ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕ್ರಿಕೆಟಿಗ ಎಂಬ ಖ್ಯಾತಿಗೆ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 28ರಂದು ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಸೋತರೂ ರೋಹಿತ್ ಶರ್ಮಾ ದಾಖಲೆ ಮಾಡಿದ್ದಾರೆ.
Advertisement
ಈ ಪಂದ್ಯದಲ್ಲಿ 55 ಎಸೆತಗಳನ್ನು ಎದುರಿಸಿದ್ದ ರೋಹಿತ್ ಶರ್ಮಾ 5 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 65 ರನ್ ಗಳಿಸಿದ್ದರು. 5 ಸಿಕ್ಸರ್ ಗಳ ನೆರವಿನಿಂದ ರೋಹಿತ್ ಶರ್ಮಾ ಸಿಕ್ಸರ್ ಗಳ ಅರ್ಧ ಶತಕದ ಗಡಿ ದಾಟಿದರು. ಈ ಮೂಲಕ ಆಸೀಸ್ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಗೆ ಪಾತ್ರರಾದರು. ರೋಹಿತ್ ಶರ್ಮಾ ಒಟ್ಟು 27 ಪಂದ್ಯಗಳಲ್ಲಿ 53 ಸಿಕ್ಸರ್ ಬಾರಿಸಿದ್ದಾರೆ.
Advertisement
Advertisement
ಟಾಪ್ 10 ಸಿಕ್ಸರ್ಸ್: ಆಸ್ಟ್ರೇಲಿಯಾ ವಿರುದ್ಧ ಹೆಚ್ಚು ಸಿಕ್ಸರ್ ಬಾರಿಸಿ ರೋಹಿತ್ ಶರ್ಮಾ ಸೇರಿ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ಆಟಗಾರ ಇಯಾನ್ ಮಾರ್ಗನ್ 43 ಪಂದ್ಯಗಳಿಂದ 39 ಸಿಕ್ಸ್, ಭಾರತದ ಸಚಿನ್ ತೆಂಡುಲ್ಕರ್ 71 ಪಂದ್ಯಗಳಲ್ಲಿ 35, ನ್ಯೂಜಿಲೆಂಡ್ ತಂಡದ ಬ್ರೆಂಡನ್ ಮೆಕಲ್ಲಂ 47 ಪಂದ್ಯದಲ್ಲಿ 33, ಪಾಕಿಸ್ತಾನದ ಶಹೀದ್ ಆಫ್ರಿದಿ 45 ಪಂದ್ಯಗಳಿಂದ 28 ಸಿಕ್ಸರ್, ಇಂಡಿಯಾದ ಮಹೇಂದ್ರ ಸಿಂಗ್ ಧೋನಿ 47 ಪಂದ್ಯಗಳಿಂದ 27, ವಿಂಡೀಸ್ ನ ಕೀರನ್ ಪೊಲಾರ್ಡ್ 21 ಪಂದ್ಯಗಳಿಂದ 27, ವಿಂಡೀಸ್ ನ ವಿಲಿಯನ್ ರಿಚಡ್ರ್ಸ್ 54 ಪಂದ್ಯಗಳಿಂದ 26, ಪಾಕಿಸ್ತಾನದ ವಸೀಂ ಅಕ್ರಂ 49 ಪಂದ್ಯಗಳಲ್ಲಿ 26, ನ್ಯೂಜಿಲೆಂಡ್ ನ ಮಾರ್ಟಿನ್ ಗಪ್ಟಿಲ್ 23 ಪಂದ್ಯಗಳಲ್ಲಿ 24 ಸಿಕ್ಸರ್ ಬಾರಿಸಿ ದಾಖಲೆ ಮಾಡಿದ್ದಾರೆ.