ನವದೆಹಲಿ: ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ನಡೆಸಿದ ಇತ್ತೀಚಿನ ವಿಶ್ಲೇಷಣೆಯಲ್ಲಿ ಭಾರತದಾದ್ಯಂತ ವಿವಿಧ ರಾಜ್ಯಗಳ ವಿಧಾನಸಭೆಯ ಶಾಸಕರಲ್ಲಿ (MLA)ಸುಮಾರು 44% ರಷ್ಟು ಶಾಸಕರು ತಮ್ಮ ಮೇಲೆ ಕ್ರಿಮಿನಲ್ ಕೇಸ್‌ಗಳು (Criminal Case) ಇರುವುದಾಗಿ ಘೋಷಿಸಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ.
ರಾಷ್ಟ್ರವ್ಯಾಪಿ ರಾಜ್ಯ ವಿಧಾನಸಭೆಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಸ್ತುತ ಶಾಸಕರು ಸಲ್ಲಿಸಿರುವ ಪ್ರಮಾಣಪತ್ರವನ್ನು ಪರಿಶೀಲಿಸಿದ ಎಡಿಆರ್ ಈ ಮಾಹಿತಿಗಳನ್ನು ತಿಳಿಸಿದೆ.
Advertisement
Advertisement
ಇತ್ತೀಚಿನ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೂ ಮೊದಲು ಶಾಸಕರು ಸಲ್ಲಿಸಿರುವ ಡೇಟಾಗಳನ್ನು ಹೊರತೆಗೆಯಲಾಗಿದೆ. 28 ರಾಜ್ಯ ವಿಧಾನಸಭೆಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ 4,033 ವ್ಯಕ್ತಿಗಳ ಪೈಕಿ ಒಟ್ಟು 4,001 ಶಾಸಕರನ್ನು ಈ ವಿಶ್ಲೇಷಣೆ ಒಳಗೊಂಡಿದೆ.
Advertisement
ವಿಶ್ಲೇಷಿಸಿದ ಶಾಸಕರಲ್ಲಿ 1,136 ಎಂದರೆ 28% ರಷ್ಟು ಜನರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳು ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಇದರಲ್ಲಿ ಕೊಲೆ, ಕೊಲೆ ಯತ್ನ, ಅಪಹರಣ, ಮಹಿಳೆಯರ ವಿರುದ್ಧದ ಅಪರಾಧಗಳು ಸೇರಿದಂತೆ ಇತರ ಆರೋಪಗಳೂ ಸೇರಿವೆ.
Advertisement
ರಾಜ್ಯವಾರು ನೋಡುವುದಾದರೆ ಕೇರಳದಲ್ಲಿ 135 ಶಾಸಕರ ಪೈಕಿ 95 ಶಾಸಕರು ಎಂದರೆ 70% ನಷ್ಟು ಶಾಸಕರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಅದೇ ರೀತಿ ಬಿಹಾರದಲ್ಲಿ 242 ಶಾಸಕರಲ್ಲಿ 161 (67%), ದೆಹಲಿಯಲ್ಲಿ 70 ಶಾಸಕರಲ್ಲಿ 44 (63%), ಮಹಾರಾಷ್ಟ್ರದಲ್ಲಿ 284 ಶಾಸಕರಲ್ಲಿ 175 (62%), ತೆಲಂಗಾಣದಲ್ಲಿ 118 ಶಾಸಕರ ಪೈಕಿ 72 (61%), ಮತ್ತು ತಮಿಳುನಾಡಿನಲ್ಲಿ 224 ಶಾಸಕರಲ್ಲಿ 134 (60%) ತಮ್ಮ ಅಫಿಡವಿಟ್‌ಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಇದನ್ನೂ ಓದಿ: Chandrayaan-3 ಬಾಹ್ಯಾಕಾಶ ನೌಕೆಯು ಸುರಕ್ಷಿತವಾಗಿದೆ: ಇಸ್ರೋ
ಇನ್ನು ದೆಹಲಿಯಲ್ಲಿ 70 ಶಾಸಕರಲ್ಲಿ 37 (53%), ಬಿಹಾರದಲ್ಲಿ 242 ಶಾಸಕರಲ್ಲಿ 122 (50%), ಮಹಾರಾಷ್ಟ್ರದಲ್ಲಿ 284 ಶಾಸಕರಲ್ಲಿ 114 (40%), ಜಾರ್ಖಂಡ್‌ನಲ್ಲಿ 79 ಶಾಸಕರಲ್ಲಿ 31 (39%), ತೆಲಂಗಾಣದಲ್ಲಿ 118 ಶಾಸಕರಲ್ಲಿ 46 (39%), ಮತ್ತು ಉತ್ತರ ಪ್ರದೇಶದಲ್ಲಿ 403 ಶಾಸಕರಲ್ಲಿ 155 (38%) ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿಕೊಂಡಿದ್ದಾರೆ ಎಂದು ಎಡಿಆರ್ ತಿಳಿಸಿದೆ.
ಆಸ್ತಿ ವಿವರ: ಕ್ರಿಮಿನಲ್ ಕೇಸ್‌ಗಳು ಮಾತ್ರವಲ್ಲದೇ ಶಾಸಕರ ಆಸ್ತಿಯ ವಿವರವನ್ನೂ ಎಡಿಆರ್ ಕಲೆಹಾಕಿದೆ. ಕರ್ನಾಟಕದಲ್ಲೇ ಅತಿ ಹೆಚ್ಚು ಶ್ರೀಮಂತ ಶಾಸಕರು ಇದ್ದಾರೆ ಎಂಬುದು ವಿಶ್ಲೇಷಣೆಯಲ್ಲಿ ತಿಳಿದುಬಂದಿದೆ. ಕರ್ನಾಟಕದ 223 ಶಾಸಕರ ಸರಾಸರಿ ಆಸ್ತಿಯ ಮೌಲ್ಯ 64.39 ಕೋಟಿ ರೂ. ಆಗಿದ್ದು, ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಆಂಧ್ರಪ್ರದೇಶ 174 ಶಾಸಕರಿಗೆ 28.24 ಕೋಟಿ ರೂ., ಮಹಾರಾಷ್ಟ್ರ 284 ಶಾಸಕರಿಗೆ 23.51 ಕೋಟಿ ರೂ.,ಇದೆ. ಇದನ್ನೂ ಓದಿ: ಖರೀದಿ ಹಾಲಿಗೆ ಲೀಟರ್‌ಗೆ 1.75 ರೂ. ಕಡಿತ ಮಾಡಿದ ಮನ್ಮುಲ್
Web Stories