಿಕ ಎಚ್ಚತ ನೌಕರರು ಬೆಂಕಿಯ ಮೇಲೆ ನೀರು ಚೆಲ್ಲಿ ಕೆಲವೇ ಕ್ಷಣಗಳಲ್ಲಿ ಬೆಂಕಿ ನಂದಿಸಿ ಸಂಭವಿಸಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.
Advertisement
ಬಾರ್‍ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ದುಷ್ಕರ್ಮಿಗಳ ಕೃತ್ಯದ ದೃಶ್ಯಗಳು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೃತ್ಯ ಕೈಗೊಂಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಸದ್ಯ ಘಟನೆಯ ಕುರಿತು ಮದ್ದೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv