ಬ್ರಿಸ್ಬೆನ್: ಗುರುವಾರ ಇಂಟರ್‍ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಕ್ರಿಕೆಟ್ ಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿತ್ತು. ನಿಯಮ ಜಾರಿ ಮಾಡಿ 24 ಗಂಟೆಯೊಳಗೆ ಆಸ್ಟ್ರೇಲಿಯಾದಲ್ಲಿ ಕ್ಲಬ್ ಕ್ರಿಕೆಟ್ ಆಟಗಾರರೊಬ್ಬರು ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ವಿಧಿಸಲಾಗಿದೆ.
ಹೌದು. ಆಸ್ಟ್ರೇಲಿಯಾದ ಕ್ಲಬ್ ಕ್ರಿಕೆಟ್‍ನಲ್ಲಿ ಕ್ವೀನ್ಸ್ ಲ್ಯಾಂಡ್ ಬುಲ್ಸ್ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಎಲೆವನ್ ತಂಡಗಳ ಮಧ್ಯೆ ಜೆಎಲ್‍ಟಿ ಕಪ್‍ನ ಏಕದಿನ ಪಂದ್ಯ ನಡೆಯುತ್ತಿತ್ತು. 26ನೇ ಓವರ್ ನ ಮೊದಲ ಎಸೆತವನ್ನು ಆಸ್ಟ್ರೇಲಿಯಾ ಎಲೆವನ್ ಆಟಗಾರ ಪರಮ್ ಉಪ್ಪಲ್ ಆಫ್ ಸೈಡ್ ಹೊಡೆದರು.
Advertisement
Advertisement
ಬಾಲ್ ಫಿಲ್ಡ್ ಮಾಡುತ್ತಿದ್ದ ಲ್ಯಾಬಸ್ಚ್ಯಾನ್ ಕೈಗೆ ಸಿಕ್ಕಿತ್ತು. ಆದರೆ ಲ್ಯಾಬಸ್ಟ್ಯಾನ್ ಕೈಯಿಂದ ಬಾಲ್ ಜಾರಿ ಹಿಂದಕ್ಕೆ ಹೋಗಿತ್ತು. ಈ ಸಂದರ್ಭದಲ್ಲಿ ಕೈಯಲ್ಲಿ ಬಾಲ್ ಇಲ್ಲದೇ ಇದ್ದರೂ ಬಾಲ್ ಇದೆ ಎಂದು ಬಿಂಬಿಸಲು ಥ್ರೋ ಮಾಡಿದ್ದಾರೆ. ಥ್ರೋ ಮಾಡಿದ್ದನ್ನು ನೋಡಿ ಬ್ಯಾಟ್ಸ್ ಮನ್ ಗಳು ಒಮ್ಮೆಲೆ ಪಿಚ್ ನಲ್ಲಿ ಓಡುವುದನ್ನು ನಿಲ್ಲಿಸಿದ್ದಾರೆ. ನಂತರ ಬಾಲ್ ಕೈಯಲ್ಲಿ ಇಲ್ಲದೇ ಸುಮ್ಮನೆ ಥ್ರೋ ಮಾಡಿದ್ದು ಎಂದು ತಿಳಿದು ಬ್ಯಾಟ್ಸ್ ಮನ್ ಗಳು ರನ್ ಓಡಿದ್ದಾರೆ.
Advertisement
ಬಾಲ್ ಇದೆ ಎಂದು ಮೋಸ ಮಾಡಿ ಐಸಿಸಿಯ ಹೊಸ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಆನ್‍ಫಿಲ್ಡ್‍ನಲ್ಲಿದ್ದ ಅಂಪೈರ್ ಗಳಿಬ್ಬರು ಮಧ್ಯೆ ಮಾತುಕತೆ ನಡೆದು ಕ್ವೀನ್ಸ್ ಲ್ಯಾಂಡ್ ಕ್ರಿಕೆಟ್ ತಂಡಕ್ಕೆ 5 ರನ್‍ಗಳ ದಂಡ ವಿಧಿಸಿತು. ಈ ಮಊಲಕ ಐಸಿಸಿ ಜಾರಿ ಮಾಡಿದ ಕೆಲವು ನಿಯಮಗಳಿಗೆ ವಿಶ್ವದಲ್ಲಿಯೇ ಮೊದಲ ಬಾರಿಗೆ ದಂಡ ವಿಧಿಸಿಕೊಂಡ ಮೊದಲ ತಂಡ ಎನ್ನುವ ಕುಖ್ಯಾತಿಗೆ ಕ್ವೀನ್ಸ್ ಲ್ಯಾಂಡ್ ತಂಡ ಪಾತ್ರವಾಗಿದೆ.
Advertisement
ಹೊಸ ನಿಯಮದ ಪ್ರಕಾರ ಸ್ಟ್ರೈಕರ್ ತಂಡದ ಬ್ಯಾಟ್ಸ್‍ಮನ್ ರನ್ ಓಡದಂತೆ ತಡೆಯಲು ಅಥವಾ ಮೋಸಗೊಳಿಸಲು ಯಾವುದೇ ಫಿಲ್ಡರ್ ಉದ್ದೇಶ ಪೂರ್ವಕವಾಗಿ ಪ್ರಯತ್ನ ಮಾಡುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘನೆಯಾದರೆ ವಿರುದ್ಧದ ತಂಡಕ್ಕೆ 5 ರನ್‍ಗಳನ್ನು ಕೊಡುವ ಅಧಿಕಾರ ಅಂಪೈರ್ ಗಳಿಗೆ ಇರುತ್ತದೆ.
ಬ್ಯಾಟ್ಸ್ ಮನ್‍ಗಳು ರನ್ ಓಡುವ ವೇಳೆ ಫಿಲ್ಡಿಂಗ್‍ನಲ್ಲಿರುವ ಯಾವೊಬ್ಬ ಆಟಗಾರನನ್ನು ಕೈಯಲ್ಲಿಲ್ಲದ ಬಾಲನ್ನು ಎಸೆಯಲು ಅಥವಾ ಭಯಪಡಿಸಲು ಯತ್ನಿಸಿದರೂ ನಿಯಮ ಉಲ್ಲಂಘನೆಯಾಗಿದೆ ಎಂದು ಪರಿಗಣಿಸಲಾಗುತ್ತದೆ.
ಆನ್‍ಫಿಲ್ಡ್‍ನಲ್ಲಿ ಆಟಗಾರರು ಏನಾದರೂ ಎದುರಾಳಿ ತಂಡದ ಆಟಗಾರರಿಗೆ ತೊಂದರೆ ಅಥವಾ ಅಂಪೈರ್ ನಿರ್ಣಯಕ್ಕೆ ಎದುರು ಮಾತನಾಡಿ ಆಕ್ರೋಷ ವ್ಯಕ್ತಪಡಿಸಿದರೆ 4ನೇ ಹಂತ ತಪ್ಪು ಎಂದು ತೀರ್ಮಾನಿಸಿ ಆ ಆಟಗಾರರನ್ನು ಮೈದಾನದಿಂದ ಹೊರಗೆ ಕಳುಹಿಸಬಹುದಾಗಿದೆ.
ಫುಟ್ ಬಾಲ್ ನಲ್ಲಿ ಹೇಗೆ ಕಠಿಣ ನಿಯಮಗಳಿದೆಯೋ ಅದೇ ರೀತಿಯ ಕೆಲ ಕಠಿಣ ನಿಮಯಗಳನ್ನು ಐಸಿಸಿ ಕಳೆದ ಗುರುವಾರ ಜಾರಿ ಮಾಡಿತ್ತು.