Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವರ್ಗಾವಣೆ, ಪ್ರಮೋಷನ್‌ಗಾಗಿ ಗಿಳಿಶಾಸ್ತ್ರದ ಮೊರೆ – 35 ಲಕ್ಷ ಚಿನ್ನಾಭರಣ ಪಡೆದು ಎಸ್ಕೇಪ್ ಆದ ಗಿಳಿರಾಮ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ವರ್ಗಾವಣೆ, ಪ್ರಮೋಷನ್‌ಗಾಗಿ ಗಿಳಿಶಾಸ್ತ್ರದ ಮೊರೆ – 35 ಲಕ್ಷ ಚಿನ್ನಾಭರಣ ಪಡೆದು ಎಸ್ಕೇಪ್ ಆದ ಗಿಳಿರಾಮ!

Bengaluru City

ವರ್ಗಾವಣೆ, ಪ್ರಮೋಷನ್‌ಗಾಗಿ ಗಿಳಿಶಾಸ್ತ್ರದ ಮೊರೆ – 35 ಲಕ್ಷ ಚಿನ್ನಾಭರಣ ಪಡೆದು ಎಸ್ಕೇಪ್ ಆದ ಗಿಳಿರಾಮ!

Public TV
Last updated: March 10, 2026 2:58 pm
Public TV
Share
1 Min Read
Parrot astrology
SHARE

ಬೆಂಗಳೂರು: ವರ್ಗಾವಣೆ ಹಾಗೂ ಪ್ರೊಮೋಷನ್‌ಗಾಗಿ ಗಿಳಿಶಾಸ್ತ್ರದ ಮೋಡಿಗೆ ಮರುಳಾದ ನಗರ ಅಧಿಕಾರಿಯೊಬ್ಬರು 35 ಲಕ್ಷ ರೂ. ಚಿನ್ನಾಭರಣ ಕಳೆದುಕೊಂಡು ಕಣ್ಣೀರು ಹಾಕ್ತಿದ್ದಾರೆ. ಪೂಜೆ ನೆಪದಲ್ಲಿ ಚಿನ್ನಾಭರಣ ಪಡೆದ ಗಿಳಿರಾಮ ಐಟಿ ಅಧಿಕಾರಿಗೆ ಮಕ್ಮಲ್ ಟೋಪಿ ಹಾಕಿದ್ದಾನೆ.

ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಇನ್ ಕಮ್ ಟ್ಯಾಕ್ಸ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರಿಗೆ, ಕಳೆದ ಡಿಸೆಂಬರ್ ತಿಂಗಳಿನಲ್ಲಿ ರಸ್ತೆಯಲ್ಲಿ ತೆರಳುತ್ತಿದ್ದಾಗ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಎಂಬಾತನ ಪರಿಚಯವಾಗಿತ್ತು. ಭಾರತಿನಗರದ ಶ್ರೀ ಸರ್ಕಲ್ ಬಳಿ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್, ನಿಮ್ಮ ಮುಖ ನೋಡಿ ಜಾತಕ ಭವಿಷ್ಯ ಹೇಳುತ್ತೇನೆ, ನಿಮಗೆ ಒಳ್ಳೆಯದಾಗುತ್ತದೆ ಎಂದು ನಂಬಿಸಿದ್ದ. ಜೀವನ ಸುಧಾರಣೆಗಾಗಿ ದೊಡ್ಡ ಪೂಜೆ ಮಾಡಿಸಬೇಕೆಂದು ಹೇಳಿ, ಮೊದಲು ಐವತ್ತು ಸಾವಿರ ರೂ. ಹಣ ಪಡೆದು ಪೂಜೆ ಮಾಡಿದ್ದಾನೆ. ಇದನ್ನೂ ಓದಿ: ಒಬ್ಬಳಿಗಾಗಿ ಸ್ನೇಹಿತರ ಮಧ್ಯೆ ಕಿತ್ತಾಟ – ಚಾಕು ಇರಿದು ಕೊಂದೇ ಬಿಟ್ಟ!

ಪೂಜೆಯ ನಂತರವೂ ಪದೇ ಪದೇ ಐಟಿ ಅಧಿಕಾರಿಗೆ ಕರೆ ಮಾಡುತ್ತಿದ್ದ ಶೇಖರ್, ಅವರ ವರ್ಗಾವಣೆ ವಿಚಾರವಾಗಿ ಮಾತನಾಡಿದ್ದಾನೆ. ವರ್ಗಾವಣೆ ಕುರಿತು ಗಿಳಿಶಾಸ್ತ್ರ ಕೇಳಿದಾಗ, ನಿಮ್ಮ ವರ್ಗಾವಣೆಗಾಗಿ ಮತ್ತೊಂದು ದೊಡ್ಡ ಪೂಜೆಯನ್ನು ಮಾಡಬೇಕು, ಅದಕ್ಕಾಗಿ ಮನೆಯಲ್ಲಿರುವ ಚಿನ್ನಾಭರಣಗಳನ್ನು ತೆಗೆದುಕೊಂಡು ಬಾ ಎಂದು ಹೇಳಿದ್ದಾನೆ. ಶೇಖರ್ ಮಾತನ್ನು ನಂಬಿದ ಐಟಿ ಅಧಿಕಾರಿ, 35 ಲಕ್ಷ ರೂ. ಮೌಲ್ಯದ 194 ಗ್ರಾಂ ಚಿನ್ನಾಭರಣ ಮತ್ತು ಒಂದು ಕೆಜಿ 300 ಗ್ರಾಂ ಬೆಳ್ಳಿಯನ್ನು ಆತನಿಗೆ ನೀಡಿದ್ದಾರೆ.

ಒಂದು ದಿನದಲ್ಲಿ ಚಿನ್ನಾಭರಣಗಳನ್ನು ವಾಪಸ್ ನೀಡುವುದಾಗಿ ಹೇಳಿದ್ದ ಶೇಖರ್, ಇನ್ನೂ ಪೂಜೆ ಮುಗಿದಿಲ್ಲ ನಾಳೆ-ನಾಡಿದ್ದು ಎಂದು ಸತಾಯಿಸುತ್ತಾ ಒಂದು ವಾರಗಳ ಕಾಲ ಅಧಿಕಾರಿಗಳನ್ನು ಅಲೆಸಿದ್ದಾನೆ. ಕೊನೆಗೆ ಐಟಿ ಅಧಿಕಾರಿ ಭಾರತಿನಗರದ ಶ್ರೀ ಸರ್ಕಲ್ ಬಳಿ ಹೋದಾಗ, ಅಲ್ಲಿಂದ ಗಿಳಿಶಾಸ್ತ್ರ ಹೇಳುವನು ನಾಪತ್ತೆಯಾಗಿದ್ದ.

ಮೋಸಹೋಗಿರುವುದರ ಅರಿವಾಗಿ ಐಟಿ ಅಧಿಕಾರಿ ತಕ್ಷಣ ಭಾರತಿನಗರ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಭಾರತಿನಗರ ಪೊಲೀಸರು ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್‌ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಕಾರಿಗೆ ಗುದ್ದಿದ ಕಂಟೇನರ್ ಚಾಲಕ – ಮಗು ಸಾವು

TAGGED:bengalurucrimeIT OfficerParrot Astrologer
Share This Article
Facebook Whatsapp Whatsapp Telegram

Cinema news

The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories
Dhurandhar 2 Trailer
ದುರಂಧರ್ 2 ಟ್ರೈಲರ್‌ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್
Bollywood Cinema Latest Top Stories

You Might Also Like

Ballary Train Letter to V Somanna
Bellary

ಬಳ್ಳಾರಿ-ಸಿರುಗುಪ್ಪ-ಸಿಂಧನೂರು ನೂತನ ರೈಲು ಮಾರ್ಗದ ಕೆಲಸ ಶೀಘ್ರವೇ ಆರಂಭಿಸಿ – ರಾಜ್ಯ ರೈಲ್ವೆ ಸಮತಿಯಿಂದ ಕೇಂದ್ರಕ್ಕೆ ಒತ್ತಾಯ

Public TV
By Public TV
3 minutes ago
why australia has banned mining in one of the worlds largest uranium deposits 3
Latest

ಯುರೇನಿಯಂ ಒಪ್ಪಂದದಿಂದ ಭಾರತಕ್ಕೇನು ಲಾಭ? – 1 ತುಂಡು ಲಕ್ಷಾಂತರ ಟನ್‌ ವಿದ್ಯುತ್‌ ಉತ್ಪಾದಿಸಬಲ್ಲದೇ?

Public TV
By Public TV
25 minutes ago
Auto Gas Price Haveri
Haveri

ಆಟೋ ಗ್ಯಾಸ್ ದರ ದಿಢೀರ್ ಹೆಚ್ಚಳ; ಆಟೋ ಚಾಲಕರ ಪರದಾಟ

Public TV
By Public TV
1 hour ago
Yogesh Doshi Dubai
Latest

ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿರೋ ಭಾರತೀಯರ ನೆರವಿಗೆ ನಿಂತ ಉದ್ಯಮಿ – 64 ಯೂನಿಟ್‌ ಅಪಾರ್ಟ್‌ಮೆಂಟ್‌ ತೆರೆದು ಸಹಾಯ

Public TV
By Public TV
1 hour ago
lovers attempt suicide by jumping into tungabhadra river rescued
Crime

ತುಂಗಾಭದ್ರ ನದಿಗೆ ಹಾರಿ ಅತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು – ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ

Public TV
By Public TV
2 hours ago
TB Dam
Bellary

ತುಂಗಭದ್ರಾ ಜಲಾಶಯದ 15 ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?