ವ್ಯಕ್ತಿಗೆ ಇರಿದಿದ್ದ ಚಾಕುವಿನಿಂದ್ಲೇ ಪೊಲೀಸರ ಮೇಲೆ ಹಲ್ಲೆಗೆ ಯತ್ನ- ರೌಡಿಶೀಟರ್ ಕಾಲಿಗೆ ಗುಂಡೇಟು

Public TV
1 Min Read
OLANGA

ಶಿವಮೊಗ್ಗ: ಪೊಲೀಸರ (Police) ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿಶೀಟರ್ ಒಬ್ಬನಿಗೆ ಪೊಲೀಸರು ಬೆಳ್ಳಂಬೆಳಗ್ಗೆ ಗುಂಡೇಟು ನೀಡಿದ್ದಾರೆ.

ಮಂಜುನಾಥ ಅಲಿಯಾಸ್ ಓಲಂಗ ಎಂಬಾತ ಗುಂಡೇಟು ತಿಂದ ಆರೋಪಿಯಾಗಿದ್ದಾನೆ. ಮಹಜರು ವೇಳೆ ಆರೋಪಿ ವ್ಯಕ್ತಿಯೊಬ್ಬರಿಗೆ ಇರಿದಿದ್ದ ಕತ್ತಿಯನ್ನೇ ಬಳಸಿ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಎಚ್ಚರಿಕೆ ನೀಡಿ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಇಷ್ಟಾದರೂ ಆರೋಪಿ ಮಾತು ಕೇಳದೆ ಪೊಲೀಸ್ ಸಿಬ್ಬಂದಿ ರವಿ ಎಂಬವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್‍ಪೆಕ್ಟರ್ ಸಿದ್ದೇಗೌಡ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಯಾಣಿಸ್ತಿದ್ದ ಕಾರು ಅಪಘಾತ

ಓಲಂಗ ಕಳೆದ ಮೂರು ದಿನಗಳ ಹಿಂದೆ ಫ್ರೀಡಂ ಪಾರ್ಕ್ ಬಳಿ ಶಶಿ ಎಂಬವರಿಗೆ ಚಾಕು ಇರಿದಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಇಂದು (ಗುರುವಾರ) ಮುಂಜಾನೆ ಸ್ಥಳ ಮಹಜರು ನಡೆಸಲು ಕರೆದೊಯ್ದಾಗ ಈ ಘಟನೆ ನಡೆದಿದೆ.

ಗಾಯಗೊಂಡ ಪೊಲೀಸ್ ಸಿಬ್ಬಂದಿ ರವಿ ಹಾಗೂ ಗುಂಡೇಟಿನಿಂದ ಗಾಯಗೊಂಡ ಆರೋಪಿ ಓಲಂಗನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಶಬರಿಮಲೆ ಅಯ್ಯಪ್ಪ ಭಕ್ತರಿದ್ದ ಕಾರು ಅಪಘಾತ _ ಓರ್ವ ಸಾವು, ಮೂವರು ಗಂಭೀರ

Share This Article