ಬೆಂಗಳೂರು: ಮಾಜಿ ಸಚಿವ, ಗಣಧಣಿ ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಅಕ್ರಮ ಅದಿರು ಸಾಗಾಣೆ ಪ್ರಕರಣದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
2009-10 ರ ಆದಾಯ ತೆರಿಗೆ ವಂಚಿಸಿ ಸಾವಿರಾರು ಟನ್ಗಟ್ಟಲೇ ಅದಿರು ಸಾಗಿಸಿದ ಆರೋಪದ ಮೇಲೆ ಜನಾರ್ದನ ರೆಡ್ಡಿ ನಿವಾಸ, ಕಚೇರಿ ಸೇರಿ ಐಟಿ ಇಲಾಖೆ ಹಲವೆಡೆ ದಾಳಿ ನಡೆಸಿತ್ತು. ಈ ಬಗ್ಗೆ ಕೆಲವೊಂದು ದಾಖಲಾತಿ, ಡಿಜಿಟಲ್ ಸಾಕ್ಷ್ಯ ಲಭ್ಯವಾಗಿತ್ತು. ಈ ಬಗ್ಗೆ, ಖಾಸಗಿ ದೂರು ದಾಖಲಾಗಿತ್ತು.
Advertisement
Advertisement
ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯಕ್ಕೆ ಎಸ್ಐಟಿ ತಂಡ, ತನಿಖೆ ವೇಳೆ ಬೇರೊಂದು ಕಂಪನಿಯಕ್ರಮವಾಗಿದೆ ಅಂತ ತಿಳಿಸಿತ್ತು. ಹೀಗಾಗಿ ಜನಾರ್ದನ ರೆಡ್ಡಿ ಸೇರಿದಂತೆ ಪ್ರಕರಣದಲ್ಲಿರುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚಿಸಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಗುಂಡಿ ಮುಚ್ಚದ ಬಿಬಿಎಂಪಿಗೆ ತರಾಟೆ – ಬೆಸ್ಕಾಂ, ಜಲ ಮಂಡಳಿಗೂ ಹೈಕೋರ್ಟ್ ಚಾರ್ಜ್