ನವದೆಹಲಿ: ಭಾರತದ ವಸಾಹತುಶಾಹಿ ಯುಗದ ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ ಮೂರು ನಿರ್ಣಾಯಕ ಮಸೂದೆಗಳನ್ನು (Criminal Code Bills) ಇಂದು (ಬುಧವಾರ) ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.
ವಿಪಕ್ಷಗಳ ಕೆಲವೇ ಸದಸ್ಯರ ಉಪಸ್ಥಿತಿಯಲ್ಲಿ ಅವರ ವಿರೋಧದ ಭಾರತೀಯ ನ್ಯಾಯ (ಎರಡನೇ) ಸಂಹಿತಾ- 2023, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತಾ- 2023 ಮತ್ತು ಭಾರತೀಯ ಸಾಕ್ಷಿ (ಎರಡನೇ) ಮಸೂದೆ- 2023 ವಿಧೇಯಕಗಳಿಗೆ ಲೋಕಸಭೆ ಅನುಮೋದನೆ ನೀಡಿದೆ. ಇದನ್ನೂ ಓದಿ: ರಾಜ್ಯಕ್ಕೆ ಬರಗಾಲ ಪರಿಹಾರ ಬಿಡುಗಡೆ ವಿಚಾರವಾಗಿ ಡಿ.23ಕ್ಕೆ ಕೇಂದ್ರದ ಸಭೆ: ಕೃಷ್ಣಬೈರೇಗೌಡ
Advertisement
Advertisement
ಈ ಕುರಿತ ಚರ್ಚೆಗೆ ಉತ್ತರಿಸಿದ ಗೃಹಮಂತ್ರಿ ಅಮಿತ್ ಶಾ, ಈ ಮಸೂದೆಗಳನ್ನು ಜಾರಿಗೆ ತರುತ್ತಿರುವುದು ಶಿಕ್ಷಿಸಲು ಅಲ್ಲ. ನ್ಯಾಯ ನೀಡುವುದಕ್ಕೆ. ತ್ವರಿತ ನ್ಯಾಯದಾನವೇ ನಮ್ಮ ಗುರಿ. ಈ ಮಸೂದೆಗಳಲ್ಲಿ ಡಿಜಿಟಲ್, ಎಲೆಕ್ಟ್ರಾನಿಕ್ ಎವಿಡೆನ್ಸ್‌ಗಳನ್ನು ಸಾಕ್ಷ್ಯವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಕಾಯ್ದೆಗಳು ಮುಂದಿನ ನೂರು ವರ್ಷ ದೇಶದ ನ್ಯಾಯ ಪ್ರಕ್ರಿಯೆಗೆ ಉಪಯೋಗವಾಗುತ್ತವೆ ಎಂದು ತಿಳಿಸಿದ್ದಾರೆ.
Advertisement
ಲೋಕಸಭಾ ಭದ್ರತಾ ಉಲ್ಲಂಘನೆಯ ವಿರುದ್ಧ ಪ್ರತಿಭಟನೆಯ ನಂತರ 143 ವಿರೋಧ ಪಕ್ಷದ ಸದಸ್ಯರನ್ನು ಅಮಾನತುಗೊಳಿಸಿದ ಕಾರಣ ಯಾವುದೇ ಮಹತ್ವದ ಚರ್ಚೆಯಿಲ್ಲದೆ ಕಾನೂನುಗಳನ್ನು ಅಂಗೀಕರಿಸಲಾಯಿತು. ಇದನ್ನೂ ಓದಿ: ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಆಯ್ಕೆ ಕಸರತ್ತು; 2-3 ದಿನದಲ್ಲಿ ಹೈಕಮಾಂಡ್ ತೀರ್ಮಾನ ಮಾಡಲಿದೆ: ಸಿದ್ದರಾಮಯ್ಯ
Advertisement
ಹೊಸ ಕಾನೂನು ಸಂಹಿತೆಗಳಲ್ಲಿ ಏನಿದೆ?
* ಹಿಟ್ & ರನ್‌ಗೆ 10 ವರ್ಷ ಜೈಲು
* ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ರೆ ಶಿಕ್ಷೆ ಪ್ರಮಾಣ ಇಳಿಕೆ
* ಗುಂಪು ದಾಳಿಗೆ ಗಲ್ಲು ಶಿಕ್ಷೆ/ಏಳು ವರ್ಷ ಜೈಲು ಶಿಕ್ಷೆ
* ಅಪ್ರಾಪ್ತೆ ಮೇಲಿನ ಗ್ಯಾಂಗ್‌ರೇಪ್ – ಜೀವಾವಧಿ ಶಿಕ್ಷೆ
* ಗ್ಯಾಂಗ್‌ರೇಪ್‌ನಿಂದ ಅಪ್ರಾಪ್ತೆ ಸಾವು – ಗಲ್ಲು ಶಿಕ್ಷೆ
* ದೇಶದ್ರೋಹ – ಏಳು ವರ್ಷ ಜೈಲು
* ಅಪರಾಧಿಗಳು ವಿದೇಶಕ್ಕೆ ಎಸ್ಕೇಪ್ ಆದ್ರೆ, 90 ದಿನದಲ್ಲಿ ಶರಣಾಗಬೇಕು
* ಇಲ್ಲದಿದ್ದಲ್ಲಿ ಅವರ ಪರವಾಗಿ ಸರ್ಕಾರ ವಕೀಲರನ್ನು ನೇಮಿಸುತ್ತೆ. ಕೋರ್ಟ್ ತೀರ್ಪು ಪ್ರಕಟಿಸುತ್ತೆ
* ಅಂತಹ ಅಪರಾಧಿಗಳನ್ನು ವಿದೇಶದಿಂದ ಕರೆತಂದು ಗಲ್ಲು ಶಿಕ್ಷೆ
* ಮಹಿಳೆಯರಿಗೆ ಇ-ಎಫ್‌ಐಆರ್ ನಮೂದು ಮಾಡಿಕೊಳ್ಳುವ ಅವಕಾಶ
* ಯಾರು ಬೇಕಿದ್ರೂ ಎಲ್ಲಿಂದ ಆದ್ರೂ ಝೀರೋ ಎಫ್‌ಐಆರ್ ಹಾಕಬಹುದು
* 24 ಗಂಟೆಗಳಲ್ಲಿ ಸಂಬಂಧಿಸಿದ ಠಾಣೆಗೆ ಕೇಸ್ ವರ್ಗಾಯಿಸಿಕೊಳ್ಳಬಹುದು
* ಸಾಕ್ಷ್ಯವಿಲ್ಲದೇ ಅರೆಸ್ಟ್ ಮಾಡಿ ಠಾಣೆಯಲ್ಲಿ ಯಾರನ್ನು ಇರಿಸುವಂತಿಲ್ಲ
* ಅರೆಸ್ಟ್ ಆದವರ ವಿವರ ಕುಟುಂಬಸ್ಥರಿಗೆ ತಲುಪಿಸಲು ಅಧಿಕಾರಿ ನೇಮಕ
* ಏಳು ವರ್ಷ ಶಿಕ್ಷೆ ಬೀಳುವ ಪ್ರಕರಣಗಳಲ್ಲಿ ಫೊರೆನ್ಸಿಕ್ ಟೀಂ ತನಿಖೆ ಕಡ್ಡಾಯ
* ಅಪರಾಧ ವೇಳೆ ಸಿಕ್ಕಿಬಿದ್ದ ವಾಹನ – 30 ದಿನದಲ್ಲಿ ಕೋರ್ಟ್ ಮೂಲಕ ಮಾರಾಟ