ಬೆಂಗಳೂರು: ನಿವೃತ್ತ ಸರ್ಕಾರಿ ನೌಕರರೊಬ್ಬರ ಬ್ಯಾಂಕ್ (Bank) ಖಾತೆಯಿಂದ ಡೆಪಾಸಿಟ್ ಇಟ್ಟ ಹಣವನ್ನು (Money) ವಂಚಕರು ಆಧಾರ್ (Aadhaar Card) ಲಿಂಕ್ ಮಾಡಿ ಎಗರಿಸಿದ ಪ್ರಕರಣ ನಗರದಲ್ಲಿ ನಡೆದಿದೆ.
ಜೆಪಿ ನಗರದ ರಂಗನಾಥ್ ಎಂಬವರು ಕೊತ್ತನೂರು ದಿಣ್ಣೆ ಬ್ರ್ಯಾಂಚ್‍ನ ಎಸ್‍ಬಿಐ ಬ್ಯಾಂಕ್‍ನಲ್ಲಿ 1.10 ಲಕ್ಷ ರೂ. ಹಣವನ್ನು ಬ್ಯಾಂಕ್‍ನಲ್ಲಿ ಡೆಪಾಸಿಟ್ ಮಾಡಿದ್ದರು. ಇದರಲ್ಲಿ ಸುಮಾರು 18,500 ರೂ.ಗಳನ್ನು ವಂಚಕರು ಆಧಾರ್ ಲಿಂಕ್ ಮಾಡಿ ಎಗರಿಸಿದ್ದಾರೆ. ಬ್ಯಾಂಕ್‍ಗೆ ಆಧಾರ್ ಲಿಂಕ್ ಮಾಡಿಸಿಲ್ಲ, ಹೀಗಿದ್ದರೂ ಹೇಗೆ ಆಧಾರ್ ಬಳಸಿ ಹಣ ಎಗರಿಸಿದ್ದಾರೆ ಎಂದು ರಂಗನಾಥ್ ಬ್ಯಾಂಕ್ ಸಿಬ್ಬಂದಿಗೆ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳಕ್ಕೆ ಹೊರಟ್ಟಿದ್ದ ಬಸ್ ಹಳ್ಳಕ್ಕೆ ಉರುಳಿಬಿದ್ದು ಮಹಿಳೆ ಸಾವು – ಐವರು ಗಂಭೀರ
ಅಲ್ಲದೇ ಜೆಪಿ ನಗರದ ಹೆಚ್‍ಡಿಎಫ್‍ಸಿ ಬ್ಯಾಂಕ್‍ನಲ್ಲಿರುವ ಖಾತೆಯಲ್ಲೂ ಸಹ 10 ಸಾವಿರ ರೂ. ಡ್ರಾ ಆಗಿದೆ. ಈ ಬಗ್ಗೆ ಎಟಿಎಂನಲ್ಲಿ ಹಣ ಡ್ರಾ ಆಗಿರುವ ಮೆಸೇಜ್ ಕೂಡ ಬಂದಿದೆ. ಇದರಿಂದ ಗಾಬರಿಗೊಂಡು ರಂಗನಾಥ್ ಬ್ಯಾಂಕ್‍ನಲ್ಲಿ ವಿಚಾರಿಸಿದಾಗ ವಂಚಕರು ಹಣ ಎಗರಿಸಿದ ವಿಚಾರ ಬೆಳಕಿಗೆ ಬಂದಿದೆ.
ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: Nepal Earthquake: ಕಟ್ಟಡದಡಿ ಸಿಲುಕಿ ಮಲಗಿದ್ದಲ್ಲೇ ಉಸಿರುಚೆಲ್ಲಿದ ಉಪಮೇಯರ್
Web Stories