ಪ್ರಮೋದ್‌ ಮುತಾಲಿಕ್‌ಗೆ ಕಾಸಿಗಿಂತ ಕೇಸೇ ಜಾಸ್ತಿ

Public TV
1 Min Read
Pramod Muthalik

– ಮುತಾಲಿಕ್‌ ಅಫಿಡವಿಟ್‌ನಲ್ಲಿ ಮಾಹಿತಿ ಬಹಿರಂಗ

ಉಡುಪಿ: ಕಾರ್ಕಳ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶ್ರೀರಾಮಸೇನೆ (Sri Ram Sena) ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ (Pramod Muthalik) ಮಂಗಳವಾರ ನಾಮಪತ್ರ ಸಲ್ಲಿಸಿದ್ದು, ಆಸ್ತಿ ವಿವರ ಘೋಷಿಸಿದ್ದಾರೆ.

Pramod Muthalik 2

ಮುತಾಲಿಕ್‌ ಅವರ ಅಫಿಡವಿಟ್‌ನಲ್ಲಿ ಕಾಸಿಗಿಂತ ಕೇಸೇ ಜಾಸ್ತಿಯಿರುವ ಮಾಹಿತಿ ಬಹಿರಂಗಗೊಂಡಿದೆ. ಪ್ರಮೋದ್ ಮತಾಲಿಕ್ ಬಳಿ ಸ್ಥಿರಾಸ್ತಿ, ವಾಹನ, ಸಾಲ ಇಲ್ಲ. ಮುತಾಲಿಕ್ ಕೈಯಲ್ಲಿ 10,500 ರೂ. ನಗದು, ಎರಡು ಬ್ಯಾಂಕುಗಳಲ್ಲಿ 2,63,500 ರೂ. ಇದೆ ಎಂದು ಘೋಷಿಸಿಕೊಂಡಿದ್ದಾರೆ. ಇದನ್ನೂ ಓದಿ: ರಾಮನಗರದಲ್ಲಿ ಘಟಾನುಘಟಿ ನಾಯಕರಿಂದ ನಾಮಪತ್ರ ಸಲ್ಲಿಕೆ – ಕುಬೇರರ ಆಸ್ತಿ ಎಷ್ಟಿದೆ ಗೊತ್ತಾ?

Pramod Muthalik 1

ರಾಜ್ಯದ 7 ಠಾಣೆಗಳಲ್ಲಿ ಸೌಹಾರ್ದಕ್ಕೆ ಧಕ್ಕೆ ಕೇಸು ದಾಖಲಾಗಿದೆ. ಪ್ರಚೋದನಾಕಾರಿ ಭಾಷಣ ಮತ್ತು ಸಶಸ್ತ್ರ ಕಾಯ್ದೆ ಉಲ್ಲಂಘನೆ, ಮಾನನಷ್ಟ ಮೊಕದ್ದಮೆ, ಜೀವ ಬೆದರಿಕೆ, ಧರ್ಮಗಳ ನಡುವೆ ದ್ವೇಷ ಭಾವನೆ, ಧಾರ್ಮಿಕ ಭಾವನೆಗೆ ಧಕ್ಕೆ, ಅವಾಚ್ಯ ಶಬ್ದಗಳಿಂದ ನಿಂದನೆ, ಕೋಮು ಗಲಭೆ, ಜೀವ ಬೆದರಿಕೆ, ಪ್ರಚೋದನಕಾರಿ ಹೇಳಿಕೆ, ಅವಹೇಳನ, ಆದೇಶ ಉಲ್ಲಂಘನೆ ಕೇಸ್‌ಗಳು ದಾಖಲಾಗಿದೆ ಎಂದು ಆಯೋಗಕ್ಕೆ (Election Commission) ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ಬೆನ್ನಮೇಲೆ ಗುದ್ದಿದ ಭಾರ ನನ್ನ ಮೇಲಿದೆ; ಶಾಸಕನಾಗುವುದಕ್ಕಿಂತ ಪ್ರಧಾನಿ ಪ್ರೀತಿ ಮುಖ್ಯ – ರಾಮದಾಸ್

Share This Article