ದಾವಣಗೆರೆ: ಪತ್ನಿಯ ಪ್ರಿಯಕರನನ್ನು ಕೊಲೆಗೈದ ವ್ಯಕ್ತಿಯನ್ನು ಕೊಲೆಯಾದ ಒಂದೇ ಗಂಟೆಯಲ್ಲಿ ದಾವಣಗೆರೆ ಪೊಲೀಸ್ ಇಲಾಖೆಯ ಕ್ರೈಂ ಡಾಗ್ (Crime Dog) ತಾರಾ ಪತ್ತೆ ಹಚ್ಚಿರುವ ಘಟನೆ ಹೊನ್ನೂರು (Honnur) ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಚಿತ್ರದುರ್ಗ (Chitradurga) ಜಿಲ್ಲೆಯ ಹೆಗಡೆಹಾಳ್ ಗ್ರಾಮದ ಶಿವಕುಮಾರ್(28) ಕೊಲೆಯಾದ ಯುವಕ. ಹೊನ್ನೂರು ಗೊಲ್ಲರಹಟ್ಟಿಯ ಜಯ್ಯಪ್ಪ ಕೊಲೆ ಮಾಡಿದ ಆರೋಪಿ. ಇದನ್ನೂ ಓದಿ: ಅಣ್ಣಮ್ಮ ದೇವಿಗೆ ಹರಕೆ ಸಲ್ಲಿಸಿದ ದರ್ಶನ್ ಪತ್ನಿ
ಶಿವಕುಮಾರ್, ಜಯ್ಯಪ್ಪನ ಪತ್ನಿ ಪರಿಮಳಲನ್ನು ಪ್ರೀತಿಸುತ್ತಿದ್ದ. ಮದುವೆಯಾದ ನಂತರವೂ ಕೂಡ ಪರಿಮಳ ಹಾಗೂ ಶಿವಕುಮಾರ್ ಸಂಬಂಧ ಹೊಂದಿದ್ದರು. ಶಿವಕುಮಾರ್, ಪರಿಮಳಳನ್ನು ಭೇಟಿಯಾಗಲು ಹೊನ್ನೂರು ಗೊಲ್ಲರಹಟ್ಟಿ ಬಳಿ ಇರುವ ಜಮೀನಿಗೆ ಬಂದಿದ್ದ. ಇಬ್ಬರು ಜೊತೆಗಿದ್ದಿದ್ದು ಕಂಡು ಕೋಪಗೊಂಡ ಜಯ್ಯಪ್ಪ, ಶಿವಕುಮಾರ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ. ಇದನ್ನೂ ಓದಿ: ಮುಸ್ಲಿಂ ಯುವತಿ, ಹಿಂದೂ ಯುವಕನ ಮೇಲೆ ನೈತಿಕ ಪೊಲೀಸ್‌ಗಿರಿ ಪ್ರಕರಣ – ಅಪ್ರಾಪ್ತ ಸೇರಿ ಐವರ ಬಂಧನ
ಕೂಡಲೇ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು (Davanagere Police) ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಕ್ರೈಂ ಡಾಗ್ ತಾರಾ ಆರೋಪಿಯ ಜಾಡು ಹಿಡಿದು ಹೊರಟಿತ್ತು. ಕೊಲೆ ಆರೋಪಿ ಮನೆ ಮುಂದೆ ನಿಂತ ಕ್ರೈಂ ಡಾಗ್ ತಾರಾ, ಕೊಲೆಯಾದ ಒಂದು ಗಂಟೆಯಲ್ಲೇ ಆರೋಪಿಯನ್ನು ಪತ್ತೆ ಮಾಡಿದೆ. ಇದನ್ನೂ ಓದಿ: It Is My Territory – ಉಗ್ರಂ ಶೈಲಿಯಲ್ಲಿ ವೃತ್ತ ಬರೆದು ರಾಹುಲ್ ಸಂಭ್ರಮ
ಈ ವಿಚಾರವಾಗಿ ಕೂಡಲೇ ಪತ್ನಿಯನ್ನು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಭೇದಿಸಿದ ಕ್ರೈಂ ಡಾಗ್ ತಾರಾ ಹಾಗೂ ಗ್ರಾಮಾಂತರ ಠಾಣೆ ಪೊಲೀಸರ ಕಾರ್ಯಕ್ಕೆ ಎಸ್ ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.